ಮತದಾನ ಎಲ್ಲರ ಜವಾಬ್ದಾರಿಯುತ ಕರ್ತವ್ಯ

By Kannadaprabha News  |  First Published Apr 24, 2023, 5:11 AM IST

ಮತದಾನ ದೇಶದ ಪ್ರತಿಯೊಬ್ಬರ ಜವಾಬ್ದಾರಿಯುತ ಕರ್ತವ್ಯವಾಗಿದ್ದು ಹದಿನೆಂಟು ವರ್ಷ ತುಂಬಿದ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಮತದಾನದ ಪಾವಿತ್ರ್ಯತೆಯನ್ನು ಕಾಪಾಡಬೇಕೆಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಿ.ಟಿ.ಅಶೋಕ್‌ ತಿಳಿಸಿದರು.


  ತಿಪಟೂರು :  ಮತದಾನ ದೇಶದ ಪ್ರತಿಯೊಬ್ಬರ ಜವಾಬ್ದಾರಿಯುತ ಕರ್ತವ್ಯವಾಗಿದ್ದು ಹದಿನೆಂಟು ವರ್ಷ ತುಂಬಿದ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಮತದಾನದ ಪಾವಿತ್ರ್ಯತೆಯನ್ನು ಕಾಪಾಡಬೇಕೆಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಿ.ಟಿ.ಅಶೋಕ್‌ ತಿಳಿಸಿದರು.

ತಾಲೂಕಿನ ಹೋಬಳಿ ಕೇಂದ್ರವಾದ ಹೊನ್ನವಳ್ಳಿಯ ಗ್ರಾಮ ಪಂಚಾಯಿತಿ ಆವರಣದಲ್ಲಿ ಜಿಲ್ಲಾ ಮತ್ತು ತಾಲೂಕು ಸ್ವೀಪ್‌ ಸಮಿತಿಯಿಂದ ರಂಗೋಲಿ ಬಿಡಿಸುವ ಮೂಲಕ ಪ್ರಜಾಪ್ರಭುತ್ವದಲ್ಲಿ ಮತದಾನವೇ ಹಬ್ಬ ಎಂಬ ಶೀರ್ಷಿಕೆಯಡಿ ಆಯೋಜಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಜಾಪ್ರಭುತ್ವದ ಜೀವಂತಿಕೆ ಇರುವುದು ಮತದಾನದಲ್ಲಿ. ಆದ್ದರಿಂದ ಯಾವುದೆ ಕಾರಣಕ್ಕೂ ಆಸೆ, ಆಮಿಷಗಳಿಗೆ ಒಳಗಾಗದೆ ನಿರ್ಭಯ, ನಿಷ್ಪಕ್ಷಪಾತವಾಗಿ ಮತದಾನ ಮಾಡಿದಾಗ ಮಾತ್ರ ಪ್ರಜಾಭುತ್ವದ ವ್ಯವಸ್ಥೆ ಶುಭ್ರವಾಗುತ್ತದೆ. ಮತದಾರರು ಕಡ್ಡಾಯವಾಗಿ ಮತದಾನ ಮಾಡಿ ತಮ್ಮ ಹಕ್ಕನ್ನು ಚಲಾಯಿಸಬೇಕು. ಈ ಬಾರಿ ವಿಶೇಷವಾಗಿ ಚುನಾವಣೆಯಲ್ಲಿ ವಿಶೇಷಚೇತನ ಹಾಗೂ ಶತಾಯುಷಿ ಮತದಾರರಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸಲಾಗಿದ್ದು ಅವುಗಳ ಸದುಪಯೋಗಪಡಿಸಿಕೊಂಡು ಮತಹಾಕಬೇಕೆಂದರು.

Tap to resize

Latest Videos

ಹೊನ್ನವಳ್ಳಿ ಪೊಲೀಸ್‌ ಠಾಣೆಯ ಸಬ್‌ಇನ್ಸ್‌ಪೆಕ್ಟರ್‌ ಆರ್‌. ರಾಜೇಶ್‌ ಮಾತನಾಡಿ, ಮತದಾರರು ತಮ್ಮ ಮತಗಟ್ಟೆಗಳಿಗೆ ತೆರಳಿ ನಿರ್ಭಯವಾಗಿ ಮತದಾನ ಮಾಡಬೇಕು. ಸಮಸ್ಯೆಗಳೇನಾದರೂ ಇದ್ದರೆ ಪೊಲೀಸ್‌ ಸಹಾಯವಾಣಿ 112ಕ್ಕೆ ಕರೆ ಮಾಡಿ ಎಂದರು.

