
ಮಂಡ್ಯ (ಏ.3) ಯಾರದ್ದೋ ಮೀಸಲಾತಿ ಕಿತ್ತು 2% ಮೀಸಲಾತಿ ಹೆಚ್ಚಿಸಿದ್ದಾರೆ. ಬಕಾಸುರನ ಹೊಟ್ಟೆಗೆ ಅರೆಪಾವು ಮಜ್ಜಿಗೆ ಕೊಟ್ಟಂತಾಗಿದೆ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ನಂಜಾವಧೂತ ಸ್ವಾಮೀಜಿ ಅಸಾಮಾಧಾನ ವ್ಯಕ್ತಪಡಿಸಿದರು.
ಒಕ್ಕಲಿಗರಿಗೆ ಶೇ.4 ರಿಂದ ಶೇ.6 ಗೆ ಮೀಸಲಾತಿ ಏರಿಕೆ(Reservation ) ವಿಚಾರ ಪ್ರಸ್ತಾಪಿಸಿ ಮಾತನಾಡಿದ ಸ್ವಾಮೀಜಿ, ಒಕ್ಕಲಿಗರು(Vokkaliga) ರಾಜ್ಯದ ಜನಸಂಖ್ಯೆಯಲ್ಲಿ ಶೇ.16% ಇದ್ದಾರೆ. ನಾವು ಕೇಳಿದ್ದು 4 ರಿಂದ 16% ಗೆ ಮೀಸಲಾತಿ ಹೆಚ್ಚಳ ಮಾಡಿ ಅಂತ. ಆದ್ರೆ ಯಾರದ್ದೊ 2% ಕಿತ್ತು 6% ಗೆ ಮೀಸಲಾತಿ ಏರಿಕೆ ಮಾಡಿದ್ದಾರೆ.
ಒಕ್ಕಲಿಗರು(Vokkaliga community) ಬೇರೆಯವರ ಅನ್ನವನ್ನು ಕಸಿದು ತಿನ್ನಬೇಕು ಎನ್ನುವವರಲ್ಲ. ನಾಡಿನ ಒಕ್ಕಲಿಗ ಮಕ್ಕಳು ತಾವು ದುಡಿದಿದ್ದನ್ನ ಹಂಚಿ, ಉಳಿದ್ರೆ ತಾವು ತಿನ್ನಬೇಕು ಎಂಬ ಧ್ಯೇಯ ಇಟ್ಟುಕೊಂಡಿದ್ದಾರೆ ಎಂದರು.
ಕೆಂಪೇಗೌಡರ ಹೆಸರಲ್ಲಿ ಬೆಂಗಳೂರು ಹಬ್ಬ ಮಾಡಬೇಕು: ನಂಜಾವಧೂತ ಸ್ವಾಮೀಜಿ
ರಾಜ್ಯದಲ್ಲಿ 16% ಒಕ್ಕಲಿಗರಿದ್ರೂ 4 ರಷ್ಟು ಮೀಸಲಾತಿ ಕೊಟ್ಟಿದ್ರಿ. ಅದರಲ್ಲಿ ಹತ್ತಾರು ಸಮುದಾಯ ಸೇರಿಸಿದ್ದು, ಒಕ್ಕಲಿಗರಿಗೆ 1.5% ನಿಂದ 2% ಮೀಸಲಾತಿ ಮಾತ್ರ ಸಿಗೋದು. ಇದರಿಂದ ಎಲ್ಲ ಅವಕಾಶಗಳಿಂದ ಒಕ್ಕಲಿಗ ಮಕ್ಕಳು ವಂಚಿತರಾಗ್ತಿದ್ದಾರೆ.
6% ಗೆ ಮೀಸಲಾತಿ ಏರಿಸಿದ್ರೂ ಯಾವುದೇ ಪ್ರಯೋಜನ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ನಂಜಾವಧೂತ ಸ್ವಾಮೀಜಿ. ನಂಜಾವಧೂತ ಸ್ವಾಮೀಜಿ, ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರು.
ರಾಜಕೀಯ ಪಕ್ಷಗಳ ಪ್ರಣಾಳಿಕೆ ಬಗ್ಗೆ ಸ್ವಾಮೀಜಿ ಬೇಸರ:
ಪ್ರಸ್ತುತ ರಾಜಕೀಯ ಪಕ್ಷಗಳು ಘೋಷಿಸುತ್ತಿರುವ ಚುನಾವಣಾ ಪ್ರಣಾಳಿಕೆ ಬಗ್ಗೆ ನಂಜಾವಧೂತ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು. ಹಲವು ರಾಜ್ಯಗಳ ಸರ್ಕಾರಗಳನ್ನ ನೋಡ್ತಿದ್ದೇವೆ. ಚೀಪ್ ಪಾಪುಲಾರಿಟಿ ಪ್ರೋಗ್ರಾಂಗಳನ್ನ ಕೊಡ್ತಾರೆ. ಅಗತ್ಯಕ್ಕೂ ಮೀರಿ ಜನರ ಮೇಲೆ ಸಾಲದ ಹೊರೆ ಹೊರಿಸುತ್ತಾರೆ. ಅಂತಹದ್ದೆ ರಾಜ್ಯ ನಮ್ಮದು ಆಗಬಾರದು.
ಅಭಿವೃದ್ದಿ ಇಲ್ಲ, ಆದ್ರೆ ಎಲ್ಲ ಸೌಲಭ್ಯಗಳನ್ನ ಜನರ ಮನೆ ಬಾಗಿಲಿಗೆ ಕೊಡ್ತೀರಿ. ರಸ್ತೆ ಸರಿಯಿಲ್ಲ, ನೀರಾವರಿ ವ್ಯವಸ್ಥೆ ಇಲ್ಲ. ಮೂಲಭೂತ ಸೌಕರ್ಯಗಳಿಲ್ಲ.
ಕೊನೆಗೆ ಅದೇ ಜನರು ನಿಮ್ಮ ಮೇಲೆ ತಿರುಗಿ ಬಿಳ್ತಾರೆ. ಆದ್ದರಿಂದ ದುಡಿಯ ವರ್ಗವನ್ನ ಸರ್ಕಾರಗಳು ಸೃಷ್ಟಿ ಮಾಡಬೇಕು. ನಮ್ಮ ಜನರನ್ನ ಸ್ವಶಕ್ತರಾಗಿ, ಆರ್ಥಿಕ ಸಬಲರನ್ನಾಗಿ ಮಾಡಬೇಕು. ಅಂಥ ಯೋಜನೆಗಳನ್ನ ಈ ವ್ಯವಸ್ಥೆಯಲ್ಲಿ ತರಬೇಕು ಎಂದ ನಂಜಾವಧೂತ ಸ್ವಾಮೀಜಿ.