ತುಮಕೂರಿನ ಜಿಲ್ಲಾಸ್ಪತ್ರೆಯಲ್ಲಿ ಶ್ವಾನಗಳದ್ದೇ ದರ್ಬಾರ ಆಗಿದ್ದು ರೋಗಿಗಳ ಕೊಠಡಿಯಲ್ಲಿ ರಾತ್ರಿಯೆಲ್ಲಾ ಶ್ವಾನಗಳು ಓಡಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ತುಮಕೂರು: : ತುಮಕೂರಿನ ಜಿಲ್ಲಾಸ್ಪತ್ರೆಯಲ್ಲಿ ಶ್ವಾನಗಳದ್ದೇ ದರ್ಬಾರ ಆಗಿದ್ದು ರೋಗಿಗಳ ಕೊಠಡಿಯಲ್ಲಿ ರಾತ್ರಿಯೆಲ್ಲಾ ಶ್ವಾನಗಳು ಓಡಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪ್ರತಿನಿತ್ಯ ನಾಯಿಗಳು ರೋಗಿಗಳ ವಾರ್ಡ್‌ನಲ್ಲಿ ಓಡಾಡಿದರೂ ಯಾರೂ ಗಮನಹರಿಸುತ್ತಿಲ್ಲ. ಶ್ವಾನಗಳ ಈ ಓಡಾಟದಿಂದ ರೋಗಿಗಳು ಹಾಗೂ ಸಂಬಂಧಿಕರು ಕಂಗಾಲಾಗಿದ್ದಾರೆ.
undefined
ರೋಗಿಗಳ ವಾರ್ಡ್‌ಗೆ ಬರುವ ನಾಯಿ ಸಿಕ್ಕ ವಸ್ತುಗಳನ್ನು ತಿಂದು ಪರಾರಿ ಆಗುವ ಶ್ವಾನದ ದೃಶ್ಯವನ್ನು ರೋಗಿ ಸಂಬಂಧಿಕರು ಸೆರೆ ಹಿಡಿದಿದ್ದಾರೆ.
ಮಕ್ಕಳಿಗೆ ಕಚ್ಚಿದ ಶ್ವಾನ
ಹೈದರಾಬಾದ್: ಶಾಲೆಯ ಪ್ರಾಂಶುಪಾಲರೊಬ್ಬರು ತಮ್ಮ ಪ್ರೀತಿಯ ಶ್ವಾನವನ್ನು ಶಾಲೆಗೆ ಕರೆತಂದಿದ್ದು, ಇದು ಮೈದಾನದಲ್ಲಿ ಆಟವಾಡುತ್ತಿದ್ದ ಮಕ್ಕಳ ಮೇಲೆ ದಾಳಿ ಮಾಡಿದ್ದು, ಓರ್ವ ಬಾಲಕನಿಗೆ ಗಾಯವಾಗಿದೆ. ಹೈದರಾಬಾದ್‌ನ ಸನತ್‌ನಗರದಲ್ಲಿರುವ ಸೇಂಟ್ ಥೆರೆಸಾ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಕೂಡಲೇ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಇತ್ತ ಶಾಲೆಗೆ ಶ್ವಾನವನ್ನು ಕರೆತಂದ ಪ್ರಾಂಶುಪಾಲರ ವಿರುದ್ಧ ವಿದ್ಯಾರ್ಥಿಗಳ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಪೋಷಕರು ಶಾಲೆಗೆ ನಾಯಿಯನ್ನು ಕರೆತಂದ ಪ್ರಾಂಶುಪಾಲರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಈ ವರ್ಷದ ಫೆಬ್ರವರಿಯಿಂದಲೂ ಹೈದರಾಬಾದ್ ನಗರದಲ್ಲಿ ಬೀದಿ ನಾಯಿಯ ಹಾವಳಿ ಹೆಚ್ಚಾಗಿದೆ. ಅಂಬರ್‌ಪೇಟೆಯಲ್ಲಿ 5 ವರ್ಷದ ಬಾಲಕನನ್ನು ಬೀದಿ ನಾಯಿಗಳು ಅಟ್ಟಾಡಿಸಿ ದಾಳಿ ನಡೆಸಿ ಕೊಂದು ಹಾಕಿದ್ದವು. ಬೀದಿ ನಾಯಿಗಳ ಹಾವಳಿ ತಡೆಗೆ ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಹಲವು ಕ್ರಮ ಕೈಗೊಂಡಿದ್ದರೂ ಬೀದಿನಾಯಿಗಳ ದಾಳಿ ಆಗಾಗ ನಡೆಯುತ್ತಲೇ ಇವೆ. ನಿನ್ನೆ ನಡೆದ ವಾರ್ಡ್ ಕಚೇರಿಗಳ ಉದ್ಘಾಟನಾ ಸಮಾರಂಭದಲ್ಲಿ ಕೂಡ ತೆಲಂಗಾಣ ಸಚಿವ ಕೆಟಿ ರಾಮರಾವ್ ಕೂಡ ನಗರದಲ್ಲಿ ನಾಯಿಗಳ ದಾಳಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಅಷ್ಟರಲ್ಲಿ ಮತ್ತೊಂದು ಘಟನೆ ನಡೆದಿದೆ.