ಕಾರ್ಯಕ್ರಮದಲ್ಲಿ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಸ್‌.ಗೋಪಾಲಪ್ಪ, ಪಿಡಿಓ ಶಿವಲಿಂಗಯ್ಯ, ಗೋಪಾಲ್‌, ಕಾರ್ಯದರ್ಶಿ ಮಲ್ಲೇಶ್‌, ಸ್ತ್ರೀಶಕ್ತಿ ಒಕ್ಕೂಟದ ತಾಲೂಕು ಅಧ್ಯಕ್ಷ ಎಂ. ಮಂಜುಳಾ, ಮೇಲ್ವಿಚಾರಕರಾದ ಬಿ.ಎನ್‌. ಪ್ರೇಮಾ, ಲೀಲಾಬಾಯಿ, ಪದ್ಮ, ಗ್ರಾಮ ಲೆಕ್ಕಿಗರಾದ ಬೇಬಿ, ಗ್ರಾ.ಪಂ ಸಿಬ್ಬಂದಿ ಚಿಕ್ಕಣ್ಣ, ವಿಆರ್‌ಡಬ್ಲ್ಯೂಗಳು, ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀಶಕ್ತಿ ಗುಂಪಿನ ಮಹಿಳೆಯರು ಭಾಗವಹಿಸಿದ್ದರು.

ನಕಲಿ ಮತದಾನ ಆರೋಪ

ರಾಮನಗರ (ಏ.23): ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಸಂದರ್ಭದಲ್ಲಿ ರಾತ್ರೋ ರಾತ್ರಿ ಕರೆಂಟ್ ತೆಗೆಸಲಾಗುತ್ತದೆ. ಜೊತೆಗೆ, ಮತದಾನದ ವೇಳೆ ಪ್ರಾಕ್ಸಿ ವೋಟಿಂಗ್ (ಮತದಾರರ ಬದಲಗಾಗಿ ಬೇರೊಬ್ಬ ವ್ಯಕ್ತಿಯಿಂದ ಮತ ಚಲಾವಣೆ) ಹಾವಳಿ ಹೆಚ್ಚಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ವಿರುದ್ಧ ಸಚಿವ ಆರ್. ಅಶೋಕ್‌ ಗಂಭೀರ ಆರೋಪ ಮಾಡಿದ್ದಾರೆ.

ಕನಕಪುರ ವಿಧಾನಸಭಾ ಕ್ಷೇತ್ರದ ಟಿ.ಬೇಕುಪ್ಪೆ ಗ್ರಾಮದಲ್ಲಿ ಚುನಾವಣಾ ಪ್ರಚಾರ ಕಾರ್ಯವನ್ನು ಕೈಗೊಂಡಿರುವ ಕಂದಾಯ ಸಚಿವ ಆರ್. ಅಶೋಕ್‌ ಮಾಧ್ಯಮಗಳೊಂದಿಗೆ ಮಾತನಾಡಿದರು. ಇಲ್ಲಿ ನಾಮಪತ್ರ ಸಲ್ಲಿಸೋದಷ್ಟೇ ಜನ ಗೆಲ್ಲಿಸುತ್ತಾರೆ ಎಂದು ಡಿ.ಕೆ. ಶಿವಕುಮಾರ್‌ ಹೇಳುತ್ತಾರೆ. ಆದರೆ, ಗೌರವಕ್ಕಾದರೂ ಮತದಾನ ಕೊಡುವಾಗ ಕೇಳಬೇಕಲ್ವಾ.? ನೇತ್ರದಾನ, ಆನ್ನದಾನ, ವಿದ್ಯಾದಾನದ ರೀತಿಯಲ್ಲಿಯೇ ಪ್ರಜಾಪ್ರಭುತ್ವ ದೇಶದಲ್ಲಿ ಮತದಾನವೂ ಒಂದು ಮಹತ್ವದ ದಾನವಾಗಿದೆ. ಅದು ಮತದಾರರು ಕೊಡುವ ಭಿಕ್ಷೆಯಾಗಿದೆ. ಅದನ್ನ ಬೇಡಿ ಪಡೆಯಬೇಕು. ನಾನು ನನ್ನ ಕರ್ತವ್ಯ ಮಾಡುತ್ತಿದ್ದೇನೆ. ಪ್ರಚಾರ ಮಾಡೋದು, ಮಾಡದೇ ಇರೋದು ಅವರಿಗೆ ಬಿಟ್ಟ ವಿಚಾರ ಎಂದು ಹೇಳಿದರು.

