ನಗರದ ಶೇಷಾದ್ರಿಪುರಂ ಪದವಿ ಕಾಲೇಜಿನ ವಿವೇಕಾನಂದ ಅಧ್ಯಯನ ಕೇಂದ್ರವು ಆಂತರಿಕ ಗುಣಮಟ್ಟದ ಭದ್ರತಾ ಘಟಕದ ಸಹಯೋಗದೊಂದಿಗೆ ‘ವಿವೇಕ-ಭಾರತ ಅನಾವರಣ’ಶೀರ್ಷಿಕೆಯಡಿ ಮಕ್ಕಳಲ್ಲಿ ಪುಸ್ತಕ ಓದುವ ಅಭ್ಯಾಸ ಮೂಡಿಸುವ ಸದುದ್ದೇಶದಿಂದ ‘ಒಂದು ದಿನದ ಭಿತ್ತಿಚಿತ್ರ ಪ್ರದರ್ಶನ ಮತ್ತು ಪುಸ್ತಕ ಮೇಳ’ವನ್ನು ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿತ್ತು.
ತುಮಕೂರು : ನಗರದ ಶೇಷಾದ್ರಿಪುರಂ ಪದವಿ ಕಾಲೇಜಿನ ವಿವೇಕಾನಂದ ಅಧ್ಯಯನ ಕೇಂದ್ರವು ಆಂತರಿಕ ಗುಣಮಟ್ಟದ ಭದ್ರತಾ ಘಟಕದ ಸಹಯೋಗದೊಂದಿಗೆ ‘ವಿವೇಕ-ಭಾರತ ಅನಾವರಣ’ಶೀರ್ಷಿಕೆಯಡಿ ಮಕ್ಕಳಲ್ಲಿ ಪುಸ್ತಕ ಓದುವ ಅಭ್ಯಾಸ ಮೂಡಿಸುವ ಸದುದ್ದೇಶದಿಂದ ‘ಒಂದು ದಿನದ ಭಿತ್ತಿಚಿತ್ರ ಪ್ರದರ್ಶನ ಮತ್ತು ಪುಸ್ತಕ ಮೇಳ’ವನ್ನು ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿತ್ತು.
ಪ್ರಗತಿ ವಾಹಿನಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶಿಲ್ಪಾ ಟಿ. ಎನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಓದುವ ಅಭ್ಯಾಸವು ನಮಗೆ ಜ್ಞಾನ ನೀಡುತ್ತದೆ, ಶಬ್ಧಕೋಶವನ್ನು ಮತ್ತು ಆಲೋಚನಾ ಶಕ್ತಿ ಹೆಚ್ಚಿಸುತ್ತದೆ. ನಾವು ಕಠಿಣ ಪರಿಸ್ಥಿತಿಗಳಲ್ಲಿದ್ದಾಗ ಪುಸ್ತಕಗಳು ಅತ್ಯುತ್ತಮ ಮಾರ್ಗದರ್ಶಿಯಾಗಿ ನಮಗೆ ಸಹಾಯ ಮಾಡುತ್ತವೆ. ಪ್ರತಿ ವಯೋಮಾನದ ಜನರಲ್ಲಿನ ಒತ್ತಡದ ಮಟ್ಟವನ್ನು ನಿವಾರಿಸಲು ಪುಸ್ತಕ ಓದುವುದು ಉತ್ತಮ ಮಾರ್ಗ ಎಂದರು.
ತುಮಕೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿಭಾಗದ ಮುಖ್ಯಸ್ಥರಾದ ಡಾ. ಕೆ. ವಿ. ಅನಸೂಯರವರು ತಮ್ಮ ಮುಖ್ಯ ಉಪನ್ಯಾಸದಲ್ಲಿ ಮಾತನಾಡುತ್ತಾ, ಸ್ವಾಮಿ ವಿವೇಕಾನಂದರ ಶ್ರೇಷ್ಠ ಸಂದೇಶ ಮತ್ತು ಉದಾತ್ತ ಚಿಂತನೆಗಳು ಸ್ಛೂರ್ತಿಯ ಕಿಡಿಯಾಗಿದ್ದು, ಅದನ್ನು ಹೊತ್ತಿಸುವಂತಹ ಈ ಕಾರ್ಯಕ್ರಮವು ‘ಸ್ವಾಮಿ ವಿವೇಕಾನಂದರ ಮಹಾಸಮಾಧಿ ದಿನ’ವಾದ ಇಂದು ಅತ್ಯಂತ ವಿಶೇಷ ಎಂದರು.
ಸ್ವಾಮಿ ವಿವೇಕಾನಂದರು ಮತ್ತು ಭಾರತೀಯ ಸನಾತನ ಪರಂಪರೆ ಪರಿಚಯಿಸುವಲ್ಲಿ ಆಯೋಜಿಸಿದ್ದ ‘ವಿವೇಕ-ಭಾರತ ಅನಾವರಣ’ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು. ತುಮಕೂರು ನಗರದ ವಿವಿಧ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಿಂದ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿವೇಕಾನಂದ ಅಧ್ಯಯನ ಕೇಂದ್ರದ ಸ್ವಯಂಸೇವಕರಿಂದ ಪ್ರಾರ್ಥನೆ ನೆರವೇರಿತು. ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ ಪೂರ್ವಿಕ ಕಶ್ಯಪ್ ಸ್ವಾಗತಿಸಿ, ಸಾನಿಯಾ ಅಮ್ರಿನ್ ವಂದಿಸಿದರು. ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ ಮೋನಿಷಾ ನಿರೂಪಿಸಿದರು. ಪ್ರಾಂಶುಪಾಲ ಡಾ. ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ವಿವೇಕಾನಂದ ಅಧ್ಯಯನ ಕೇಂದ್ರದ ಸಂಯೋಜಕ ಪ್ರೊ. ರಮ್ಯ ಕಲ್ಲೂರ್ ರವರು ಮತ್ತು ಪ್ರೊ. ಶ್ರೀನಿಧಿ ಹಾಗೂ ಪ್ರಾಧ್ಯಾಪಕರು ಇದ್ದರು.