ವಿಶ್ವನಾಥ್‌ಗೆ ಆಲ್ ಇಂಡಿಯಾ ಟೂರ್ ಹೊಡೆದು ಬಂದ್ರು ಇನ್ನೂ ಬುದ್ಧಿ ಬಂದಿಲ್ಲ : ಸೇಠ್

By Kannadaprabha News  |  First Published Apr 5, 2024, 12:13 PM IST

ವಿಧಾನಪರಿಷತ್ತು ಸದಸ್ಯ ಎಚ್.ವಿಶ್ವನಾಥ್ ಅವರಿಗೆ ಆಲ್ ಇಂಡಿಯಾ ಟೂರ್ ಹೊಡೆದು ಬಂದ್ರು ಇನ್ನೂ ಬುದ್ಧಿ ಬಂದಿಲ್ಲ ಅನ್ಸುತ್ತೇ. ಅವರು ಮೊದಲು ಯಾವ ಪಕ್ಷದಲ್ಲಿದ್ದಾರೆ ಎನ್ನುವುದನ್ನು ಸ್ಪಷ್ಟಪಡಿಸಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಶಾಸಕ ತನ್ವೀರ್ ಸೇಠ್ ಕುಟುಕಿದರು.


 ಮೈಸೂರು :  ವಿಧಾನಪರಿಷತ್ತು ಸದಸ್ಯ ಎಚ್.ವಿಶ್ವನಾಥ್ ಅವರಿಗೆ ಆಲ್ ಇಂಡಿಯಾ ಟೂರ್ ಹೊಡೆದು ಬಂದ್ರು ಇನ್ನೂ ಬುದ್ಧಿ ಬಂದಿಲ್ಲ ಅನ್ಸುತ್ತೇ. ಅವರು ಮೊದಲು ಯಾವ ಪಕ್ಷದಲ್ಲಿದ್ದಾರೆ ಎನ್ನುವುದನ್ನು ಸ್ಪಷ್ಟಪಡಿಸಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಶಾಸಕ ತನ್ವೀರ್ ಸೇಠ್ ಕುಟುಕಿದರು.

ರಾಜವಂಶಸ್ಥ ಯದುವೀರ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಬೇಕೆಂಬ ಎಚ್.ವಿಶ್ವನಾಥ್ ಹೇಳಿಕೆಗೆ ಮೈಸೂರಿನಲ್ಲಿ ಗುರುವಾರ ಪ್ರತಿಕ್ರಿಯಿಸಿದ ಅವರು, ವಿಶ್ವನಾಥ್ ಅವರಿಗೆ ವಯಸ್ಸಿನ ಸಮಸ್ಯೆ, ಹೀಗಾಗಿ ಏನೇನೋ ಮಾತನಾಡುತ್ತಾರೆ. ಅವರ ಮಾತಿನ ಮೇಲೆ ಅವರಿಗೇ ಗಮನ ಇರೋದಿಲ್ಲ ಎಂದರು.

Latest Videos

undefined

ಅವಿರೋಧವಾಗಿ ಹೇಗೆ ಆಯ್ಕೆ ಮಾಡೋಕೆ ಆಗುತ್ತೇ? ಈಗಾಗಲೇ 15 ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಉಮೇದುವಾರಿಕೆ ವಾಪಸ್ ಪಡೆದರೂ ಅವಿರೋಧವಾಗಿ ಆಯ್ಕೆ ಮಾಡಿದಾಗೆ ಆಗುತ್ತಾ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಅನ್ನೋದು ಒಂದು ಪ್ರಕ್ರಿಯೆಯಾಗಿ ನಡೆಯಬೇಕು. ಎಚ್. ವಿಶ್ವನಾಥ್ ಅವರ ಹೇಳಿಕೆಯಿಂದ ನಮಗೆ ಏನು ಹಿನ್ನಡೆ ಆಗುವುದಿಲ್ಲ. ‌ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಗೆಲುವಿನ ವಾತಾವರಣ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್‌ಗಾದ ಕತೆ ಬಿಜೆಪಿಗೂ ಆಗಲಿದೆ

 

ಗುಂಡ್ಲುಪೇಟೆ(ಜ.28):  ಕಾಂತರಾಜು ವರದಿ ಒಂದು ಜಾತಿಗೆ ಸೇರಿದ್ದಲ್ಲ, ಎಲ್ಲಾ ಜಾತಿಯ ಶೋಷಿತರ ಸಮೀಕ್ಷೆಯ ವರದಿಯನ್ನು ಹೊಂದಿದೆ. ರಾಜ್ಯ ಸರ್ಕಾರ ಇದನ್ನು ಯಾಕೆ ಸ್ವೀಕರಿಸುತ್ತಿಲ್ಲ ಎಂಬುದು ಅರ್ಥವಾಗುತ್ತಿಲ್ಲ ಎಂದು ಮಾಜಿ ಸಚಿವ ಎಚ್. ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದರು. 

ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಾವು ಕಾಂತರಾಜ ವರದಿಯನ್ನು ಜಾರಿ ಮಾಡಿ ಎಂದು ಕೇಳುತ್ತಿಲ್ಲ, ಮೊದಲು ವರದಿಯನ್ನು ಸ್ವೀಕರಿಸಿ ನಂತರ ಸಾರ್ವಜನಿಕರ ಚರ್ಚೆಗೆ ಬಿಡಿ, ಅದು ಎಲ್ಲಾ ಜಾತಿ ಜನಾಂಗಗಳ ಆರ್ಥಿಕ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಎಂದರು.

ಸಂವಿಧಾನ ಎಲ್ಲರಿಗೂ ಮೂಲಭೂತ ಹಕ್ಕು ನೀಡಿದೆ: ಸಚಿವ ಕೆ.ವೆಂಕಟೇಶ್

ಕಾಂಗ್ರೆಸ್ಸಿಗಾದ ಕಥೆ ಬಿಜೆಪಿಗೆ ಆಗಲಿದೆ: 

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಹೊಂದಾಣಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ವಿಶ್ವನಾಥ್ ಕಳೆದ 2019ರಲ್ಲಿ ಕಾಂಗ್ರೆಸ್, ಜೆಡಿಎಸ್ ಹೊಂದಾಣಿಕೆಯಲ್ಲಿ ಚುನಾವಣೆ ಎದುರಿಸಿದರು ಕಾಂಗ್ರೆಸ್ ಕಥೆ ಏನಾಯಿತು ಅದೇ ಕಥೆ ಬಿಜೆಪಿಗೆ ಆಗಲಿದೆ ಎಂದರು.

click me!