ಚುನಾವಣೆಗೂ ಮುನ್ನವೇ ಜೆಡಿಎಸ್‌ನ ಒಂದು ವಿಕೆಟ್ ಪತನ: ಕುಮಾರಸ್ವಾಮಿಗೆ ಶಾಕ್!

ನಕಲಿ ವೋಟಿಂಗ್‌ ಸಂಖ್ಯೆ ಅಧಿಕ: ಕನಕಪುರದಲ್ಲಿ ನಕಲಿ ಮತದಾನದ (Proxy voting) ಫ್ರಾಕ್ಸಿ ಓಟಿಂಗ್‌ನ ಆತಂಕ ಇದೆ. ಚುನಾವಣಾ ಸಮಯದಲ್ಲಿ ಯಾವಾಗ ಬೇಕೆಂದರೆ ಆಗ ಕರೆಂಟ್ ತೆಗೆಸ್ತಾರೆ. ಇಲ್ಲಿ ಹೇಳೋರು ಕೇಳೋರು ಯಾರು ಇಲ್ಲದಂತಾಗಿದೆ ಎಂದು ಈಗಾಗಲೇ ಜೆಡಿಎಎಸ್ ಮುಖಂಡರು ಮಾಹಿತಿ ನೀಡಿದ್ದಾರೆ. ನಾವು ಪ್ರಬಲ ಪೈಪೋಟಿ ಕೊಟ್ಟಾಗ ನಮ್ಮ ಮೇಲೆ ದಬ್ಬಾಳಿಕೆ ಮಾಡಿದ್ದಾರೆ ಎಂತಲೂ ಹೇಳುತ್ತಿದ್ದಾರೆ. ಆದರೆ ಕೇಂದ್ರ ಹಾಗೂ ರಾಜ್ಯದಲ್ಲಿ ನಮ್ಮ ಸರ್ಕಾರ ಇದೆ. ಇಲ್ಲಿನ ಭಯಮುಕ್ತವಾಗಿ ಜನರು ಮತದಾನ ಮಾಡಬಹುದು ಎಂದು ಮನವಿ ಮಾಡಿದರು.

35 ವರ್ಷವಾದರೂ ಮೆಡಿಕಲ್‌ ಕಾಲೇಜು ತಂದಿರಲಿಲ್ಲ: ರಾಜ್ಯದಲ್ಲಿ ಯಾವುದೇ ಭಯ ಮತ್ತು ಆತಂಕ ಇಲ್ಲದೇ ಮತದಾನ ಮಾಡಲು ಅವಕಾಶ ಮಾಡಿಕೊಡುತ್ತಿದ್ದೀವಿ. ಕನಕಪುರಕ್ಕೆ ಕಳೆದ 4 ವರ್ಷದಿಂದ ಸರ್ಕಾರ ಸಾಕಷ್ಟು ಅನುದಾನವನ್ನು ನೀಡಿದೆ. ಇಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಕೂಡ ನಡೆದಿವೆ. ಹಾಗಾಗಿ ಈ ಬಾರಿ ಬಿಜೆಪಿ ಗೆಲ್ಲಿಸಿ ಅಂತ ಮನವಿ ಮಾಡುತ್ತಿದ್ದೇನೆ. ಇನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಕಳೆದ 35ವರ್ಷದಿಂದ ಆಡಳಿತ ಮಾಡಿದ್ದಾರೆ. ಆದರೆ, ಕ್ಷೇತ್ರಕ್ಕೆ ಮೆಡಿಕಲ್ ಕಾಲೇಜು ತರಲು ಇಷ್ಟು ವರ್ಷ ಬೇಕಾ.? ಇವರು ಇಂಧನ ಸಚಿವರಾಗಿದ್ದಾಗಲೇ ಮೆಡಿಕಲ್‌ ಕಾಲೇಜನ್ನು ತರಬಹುದಿತ್ತು, ಆದರೆ ತರಲಿಲ್ಲ. ಇದು ಕ್ಷೇತ್ರದ ಜನರ ಅಭಿವೃದ್ಧಿ ಮಾಡಲು ಇರುವ ನಿರ್ಲಕ್ಷ್ಯ ಎಂದು ದೂರಿದರು.

ವರುಣಾದಲ್ಲಿ ಸೋಮಣ್ಣ ಪ್ರಚಾರಕ್ಕೆ ಯುವಕರಿಂದ ಅಡ್ಡಿ: ಸಿದ್ದರಾಮಯ್ಯ ಪರ ಘೋಷಣೆ

click me!