ಬೆಂಗಳೂರು ಅಭಿವೃದ್ಧಿಗೆ ವರ್ಲ್ಡ್ ಡಿಸೈನ್ ಪ್ರೊಟೊಪೊಲಿಸ್ ಒಪ್ಪಂದಕ್ಕೆ ಡಿಸಿಎಂ ಸಹಿ: ಏನಿದರ ವಿಶೇಷ..

By Sathish Kumar KH  |  First Published Jul 24, 2023, 7:10 PM IST

ಬೆಂಗಳೂರನ್ನು ವಿಶ್ವ ದರ್ಜೆಯ ನಗರವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ವರ್ಲ್ಡ್ ಡಿಸೈನ್ ಪ್ರೊಟೊಪೊಲಿಸ್ (ಡಬ್ಲ್ಯೂಡಿಪಿ) ಒಪ್ಪಂದಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಹಿ ಹಾಕಿದ್ದಾರೆ. 


ಬೆಂಗಳೂರು (ಜು.24): ಬೆಂಗಳೂರು ನಗರವನ್ನು ವಿಶ್ವ ದರ್ಜೆಯ ನಗರವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ವರ್ಲ್ಡ್ ಡಿಸೈನ್ ಪ್ರೊಟೊಪೊಲಿಸ್ (ಡಬ್ಲ್ಯೂಡಿಪಿ) ಒಪ್ಪಂದಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಉಪಸ್ಥಿತಿಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಹಿಯನ್ನು ಹಾಕಿದ್ದಾರೆ. 

ಇನ್ನು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ವರ್ಲ್ಡ್‌ ಡಿಸೈನ್ ಆರ್ಗನೈಸೇಶನ್ ನ ಅಧ್ಯಕ್ಷ ಡೇವಿಡ್ ಕುಸುಮ ಅವರೊಂದಿಗೆ ಸಹಿ ಹಾಕಿ ಒಡಂಬಡಿಕೆಯನ್ನು ಅದಲು ಬದಲು ಮಾಡಿಕೊಂಡರು. ಈ ಮೂಲಕ ಬೆಂಗಳೂರು ನಗರವನ್ನು ವಿಶ್ವದರ್ಜೆಯ ನಗರವನ್ನಾಗಿ ನಿರ್ಮಾಣ ಮಾಡಲು ಕಾಂಗ್ರೆಸ್‌ ಸರ್ಕಾರ ಮುಂದಡಿಯಿಟ್ಟಿದೆ. ಈ ಒಡಂಬಡಿಕೆಯ ಪ್ರಕಾರ ಬೆಂಗಳೂರಿನ ಸಮಗ್ರ ಅಭಿವೃದ್ಧಿ ಮಾಡಿ, ಈಗಾಗಲೇ ಸಾರ್ವಜನಿಕರು ಸಲಹೆ ನೀಡಿದ ರೀತಿಯಲ್ಲಿ ಬ್ರ್ಯಾಂಡ್‌ ಬೆಂಗಳೂರು ಮಾಡಲು ತೀರ್ಮಾನಿಸಿದ್ದಾರೆ. 

Tap to resize

Latest Videos

undefined

Bengaluru Metro:ಆಗಸ್ಟ್‌ನಿಂದ 2 ಹೊಸ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭ

  • WDP ಒಡಂಬಡಿಕೆಯ ಉದ್ದೇಶ: 
  • "ಬೆಂಗಳೂರನ್ನು ವಿಶ್ವ ದರ್ಜೆಯ ನಗರವಾಗಿ ಅಭಿವೃದ್ಧಿಪಡಿಸುವ" ಗುರಿಗೆ ಕರ್ನಾಟಕ ಸರ್ಕಾರ ಬದ್ಧವಾಗಿದೆ.
  • ಸುಮಾರು 14 ಮಿಲಿಯನ್ ಜನರನ್ನು ಹೊಂದಿರುವ ಬೆಂಗಳೂರು ನಗರ ಮತ್ತು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದೆ.
  • ನಮ್ಮ ಸರ್ಕಾರದ ಗುರಿಯು ಬೆಂಗಳೂರನ್ನು "ಗ್ಲೋಬಲ್ ಸಿಟಿ" ಮಾತ್ರವಲ್ಲದೆ, ಇಲ್ಲಿನ ನಾಗರಿಕರಿಗೆ, ಎಲ್ಲಾ ಸಾಮಾಜಿಕ-ಆರ್ಥಿಕ ಸ್ತರಗಳ ವಾಸಯೋಗ್ಯ ನಗರವನ್ನಾಗಿ ಮಾಡುವುದು.
  • ಮೇಲಿನ ಉದ್ದೇಶಗಳನ್ನು ಸಾಧಿಸುವಲ್ಲಿ ಯೋಜನೆಗಳ ವಿನ್ಯಾಸವು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ.
  • ವರ್ಲ್ಡ್ ಡಿಸೈನ್ ಪ್ರೊಟೊಪೊಲಿಸ್ (WDP) ಬೆಂಗಳೂರಿಗೆ ಹೊಸ ಹೆಜ್ಜೆಗುರುತು ಮತ್ತು ಹೊಸ ಕಲ್ಪನೆಯನ್ನು ರಚಿಸಲು ಸಹಾಯ ಮಾಡುತ್ತದೆ.

