ಸತ್ತವರ ಹೆಸರಲ್ಲೂ ಮತದಾನ: ರಮಾನಾಥ ರೈ ಆರೋಪ

By Kannadaprabha NewsFirst Published Feb 6, 2020, 7:40 AM IST
Highlights

ಚುನಾವಣೆ ಸಂದರ್ಭ ನಿಯಮಗಳನ್ನು ಉಲ್ಲಂಘಿಸಲಾಗಿದ್ದು, ಮೃತಪಟ್ಟವರ ಹೆಸರಲ್ಲೂ ಮತದಾನ ನಡೆದಿದೆ. ಇದರಲ್ಲಿ ರಾಜಕೀಯ ಹಸ್ತಕ್ಷೇಪ ನಡೆದಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಆಪಾದಿಸಿದ್ದಾರೆ.

ಮಂಗಳೂರು(ಫೆ.6): ಬಂಟ್ವಾಳ ತಾಲೂಕಿನ ಪ್ರತಿಷ್ಠಿತ ಸಹಕಾರಿ ಸಂಸ್ಥೆ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ನ (ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್‌) ನೂತನ ಆಡಳಿತ ಮಂಡಳಿ ಚುನಾವಣೆ ಸಂದರ್ಭ ನಿಯಮಗಳನ್ನು ಉಲ್ಲಂಘಿಸಲಾಗಿದ್ದು, ಮೃತಪಟ್ಟವರ ಹೆಸರಲ್ಲೂ ಮತದಾನ ನಡೆದಿದೆ. ಇದರಲ್ಲಿ ರಾಜಕೀಯ ಹಸ್ತಕ್ಷೇಪ ನಡೆದಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಆಪಾದಿಸಿದ್ದಾರೆ.

ಬಿ.ಸಿ.ರೋಡ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯಅಧ್ಯಕ್ಷ ಉಪಾಧ್ಯಕ್ಷ ಚುನಾವಣಾ ಪ್ರಕ್ರಿಯೆಗೆ ರಾಜ್ಯ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ಸತ್ತವರೂ ಕೋರ್ಟ್‌ ಮೆಟ್ಟಿಲು ಹತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಅನಂತ ಹೆಗಡೆಗೆ ಸಾಮಾಜಿಕ ಬಹಿಷ್ಕಾರಕ್ಕೆ ಒತ್ತಾಯ

ಕಳೆದ ಅವಧಿಯಲ್ಲಿ ಭೂ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷರಾಗಿದ್ದ ಸುದರ್ಶನ ಜೈನ್‌ ಮಾತನಾಡಿ, 874 ಮಂದಿಯ ರಿಟ್‌ ಪಿಟಿಶನ್‌ ಆಧಾರದಲ್ಲಿ ಮತದಾನ ಹಕ್ಕು ಚಲಾವಣೆ ಕುರಿತು ಕೋರ್ಟ್‌ ಮೂಲಕ ಆದೇಶ ಪಡೆದಿದ್ದರು. ಆದರೆ ಅವರಲ್ಲಿ ಸದಸ್ಯರಲ್ಲದವರೂ ಇದ್ದಾರೆ. ನೂರಾರು ಮಂದಿಗೆ ಬ್ಯಾಂಕಿನ ಷೇರ್‌ ಇಲ್ಲ, ಬ್ಯಾಂಕಿಗೆ ಸಂಬಂಧವೇ ಇಲ್ಲದವರು ಹೇಗೆ ಮತದಾನ ಮಾಡಿದರು ಎಂದು ಪ್ರಶ್ನಿಸಿದರು. ಇವರ ಪೈಕಿ 22 ಮಂದಿ ಮೃತಪಟ್ಟವರು ಎಂಬ ಅಂಶ ನಮಗೆ ಗೊತ್ತಾಗಿದೆ ಎಂದು ತಿಳಿಸಿದ್ದಾರೆ.

ಬ್ಯಾಂಕಿನ ನಿರ್ದೇಶಕ ಸ್ಥಾನಗಳಿಗೆ ಜ.25 ರಂದು ನಡೆದ ಚುನಾವಣೆಯಲ್ಲಿ ಬ್ಯಾಂಕಿನ ಮರಣ ಹೊಂದಿರುವ ಸದಸ್ಯರು,ಸಾಲ ಸುಸ್ತಿದಾರರು,ಅನರ್ಹರ ಹೆಸರಿನಲ್ಲಿ ಮತದಾನ ಮಾಡಲಾಗಿದೆ ಎಂದು ಜಿ.ಪಂ. ಸದಸ್ಯ ಚಂದ್ರಪ್ರಕಾಶ ಶೆಟ್ಟಿ ಆಪಾದಿಸಿದ್ದಾರೆ.

ಪುತ್ತೂರು ವಿಭಾಗ BSNL ಸಿಬ್ಬಂದಿ ಸಾಮೂಹಿಕ ಸ್ವಯಂ ನಿವೃತ್ತಿ

ಸುದ್ದಿಗೋಷ್ಠಿಯಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಬೇಬಿ ಕುಂದರ್‌, ಸುದೀಪ್‌ ಶೆಟ್ಟಿಮಾಣಿ, ಜಿ.ಪಂ. ಸದಸ್ಯ ಪದ್ಮಶೇಖರ ಜೈನ್‌, ಪ್ರಮುಖರಾದ ಪರಮೇಶ್ವರ ಮೂಲ್ಯ, ಸುಭಾಶ್ಚಂದ್ರ ಜೈನ್‌ ಮತ್ತಿತರರು ಇದ್ದರು.

click me!