ರಾಷ್ಟ್ರೀಕೃತ ಬ್ಯಾಂಕ್‌ಗಳ ಕೃಷಿ ಸಾಲ ಮನ್ನಾ ಮಾಡಿ : ಕನ್ನಡಪರ ಒಕ್ಕೂಟ

By Kannadaprabha NewsFirst Published Jan 19, 2024, 11:08 AM IST
Highlights

ಪ್ರಸಕ್ತ ವರ್ಷ ರಾಜ್ಯದಲ್ಲಿ ತೀವ್ರ ಬರದಿಂದ ರೈತ ಸಮುದಾಯ ಸಂಕಷ್ಟಕ್ಕೆ ಸಿಲುಕಿದೆ. ಕೇಂದ್ರ ಸರ್ಕಾರ ರೈತರು ಕೃಷಿಗಾಗಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಮಾಡಿರುವ ಸಾಲ ಮನ್ನಾ ಮಾಡಬೇಕು ಎಂದು ಕನ್ನಡಪರ ಒಕ್ಕೂಟಗಳ ಸಂಘಟನೆ ಮುಖಂಡ ಚನ್ನು ನಂದಿ ಆಗ್ರಹಿಸಿದರು.

 ನರಗುಂದ :  ಪ್ರಸಕ್ತ ವರ್ಷ ರಾಜ್ಯದಲ್ಲಿ ತೀವ್ರ ಬರದಿಂದ ರೈತ ಸಮುದಾಯ ಸಂಕಷ್ಟಕ್ಕೆ ಸಿಲುಕಿದೆ. ಕೇಂದ್ರ ಸರ್ಕಾರ ರೈತರು ಕೃಷಿಗಾಗಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಮಾಡಿರುವ ಸಾಲ ಮನ್ನಾ ಮಾಡಬೇಕು ಎಂದು ಕನ್ನಡಪರ ಒಕ್ಕೂಟಗಳ ಸಂಘಟನೆ ಮುಖಂಡ ಚನ್ನು ನಂದಿ ಆಗ್ರಹಿಸಿದರು.

ಅವರು ಗುರುವಾರ ಪಟ್ಟಣದ ಮಿನಿ ವಿಧಾನಸೌಧದಲ್ಲಿ ತಹಸೀಲ್ದಾರ್ ಮುಖಾಂತರ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿ ಆನಂತರ ಮಾತನಾಡಿದರು. ರಾಜ್ಯದಲ್ಲಿ ಈ ವರ್ಷ ಮುಂಗಾರು, ಹಿಂಗಾರು ಹಂಗಾಮಿನಲ್ಲಿ ಮಳೆಯಾಗದೆ ರೈತ ಸಮುದಾಯ ತೀವ್ರ ತೊಂದರೆ ಎದುರಿಸುತ್ತಿದೆ. ಸರ್ಕಾರ ಬರಗಾಲವೆಂದು ಘೋಷಣೆ ಮಾಡಿದರೆ ಸಾಲದು, ನೆರವು ನೀಡಬೇಕು. ಗ್ರಾಮೀಣ ಭಾಗದ ಜನತೆ ಗುಳೆ ಹೋಗುತ್ತಿದ್ದು, ಸರ್ಕಾರ ಕೃಷಿ ಕಾರ್ಮಿಕರಿಗೆ ಉದ್ಯೋಗ ನೀಡಲು ವಿಫಲವಾಗಿದೆ ಎಂದು ಆರೋಪಿಸಿದರು.

Latest Videos

ಅರಣ್ಯ ರಕ್ಷಣೆಗೆ ಸಾಲುತ್ತಿಲ್ಲ ಸರ್ಕಾರದ ಅನುದಾನ: ಬಜೆಟ್‌ನಲ್ಲಿ ನೀಡುವ ಹಣದಲ್ಲಿ ಸಂಬಳಕ್ಕೇ 33% ಬೇಕು!

ಮುಂಬರುವ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ರೈತರು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಕೃಷಿಗಾಗಿ ಪಡೆದ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ಜಾನುವಾರುಗಳಿಗೆ ಮೇವು, ಕುಡಿಯುವ ನೀರು ಪೂರೈಕೆ ಮಾಡಬೇಕು. ಅದೇ ರೀತಿ ಈ ಭಾಗದ ರೈತರ ಬಹುದಿನದ ಬೇಡಿಕೆಯಾದ ಮಹದಾಯಿ ಹಾಗೂ ಕಳಸಾ ಬಂಡೂರಿ ಯೋಜನೆ ಜಾರಿ ಮಾಡಬೇಕು. ಒಂದ ವೇಳೆ ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಳ್ಳದಿದ್ದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಈ ರಾಜ್ಯದ ರೈತರು ತಕ್ಕ ಶಾಸ್ತಿ ಮಾಡುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಅತಿ ಹೆಚ್ಚು ಮೀಸಲು ಚಿನ್ನ ಹೊಂದಿರುವ ಜಗತ್ತಿನ ಟಾಪ್ 10 ದೇಶಗಳ ಪಟ್ಟಿ ಬಹಿರಂಗ: ಭಾರತಕ್ಕೆ ಎಷ್ಟನೇ ಸ್ಥಾನ ನೋಡಿ..

ತಹಸೀಲ್ದಾರ್ ಶ್ರೀಶೈಲ ತಳವಾರ ಮನವಿ ಸ್ವೀಕರಿಸಿದರು. ರಾಘವೇಂದ್ರ ಗುಜಮಾಗಡಿ, ಬಸವರಾಜ ತಾವರೆ, ಶಿವಾನಂದ ಮಾಯಣ್ಣವರ, ಮಾರುತಿ ಬೆಳವಣಿಕಿ, ಮಾದೇವಪ್ಪ ಮರಚಕನ್ನವರ, ಬಸವರಾಜ ಪೂಜಾರ, ಸಿದ್ದಪ್ಪ ಮರ್ಚಕ್ಕನವರ, ಮಲ್ಲಿಕಾರ್ಜುನ ಗಡೇಕಾರ ಉಪಸ್ಥಿತರಿದ್ದರು. 

click me!