ಕೊಪ್ಪಳದಲ್ಲಿ ಎರಡೇ ಅಡಿಗೆ ಚಿಮ್ಮಿದ ಗಂಗಾಮಾತೆ: ನೋಡಲು ಮುಗಿಬಿದ್ದ ಜನತೆ!

By Kannadaprabha News  |  First Published Feb 8, 2020, 10:42 AM IST

ಜೀವಜಲದ ಸೆಲೆ ವೀಕ್ಷಣೆಗೆ ಮುಗಿಬಿದ್ದ ಜನತೆ| ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಹಗೇದಾಳದಲ್ಲಿ ಎರಡು ಆಳದಷ್ಟು ಚಿಮ್ಮಿದ ನೀರು|ಇದು ಪ್ರಕೃತಿಯಲ್ಲಿ ನಡೆದ ಅಚ್ಚರಿಯ ಸಂಗತಿ ಎಂದು ಅಚ್ಚರಿಪಟ್ಟ ವಿಜ್ಞಾನಿಗಳು|
 


ಯಲಬುರ್ಗಾ[ಫೆ.08]: ತಾಲೂಕಿನ ಹಗೇದಾಳ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ವಿಸ್ಮಯಕಾರಿ ಘಟನೆ ಶುಕ್ರವಾರ ಜರುಗಿದೆ. ಯಾವುದೇ ಬಾವಿ, ಕೆರೆ ನಿರ್ಮಾಣ ಮಾಡುವಾಗ ನೀರು ಉಕ್ಕಲು 1000ಕ್ಕೂ ಹೆಚ್ಚು ಆಳ ತೆಗೆಯಬೇಕಾಗುತ್ತದೆ. ಆದರೆ, ಹಗೇದಾಳ ಗ್ರಾಮದ ರೈತ ಸೋಮನಗೌಡ ಎಂಬುವವರ ಜಮೀನಿನಲ್ಲಿ ಕೇವಲ 2 ಅಡಿ ಆಳದಲ್ಲಿ ನೀರು ಚಿಮ್ಮಿದ ಘಟನೆ ನಡೆದಿದೆ. 

"

Tap to resize

Latest Videos

ಇದು ಪ್ರಕೃತಿಯಲ್ಲಿ ನಡೆದ ಅಚ್ಚರಿಯ ಸಂಗತಿಯಲ್ಲೊಂದು ಎಂದು ವಿಜ್ಞಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ಸ್ಥಳದ ಅಕ್ಕಪಕ್ಕ ಬಾವಿ, ಹಳ್ಳ, ಕೆರೆ ಇಲ್ಲದಿದ್ದರೂ ಜಮೀನಿನಲ್ಲಿರುವ ಬಂಡೆಗಲ್ಲನ್ನು ತೆಗೆಸುವಾಗ ಈ ಅಚ್ಚರಿಯ ಘಟನೆ ನಡೆದಿದೆ. ಇದನ್ನು ನೋಡಲು ಗ್ರಾಮದ ಜನರು ಮುಗಿಬಿದ್ದಿದ್ದಾರೆ. ರೈತ ಸೋಮನಗೌಡ ಅವರು ತಮ್ಮ ಜಮೀನನ್ನು ಸಮತಟ್ಟು ಮಾಡಿಸುತ್ತಿದ್ದ ಸಂದರ್ಭದಲ್ಲಿ ಹೊಲದಲ್ಲಿ ಇರುವ ಕಲ್ಲು ಬಂಡೆಯನ್ನು ಕೀಳಿಸುತ್ತಿರುವಾಗ ಕಲ್ಲಿನ ಕೆಳಗೆ ನೀರು ಚಿಮ್ಮಿದ್ದನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ನೀರನ್ನು ಕಂಡು ಗ್ರಾಮಸ್ಥರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ನೀರನ್ನು ಜನತೆ ತೆಗೆದುಕೊಂಡು ಹೋಗಿ ತಮ್ಮ ಮನೆಗಳಲ್ಲಿ ಹಾಕುತ್ತಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ಬಗ್ಗೆ ಮಾತನಾಡಿದ ರೈತ ಸೋಮನಗೌಡ ಗೌಡ್ರ ಅವರು, ನಮ್ಮ ಜಮೀನಿನಲ್ಲಿ ಈ ಹಿಂದೆ 11 ಬೋರ್ ವೆಲ್ ಕೊರೆಯಿಸಿದರೂ ಹನಿ ನೀರು ಲಭ್ಯವಾಗಿಲ್ಲ. ಆದರೆ, ಬೋರ್ ವೆಲ್ ಕೊರೆಯಿಸಿ ಸಾಕಷ್ಟು ಹಣ ಕಳೆದುಕೊಂಡು ಜೀವನವೇ ಸಾಕಾಗಿ ಹೋಗಿದೆ ಎನ್ನುವ ಪರಿಸ್ಥಿತಿಯಲ್ಲಿ ಹೆಂಡ್ರು, ಮಕ್ಳು ಮುಖ ನೋಡಿಕೊಂಡು ಜೀವನ ಸಾಗಿಸುತ್ತಿದ್ದೆನು. ಇದೀಗ ದಿಢೀರ್ ಆಗಿ ಗಂಗಾಮಾತೆ ಪ್ರತ್ಯಕ್ಷವಾಗಿರುವುದು ನನ್ನ ಕಷ್ಟ ಕಂಡು ಆ ದೇವರ ಪವಾಡ ಕೃಪೆಯಿಂದ ಏನೋ ಗಂಗಾಮಾತೆ ಒಲಿದಿದ್ದಾಳೆ ಎಂದು ಹೇಳಿದ್ದಾರೆ. 

click me!