ತುಂಬು ಗರ್ಭಿಣಿಯೊಬ್ಬರನ್ನು 108 ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಹಿಳೆ ವಾಹನದಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ಪಣಂಬೂರು ಎಂಬಲ್ಲಿ ಗುರುವಾರ ರಾತ್ರಿ ನಡೆದಿದೆ.
ಮಂಗಳೂರು(ಫೆ.08): ತುಂಬು ಗರ್ಭಿಣಿಯೊಬ್ಬರನ್ನು 108 ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಹಿಳೆ ವಾಹನದಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ಪಣಂಬೂರು ಎಂಬಲ್ಲಿ ಗುರುವಾರ ರಾತ್ರಿ ನಡೆದಿದೆ.
ಗರ್ಭಿಣಿ ಕುಳಾಯಿ ಮೂಲದವರಾಗಿದ್ದು, ಗುರುವಾರ ರಾತ್ರಿ 11 ಗಂಟೆ ವೇಳೆಗೆ ಹೆರಿಗೆ ನೋವು ಕಾಣಿಸಿದ ತಕ್ಷಣ 108ಕ್ಕೆ ಕರೆ ಮಾಡಿದ್ದಾರೆ. ಸುರತ್ಕಲ್‌ನಿಂದ 108 ಆಂಬುಲೆನ್ಸ್ ಕುಳಾಯಿಗೆ ತಲುಪಿದ್ದು, ಮಹಿಳೆಯನ್ನು ಕುಳ್ಳಿರಿಸಿ ಮಂಗಳೂರು ಲೇಡಿಗೋಶನ್ ಆಸ್ಪತ್ರೆ ಹೋಗುವಾಗ ಮಾರ್ಗಮಧ್ಯೆ ಪಣಂಬೂರಿನಲ್ಲಿ ಹೆರಿಗೆ ನೋವು ತೀವ್ರವಾಗಿತ್ತು.
‘ಸುಡೊಮೊನಾಸ್’ ಕಾಯಿಲೆಗೆ ಯುವಕ ಬಲಿ.
ಕೂಡಲೆ ಕಾರ್ಯ ಪ್ರವೃತ್ತರಾದ ಆಂಬ್ಯುಲೆನ್ಸ್ ಶುಶ್ರೂಶಕ ಅವಿನಾಶ್ ವಾಹನದಲ್ಲೇ ಸುರಕ್ಷಿತವಾಗಿ ಹೆರಿಗೆ ಮಾಡಿಸಿದರು. ಚಾಲಕ ಬಶೀರ್ ಅಹ್ಮದ್ ಖಾನ್ ಸಹಕರಿಸಿದರು. ಬಳಿಕ ತಾಯಿ ಮತ್ತು ಮಗುವನ್ನು ಹೆಚ್ಚಿನ ಚಿಕಿತ್ಸೆಗೆ ಲೇಡಿಗೋಶನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ.