ಚಿತ್ರದುರ್ಗ: ಶುದ್ದ ಕುಡಿಯುವ ನೀರಿಗಾಗಿ ಮನೆ ಮನೆ ಅಲೆಯುವ ಪರಿಸ್ಥಿತಿ!

By Gowthami K  |  First Published Jul 24, 2023, 7:26 PM IST

ಒಂದತ್ತಿನ ಊಟ ಇಲ್ಲದಿದ್ರು ಪರವಾಗಿಲ್ಲ ಕುಡಿಯಲು ಶುದ್ದ ನೀರು ಸಿಕ್ರೆ ಸಾಕಪ್ಪ ಅನ್ನೋ ಗಾದೆ ಮಾತೊಂದಿದೆ. ಆದ್ರೆ ಈ ಬಡಾವಣೆಯ ಜನರು ಕುಡಿಯುವ ನೀರಿಗಾಗಿ‌ ಕೈಯಲ್ಲಿ ಚೊಂಬು ಹಿಡಿದು ಮನೆ ಮನೆಗೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.


ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಜು.24): ಒಂದತ್ತಿನ ಊಟ ಇಲ್ಲದಿದ್ರು ಪರವಾಗಿಲ್ಲ ಕುಡಿಯಲು ಶುದ್ದ ನೀರು ಸಿಕ್ರೆ ಸಾಕಪ್ಪ ಅನ್ನೋ ಗಾದೆ ಮಾತೊಂದಿದೆ. ಆದ್ರೆ ಈ ಬಡಾವಣೆಯ ಜನರು ಕುಡಿಯುವ ನೀರಿಗಾಗಿ‌ ಕೈಯಲ್ಲಿ ಚೊಂಬು ಹಿಡಿದು ಮನೆ ಮನೆಗೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸುಳ್ಳು ಭರವಸೆಗೆ ಇಡೀ ಏರಿಯಾ ಜನರು ಕುಡಿಯುವ ನೀರಿನ ಸಮಸ್ಯೆ ಎದುರಿಸುವಂತಾಗಿದೆ.

Tap to resize

Latest Videos

ಹೀಗೆ ಕೈಯಲ್ಲಿ ಚೊಂಬು ಹಿಡ್ಕೊಂಡು ಮನೆ ಮನೆಗೆ ತೆರಳಿ ಶುದ್ದ ಕುಡಿಯುವ ನೀರಿಗಾಗಿ ಪರದಾಡ್ತಿರೋ ಮಹಿಳೆಯರು. ಮತ್ತೊಂದೆಡೆ ನಮ್ಮ‌ ಏರಿಯಾಗೆ ಶುದ್ದ ನೀರಿನ‌ ಘಟಕ ತೆರೆಯಿರಿ ಎಂದು ಆಗ್ರಹಿಸ್ತಿರೋ ಏರಿಯಾ ಜನರು. ಈ ದೃಶ್ಯಗಳು ಕಂಡು ಬಂದಿದ್ದು ಚಿತ್ರದುರ್ಗದ ಹೊರವಲಯದಲ್ಲಿರುವ ಗಾಂಧಿನಗರ ಬಳಿ. ಸುಮಾರು ವರ್ಷಗಳಿಂದ ಈ ಏರಿಯಾದಲ್ಲಿ ನೂರಾರು ಕುಟುಂಬಗಳು ವಾಸ ಮಾಡ್ತಿವೆ. ಆದ್ರೆ ಇದುವರೆಗೂ ಯಾವೊಬ್ಬ ಅಧಿಕಾರಿ, ಜನಪ್ರತಿನಿಧಿಯೂ ಶುದ್ದ ಕುಡಿಯುವ ನೀರಿನ ಘಟಕ ತೆರೆಯಲು ಮುಂದಾಗಿಲ್ಲ ಎಂಬುದು ತುಂಬಾ ನೋವಿನ ಸಂಗತಿ.

ನಿರಂತರ ಮಳೆಗೆ ಕುಸಿದು ಬಿದ್ದ ಮನೆ; ಸುರಿವ ಮಳೆಯಲ್ಲೇ ಹೊರಗೆ ನಿಂತ ಕುಟುಂಬ!