ಒಪ್ಪಂದದಲ್ಲಿ ಏನಿದೆ?: "ಇಂದು ನಾವು ನವನವೀನ ವಿನ್ಯಾಸ ಮತ್ತು ಆವಿಷ್ಕಾರಗಳ ಕ್ಷೇತ್ರದಲ್ಲಿ ತಮ್ಮ ಕೆಲಸಕ್ಕಾಗಿ ಹೆಸರುವಾಸಿಯಾಗಿರುವ WDO ನೊಂದಿಗೆ ಪಾಲುದಾರಿಕೆ ಹೊಂದಿದ್ದೇವೆ. WDP ನ್ನು ಪ್ರಾರಂಭಿಸಲು, ಉತ್ತಮ ಪರಿಹಾರಗಳ ರಚನೆಯನ್ನು ಬೆಂಬಲಿಸುವ ಹೊಸ ಕಾರ್ಯಕ್ರಮ, ಉತ್ತಮ ವಿನ್ಯಾಸ ಜ್ಞಾನ ಮತ್ತು ನಾಗರಿಕ ಜೀವನದ ಗುಣಮಟ್ಟವನ್ನು ಸುಧಾರಿಸುವ ಉದ್ದೇಶಿತ ಮತ್ತು ರೂಪಾಂತರ ಯೋಜನೆಗಳನ್ನು ಪ್ರಾರಂಭಿಸಲು ಅಗತ್ಯವಿರುವ ಸಂಪನ್ಮೂಲಗಳೊಂದಿಗೆ ನಗರವನ್ನು ಸಬಲೀಕರಣಗೊಳಿಸುತ್ತೇವೆ" ಎಂದು ಒಪ್ಪಂದದ ವಿಷಯಕ್ಕೆ ಸಹಿ ಮಾಡಿದ್ದಾರೆ. 

Brand Bangalore: ಮನೆ ಬಾಗಿಲಿಗೆ ಪಾಲಿಕೆ, ಬಿಡಿಎ ಆಸ್ತಿ ದಾಖಲೆ: ಬೆಂಗಳೂರು (ಜು.16) : ಬಿಬಿಎಂಪಿ, ಬಿಡಿಎ ವ್ಯಾಪ್ತಿಯ ಆಸ್ತಿ ದಾಖಲೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಜಾರಿಗೆ ತರಲಾಗುವುದು. ಈ ಮೂಲಕ ಬೆಂಗಳೂರು ನಾಗರಿಕರು ಇನ್ನು ಮುಂದೆ ತಮ್ಮ ಆಸ್ತಿ ದಾಖಲೆಗಳಿಗೆ ಸರ್ಕಾರಿ ಕಚೇರಿಗೆ ಅಲೆಯುವುದನ್ನು ತಪ್ಪಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದರು. 

ಅಪಾರ್ಟ್‌ಮೆಂಟ್‌ ಐದನೇ ಮಹಡಿ ಬಾಲ್ಕನಿಯಲ್ಲಿ 7 ಹಸುಗಳನ್ನು ಸಾಕಿದ ವ್ಯಕ್ತಿ: ಮುಂದಾಗಿದ್ದು ಅವಾಂತರ

ಈ ಕುರಿತು ಜುಲೈ 15ರಂದು ವಿಧಾನಸೌಧದಲ್ಲಿ ಬ್ರ್ಯಾಂಡ್‌ ಬೆಂಗಳೂರು ಪ್ರಯುಕ್ತ ಬೆಂಗಳೂರು ನಿವಾಸಗಳ ಕ್ಷೇಮಾಭಿವೃದ್ಧಿ ಮತ್ತು ನಾಗರಿಕ ಸಂಘಗಳ ಪ್ರತಿನಿಧಿಗಳ ಜತೆ ವಿಡಿಯೋ ಸಂವಾದ ನಡೆಸಿದರು. ಈ ವೇಳೆ ಜನತೆಯ ಸಮಸ್ಯೆಗಳನ್ನು ಆಲಿಸಿ ಪಟ್ಟಿಮಾಡಿಕೊಂಡರು. ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಾಖಲೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯಕ್ಕೆ ‘ಖಾತೆ’ ಎಂದು ಕರೆಯುವ ಬದಲು ಬೇರೆ ಹೆಸರಿಡಲಾಗುವುದು. ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಕಾಲದಲ್ಲಿ ಹಳ್ಳಿಗಳಲ್ಲಿ ಮನೆ ಬಾಗಿಲಿಗೆ ಪಹಣಿಗಳನ್ನು ನೀಡುವ ‘ಭೂಮಿ’ ವ್ಯವಸ್ಥೆ ಮಾಡಲಾಗಿತ್ತು. ಇದೇ ಮಾದರಿಯಲ್ಲಿ ಬೆಂಗಳೂರು ನಗರದಲ್ಲಿ ಮನೆ ಬಾಗಿಲಿಗೆ ಆಸ್ತಿ ದಾಖಲೆಗಳನ್ನು ನೀಡುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು. ಸಮಗ್ರ ಬೆಂಗಳೂರು ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ 100 ದಿನದಲ್ಲಿ ಸಮರ್ಪಕವಾದ ನಕ್ಷೆಯನ್ನು ರೂಪಿಸಿ ಕಾರ್ಯರೂಪಕ್ಕೆ ತರುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದ್ದರು.

click me!