ವಿರಾಜಪೇಟೆ: ಗಣೇಶೋತ್ಸವ ಅದ್ಧೂರಿ ಆಚರಣೆಗೆ ತೀರ್ಮಾನ

By Kannadaprabha NewsFirst Published Aug 1, 2022, 9:40 AM IST
Highlights

ವಿರಾಜಪೇಟೆ: ಗಣೇಶೋತ್ಸವ ಅದ್ಧೂರಿ ಆಚರಣೆಗೆ ತೀರ್ಮಾನ

ಗೌರಿ ಗಣೇಶ ನಾಡಹಬ್ಬ ಒಕ್ಕೂಟದಿಂದ 21 ಸಮಿತಿಗಳ ಪದಾಧಿಕಾರಿಗಳ ಪೂರ್ವಭಾವಿ ಸಭೆ

ವಿರಾಜಪೇಟೆ (ಅ.1) : ಐತಿಹಾಸಿಕ ಗೌರಿ ಗಣೇಶ(Gauri Ganesha) ನಾಡ ಹಬ್ಬ ಒಕ್ಕೂಟ ವಿರಾಜಪೇಟೆ(Virajapete) ವತಿಯಿಂದ ನಗರ ಪುರಸಭೆಯ ಸಭಾಂಗಣದಲ್ಲಿ ವಿವಿಧ ಇಲಾಖೆಗಳು ಸೇರಿದಂತೆ ಉತ್ಸವ ಆಚರಿಸುವ 21 ಸಮಿತಿಗಳ ಪದಾಧಿಕಾರಿಗಳ ಪೂರ್ವಭಾವಿ ಸಭೆ ನಡೆಯಿತು. ಒಕ್ಕೂಟ ಅಧ್ಯಕ್ಷ ಸಾಯಿನಾಥ್‌ ನಾಯಕ್‌(Sainath Nayak) ಅಧ್ಯಕ್ಷತೆವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ಸಂಭವಿಸಿದ ಜಲಪ್ರಳಯ ದುರಂತ ಮತ್ತು ಸತತ ಎರಡು ವರ್ಷಗಳಲ್ಲಿ ಕೋವಿಡ್‌(Covid) ಮಹಾಮಾರಿಯಿಂದಾಗಿ ಗೌರಿ ಗಣೇಶ ಉತ್ಸವ ವಿಜೃಂಭಣೆಯಿಂದ ಆಚರಿಸಲು ಸಾಧ್ಯವಾಗಲಿಲ್ಲ. ಪ್ರಸ್ತುತ ವರ್ಷ ಒಕ್ಕೂಟದ ನಿರ್ಧಾರದಂತೆ ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದ್ದು, ಸಭೆಯಲ್ಲಿ ಹಾಜರಿರುವ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಆರಕ್ಷಕ ಇಲಾಖೆಯು ಸಹಾಕರಿಸಬೇಕು ಎಂದು ಕೋರಿದರು.

ವಿರಾಜಪೇಟೆ ಉಪ ವಿಭಾಗ ಡಿವೈಎಸ್ಪಿ ನಿರಂಜನ್‌ ರಾಜೇ ಅರಸ್‌ ಮಾತನಾಡಿ, ಸರ್ಕಾರದ ಆದೇಶದಂತೆ ರಾತ್ರಿ 10 ಗಂಟೆಯ ನಂತರ ಬೆಳಗ್ಗೆ 6ರ ವರೆಗೆ ಲೌಡ್‌ ಸ್ಪೀಕರ್‌ಗಳಿಗೆ ಅವಕಾಶವಿಲ್ಲ. ಸಮಾರಂಭಗಳಿಗೂ ಅವಕಾಶವಿಲ್ಲದಾಗಿದ್ದು ಉತ್ಸವ ಅಚರಣೆಯನ್ನು ರಾತ್ರಿ 10ರ ಒಳಗಿನ ಸಮಯಕ್ಕೆ ಸಿಮಿತಗೊಳಿಸಬೇಕು. ಎಲ್ಲ ಸಮಿತಿಗಳು ಸರ್ಕಾರದ ಅದೇಶವನ್ನು ಪಾಲನೆ ಮಾಡಬೇಕು ಎಂದರು.

Panchanga: ಇಂದು ಗೌರಿ-ಗಣೇಶನ ಪ್ರಾರ್ಥನೆ, ಪೂಜೆ ಮಾಡಿದರೆ ಸಕಲ ವಿಘ್ನಗಳೂ ನಿವಾರಣೆಯಾಗುವವು

ಒಕ್ಕೂಟದ ಕಾರ್ಯದರ್ಶಿ ಪ್ರದೀಪ್‌ ರೈ ಮಾತನಾಡಿ, ವಿರಾಜಪೇಟೆ ನಾಡಹಬ್ಬವು ಇತಿಹಾಸ ಪ್ರಸಿದ್ಧವಾಗಿದ್ದು, ಹಲವು ವರ್ಷಗಳಿಂದ ಅನಂತಪದ್ಮನಾಭ ವ್ರತದಂದು ಸಂಜೆ ಮಂಟಪದಲ್ಲಿ ಉತ್ಸವ ಮೂರ್ತಿ ಕುಳ್ಳಿರಿಸಿ ಪ್ರಾತಃಕಾಲ ಗೌರಿ ಕೆರೆಯಲ್ಲಿ ವಿಸರ್ಜನೆ ಮಾಡುವುದು ಪದ್ಧತಿಯಾಗಿದೆ. ಈಗ ಸಮಯ ಬದಲಾವಣೆ ಮತ್ತು ಶಬ್ದ ಮಾಲಿನ್ಯ ಮಾಡದಂತೆ ಆದೇಶವಾಗಿರುವುದು ಸಮಂಜಸವಲ್ಲ. ಮಡಿಕೇರಿಯಲ್ಲಿ ಆಚರಿಸುವ ವಿಶ್ವ ವಿಖ್ಯಾತ ದಸರಾ ಉತ್ಸವಕ್ಕೆ 100 ಪಟ್ಟು ಶಬ್ದ ಹೊರಹೊಮ್ಮುವ ಲೌಡ್‌ ಸ್ಪೀಕರ್‌ ಅಳವಡಿಕೆಗೆ ಅನುಮತಿ ನೀಡಲಾಗುತ್ತಿದ್ದು, ಅದರಂತೆ ವಿರಾಜಪೇಟೆ ನಾಡಹಬ್ಬ ಆಚರಣೆಗೂ ಅನುಮತಿ ನೀಡಬೇಕು ಎಂದು ಹೇಳಿದರು.