ಮನೆಯಲ್ಲಿದ್ದ ಚಪ್ಪಲಿ ಕಚ್ಚಿದ 4 ಬೀದಿ ನಾಯಿಗೆ ಸಂತಾನಹರಣ ಶಿಕ್ಷೆ ನೀಡಿದ ಮಾಜಿ ಮೇಯರ್!
ಇನ್ನೊಂದೆಡೆ ಮಹಾರಾಷ್ಟ್ರದ ಔರಂಗಬಾದ್‌ನಲ್ಲಿ ಮಾಜಿ ಮೇಯರ್ ತನ್ನ ಎಲ್ಲಾ ಎಲ್ಲಾ ಅಧಿಕಾರ ಬಳಿಸಿ ಬೀದಿ ನಾಯಿಗಳ ಮೇಲೆ ಸೇಡು ತೀರಿಸಿಕೊಂಡ ಘಟನೆ ಕೆಲ ದಿನಗಳ ಹಿಂದೆ ನಡೆದಿತ್ತು. ಮನೆಯಲ್ಲಿಟ್ಟಿದ್ದ ಚಪ್ಪಲಿಯನ್ನು ಕಚ್ಚಿ ಎಳೆದೊಯ್ದ ಕಾರಣಕ್ಕೆ ಮೇಯರ್ ಸುತ್ತ ಮುತ್ತಲಿನ ಬೀದಿ ನಾಯಿಗಳನ್ನು ಹಿಡಿದು ಸಂತಾಹರಣ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ. ಪಾಲಿಕೆಯ ಮಾಜಿ ಮೇಯರ್ ನಂದಕುಮಾರ್ ಗೊಡೆಲೆ ಈ ಕ್ರಮಕ್ಕೆ ಪರ ವಿರೋಧಗಳು ವ್ಯಕ್ತವಾಗುತ್ತಿದೆ.
ನಕ್ಷತ್ರವಾಡಿ ಏರಿಯಾದಲ್ಲಿರುವ ಮಾಜಿ ಮೇಯರ್ ನಂದಕುಮಾರ್ ಮನೆಯ ಗೇಟ್ ತೆರೆದಿತ್ತು. ರಾತ್ರಿ ವೇಳೆ ಬೀದಿ ನಾಯಿಗಳು ಮನೆಯ ವರಾಂಡ ಪ್ರವೇಶಿಸಿದೆ. ಮನೆಯ ಹೊರಗಡೆ ಇದ್ದ ನಂದಕುಮಾರ್ ಹಾಗೂ ಕುಟುಂಬಸ್ಥರ ಚಪ್ಪಲಿಯನ್ನು ಕಚ್ಚಿದೆ. ಇಷ್ಟೇ ಅಲ್ಲ ಕೆಲ ಚಪ್ಪಲಿಯನ್ನು ಎತ್ತಿಕೊಂಡು ಎಳೆದೊಯ್ದಿದೆ. ಬೆಳಗ್ಗೆ ಎದ್ದು ನೋಡಿದಾಗ ಒಂದೊಂದು ಚಪ್ಪಲಿ ಕಾಣೆಯಾಗಿದೆ.
ಬೀದಿನಾಯಿಗಳ ಭೀಕರ ದಾಳಿಗೆ ವೃದ್ಧ ಬಲಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಚಪ್ಪಲಿ ಕಾಣೆಯಾದ ಕಾರಣ ನಂದಕುಮಾರ್ ಆಕ್ರೋಶಗೊಂಡಿದ್ದಾರೆ. ಹತ್ತಿರದ ಸಿಸಿಟಿವಿ ಪರಿಶೀಲಿಸಲು ಸೂಚಿಸಿದ್ದಾರೆ. ಇದರಂತೆ ಸಿಸಿಟಿವಿ ಪರೀಶೀಲನೆ ವೇಳೆ ಬೀದಿ ನಾಯಿಗಳು ಮನೆಯತ್ತ ನುಗ್ಗಿ ಚಪ್ಪಲಿ ಕಚ್ಚಿ ಎಳೆದೊಯ್ದಿರುವುದು ಪತ್ತೆಯಾಗಿದೆ. ಇದು ಮಾಜಿ ಮೇಯರ್ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದೆ. ತಮ್ಮ ಎಲ್ಲಾ ಅಧಿಕಾರ ಬಳಸಿ ಪಾಲಿಕೆಗೆ ಕರೆ ಮಾಡಿದ್ದಾರೆ. ನಂದಕುಮಾರ್ ಕರೆ ಬೆನ್ನಲ್ಲೇ ಮರುದಿನ ಬೆಳಗ್ಗೆ ನಾಯಿ ಹಿಡಿಯುವ ತಂಡ ನಕ್ಷತ್ರವಾಡಿ ಏರಿಯಾಗೆ ಹಾಜರಾಗಿದೆ.