ಚುನಾವಣೆ ಸಂದರ್ಭದಲ್ಲಿ ಕೇವಲ ಪ್ರಣಾಳಿಕೆಯಲ್ಲಿ ನಮ್ಮ ಏರಿಯಾ ಸಮಸ್ಯೆ ಕಾಣ್ತದೆ ವಿನಃ, ಗೆದ್ದ ಬಳಿಕ ಯಾರೂ ಕೂಡ ಇತ್ತ ತಿರುಗು ನೋಡಲ್ಲ. ಶುದ್ದ ಕುಡಿಯುವ ನೀರಿಲ್ಲದೇ ಮನೆ ಮನೆಗೆ ತೆರಳಿ ಚೊಂಬಿನಲ್ಲಿ ಇಸ್ಕೊಂಡ್ ಬಂದು ಅಡುಗೆ ಮಾಡಿ ಊಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಇನ್ನಾದ್ರು ಅಧಿಕಾರಿಗಳು ಇತ್ತ ಗಮನ ಹರಿಸಿ ನಮ್ಮ ಏರಿಯಾಗೆ ಶುದ್ದ ಕುಡಿಯುವ ನೀರಿನ ಘಟಕ ಓಪನ್ ಮಾಡಲಿ ಎಂದು ಏರಿಯಾ ಜನರು ಆಗ್ರಹಿಸಿದರು.

ಸುಮಾರು ವರ್ಷಗಳಿಂದಲೂ ನಮ್ಮ ಏರಿಯಾ ಜನರು ಶುದ್ದ ಕುಡಿಯುವ ನೀರಿಗಾಗಿ ಬೇರೆ ಏರಿಯಾಗೆ ಹೋಗಿ ತರುವ ಸ್ಥಿತಿಯಿದೆ. ಇತ್ತೀಚೆಗೆ ಅಕ್ಕ ಪಕ್ಕದ ಏರಿಯಾದಲ್ಲಿಯೂ ಶುದ್ದ ಕುಡಿಯುವ ನೀರಿನ ಘಟಕಗಳು ಕೆಟ್ಟು ನಿಂತಿರೋದ್ರಿಂದ ನಮಗೆ ಕುಡಿಯುವ ನೀರಿನ ಅಭಾವ ಹೆಚ್ಚಾಗಿದೆ. ೫೦೦ಕ್ಕೂ ಅಧಿಕ ಮನೆಗಳು ಇರುವ ಕುಟುಂಬಗಳು ಇದ್ರು ನಮ್ಮ ಏರಿಯಾಗೆ ಶುದ್ದ ನೀರಿನ ಘಟಕ ಮಾಡಲು ಅಧಿಕಾರಿಗಳು ಯಾಕೆ ಹಿಂದೇಟು ಹಾಕ್ತಿದ್ದಾರೆ ಎಂಬುದೇ ವಿಪರ್ಯಾಸ.  ಆಟೋ ಅಥವಾ ಬೈಕ್ ಗಳಲ್ಲಿ ಹೋಗಿ‌ ಕುಡಿಯುವ ನೀರು ತರುವ ಶಕ್ತಿ ಕೆಲ ಕುಟುಂಬಗಳಿಗೆ ಇಲ್ಲ. ಹಾಗಾಗಿ ನಮ್ಮ ಏರಿಯಾಗೆ ಒಂದು ಶುದ್ದ ನೀರಿನ‌ ಘಟಕ ಓಪನ್ ಮಾಡಿದ್ರೆ ಏರಿಯಾ ಜನರಿಗೆ ತುಂಬಾ ಅನುಕೂಲ ಆಗಲಿದೆ ಅಂತಾರೆ ಸ್ಥಳೀಯರು.

ಸೊರಬ ತಾಲೂ​ಕಲ್ಲಿ ಮರಳು ದಂಧೆಗೆ ಕೃಷಿ ಜಮೀ​ನು​ಗಳು ಬಲಿ!

ಚುನಾವಣೆ ಸಂದರ್ಭದಲ್ಲಿ ಜನರನ್ನು ವೋಟಿಗಾಗಿ ಬಳಸಿಕೊಳ್ಳೋ ಜನಪ್ರತಿನಿಧಿಗಳೇ ಸ್ವಲ್ಪ ಈ ಕಡೆ ಕಣ್ಣು ಬಿಟ್ಟು ಜನರ ಸಮಸ್ಯೆಗೆ ಪರಿಹಾರ ಒದಗಿಸಿ, ಏರಿಯಾಗೊಂದು ಶುದ್ದ ನೀರಿನ ಘಟಕ ಸ್ಥಾಪನೆ ಮಾಡಲಿ ಎಂಬುದು ನಮ್ಮೆಲ್ಲರ ಬಯಕೆ. 

click me!