ಪಟ್ಟಣದಲ್ಲಿ ರಸ್ತೆಗಳು ಗುಂಡಿಮಯವಾಗಿದ್ದು, ದುರಸ್ತಿಗೊಳಿಸುವಂತೆ ಸಮಿತಿಗಳ ಸದಸ್ಯರು ಆಗ್ರಹಿಸಿದರು. ಲೋಕೋಪಯೋಗಿ ಇಲಾಖೆಯ ಅಭಿಯಂತರರು ಉತ್ತರಿಸಿ ರಸ್ತೆಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಶೋಭಯಾತ್ರೆಯಲ್ಲಿ ತೆರಳುವ ಮಂಟಪಗಳಿಗೆ ಅಡಚಣೆಯಾಗುತ್ತಿರುವ ವಿದ್ಯುತ್‌ ತಂತಿ ಮಾರ್ಗಗಳನ್ನು ತೆರವುಗೊಳಿಸುವಂತೆ, ಆರೋಗ್ಯ ಇಲಾಖೆಯ ವತಿಯಿಂದ ಉತ್ಸವ ಅಚರಣೆ ಸಂದರ್ಭದಲ್ಲಿ ತುರ್ತು ಚಿಕಿತ್ಸಾ ಸಲಕರಣೆಗಳೋಂದಿಗೆ ಸನ್ನದ್ಧರಾಗಿರಬೇಕು. ಶೋಭಯಾತ್ರೆಗೆ ಹೊರರಾಜ್ಯ ಮತ್ತು ಅಂತರ್‌ ಜಿಲ್ಲೆಗಳಿಂದ ಆಗಮಿಸುವ ಪ್ರವಾಸಿಗರು, ಭಕ್ತರಗೆ ಸೂಕ್ತ ತಪಾಸಣೆ ಕೈಗೊಳ್ಳಬೇಕು. ಪ್ರವಾಸಿಗರು ತಂಗುವ ವಿವಿಧ ಹೊಂ ಸ್ಟೇ, ಹೊಟೇಲ… ಮತ್ತು ಪ್ರವಾಸಿ ಗೃಹಗಳನ್ನು ತಪಾಸಣೆಗೆ ಒಳಪಡಿಸಿ ನೀಡುವಂತಾಗಬೇಕು ಎಂದು ಸಮಿತಿಯ ಸದಸ್ಯರು ವಿವಿಧ ಇಲಾಖೆಯ ಅಧಿಕಾರಿಗಳನ್ನು ಆಗ್ರಹಿಸಿದರು.

ಶ್ರಾವಣ ಮುಗಿಯುತ್ತಿದ್ದಂತೆ ಬಾಡೂಟಕ್ಕೆ ಮುಗಿಬಿದ್ದ ಜನ

ಪಟ್ಟಣ ಪಂಚಾಯಿತಿ ಮುಖ್ಯಧಿಕಾರಿ ಚಂದ್ರಕುಮಾರ್‌ ಮಾತನಾಡಿ, ನಗರದ ವಿವಿದಡೆಗಳಲ್ಲಿ ಅಳವಡಿಸಲಾಗುವ ಬಂಟಿಂW್ಸ…ಗಳನ್ನು ಉತ್ಸವ ಕಳೆದ ನಂತರ ಕಳಚುವ ಕ್ರಮಕ್ಕೆ ಸಮಿತಿಗಳು ಮುಂದಾಗಬೇಕು. ನಗರದಲ್ಲಿ ಶುಚಿತ್ವಕ್ಕೆ ಪ್ರಾಮುಖ್ಯತೆ ನೀಡಬೇಕು. ಪುರಸಭೆಯ ವತಿಯಿಂದ ಎಲ್ಲ ಸೌಕರ್ಯಗಳನ್ನು ಉತ್ಸವಕ್ಕೆ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಸಭೆಯಲ್ಲಿ ವಿರಾಜಪೇಟೆ ವೃತ್ತ ನಿರೀಕ್ಷಕ ಶಿವರುದ್ರ, ನಗರ ಠಾಣಾಧೀಕಾರಿ ವಿ.ಎಸ್‌. ಶ್ರೀಧರ್‌, ಗ್ರಾಮಾಂತರ ಠಾಣೆಯ ಠಾಣಾಧಿಕಾರಿ, ಪುರಸಭೆಯ ಉಪಾಧ್ಯಕ್ಷ ವಿನಾಂಕ್‌ ಕುಟ್ಟಪ್ಪ, ಕಂದಾಯ ಇಲಾಖೆಯ ಶಿರೇಸ್ತೆದಾರ್‌, ಒಕ್ಕೂಟದ ಉಪಾಧ್ಯಕ್ಷರು ಉಪಸ್ಥಿತರಿದ್ದರು.

click me!