ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡ ಮೊತ್ತ ಪಾವತಿಗೆ ನೀಡಿರುವ ಶೇ. 50ರಷ್ಟುರಿಯಾಯಿತಿ ಸೌಲಭ್ಯ ಶನಿವಾರ ಅಂತ್ಯಗೊಂಡ ಹಿನ್ನೆಲೆಯಲ್ಲಿ ಶನಿವಾರ ಒಂದೇ ದಿನ ಹುಬ್ಬಳ್ಳಿ-ಧಾರವಾಡ ಕಮೀನಷರೇಟ್ ವ್ಯಾಪ್ತಿಯಲ್ಲಿ . 25,61,175 ದಂಡ ಸಂಗ್ರಹಿಸಲಾಗಿದೆ. ಈ ಮೂಲಕ ಒಂದು ವಾರದಲ್ಲಿ ಬರೋಬರಿ . 73,31,925 ದಂಡ ವಸೂಲಿಯಾಗಿದೆ.
ಹುಬ್ಬಳ್ಳಿ (ಫೆ.12) : ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡ ಮೊತ್ತ ಪಾವತಿಗೆ ನೀಡಿರುವ ಶೇ. 50ರಷ್ಟುರಿಯಾಯಿತಿ ಸೌಲಭ್ಯ ಶನಿವಾರ ಅಂತ್ಯಗೊಂಡ ಹಿನ್ನೆಲೆಯಲ್ಲಿ ಶನಿವಾರ ಒಂದೇ ದಿನ ಹುಬ್ಬಳ್ಳಿ-ಧಾರವಾಡ ಕಮೀನಷರೇಟ್ ವ್ಯಾಪ್ತಿಯಲ್ಲಿ . 25,61,175 ದಂಡ ಸಂಗ್ರಹಿಸಲಾಗಿದೆ. ಈ ಮೂಲಕ ಒಂದು ವಾರದಲ್ಲಿ ಬರೋಬರಿ . 73,31,925 ದಂಡ ವಸೂಲಿಯಾಗಿದೆ.
. ₹15.91 ಕೋಟಿಗೂ ಅಧಿಕ ದಂಡದ ಮೊತ್ತ ಬಾಕಿ ಇತ್ತು. ಆದರೆ ಕೇವಲ . 73 ಲಕ್ಷ ದಂಡ ಮಾತ್ರ ಸಂಗ್ರಹವಾಗಿದೆ. ಶೇ. 50ರಷ್ಟುದಂಡದ ರಿಯಾಯಿತಿಯ ಸರ್ಕಾರದ ಆದೇಶದಂತೆ ಫೆ. 4ರಿಂದ ದಂಡ ವಸೂಲಿ ಕಾರ್ಯವನ್ನು ಹುಬ್ಬಳ್ಳಿ-ಧಾರವಾಡ ಕಮಿಷನರೇಟ್(Hubli-Dharwad Commissionerate) ವ್ಯಾಪ್ತಿಯಲ್ಲಿ ಆರಂಭಿಸಲಾಗಿತ್ತು. ಫೆ. 4ರಂದು . 3,02,950, 5ರಂದು . 3,20,750, 6ರಂದು . 4,93,975, 7ರಂದು . 6,42,675, 8ರಂದು 7,26,075, 9ರಂದು 8,79,475, 10ರಂದು 10,91,150 ಹಾಗೂ ದಂಡ ಭರಿಸುವ ಕೊನೆ ದಿನವಾದ ಶನಿವಾರ ರಾತ್ರಿವರೆಗೆ . 25,61,175 ದಂಡ ಸಂಗ್ರಹಿಸಲಾಗಿದೆ.
ಸಂಚಾರ ನಿಯಮ ಉಲ್ಲಂಘನೆ: 7ನೇ ದಿನ ₹12.36 ಕೋಟಿ ಸಂಗ್ರಹ!
1250 ಪ್ರಕರಣಗಳಲ್ಲಿ ಹುಬ್ಬಳ್ಳಿ-ಧಾರವಾಡ ಒನ್, ಕರ್ನಾಟಕ ಒನ್‌ನಲ್ಲಿ . 3,13,700 ದಂಡ ತುಂಬಲಾಗಿದೆ. 28,409 ಪ್ರಕರಣಗಳಲ್ಲಿ ನಗರದ ಸಂಚಾರಿ ಪೊಲೀಸ್ ಠಾಣೆ ಹಾಗೂ ಪಿಡಿಎ ಮಷಿನ್ ಹೊಂದಿರುವ ಸಂಚಾರಿ ಠಾಣೆ ಪೊಲೀಸ್ ಸಿಬ್ಬಂದಿ . 70,18,225 ದಂಡ ಸಂಗ್ರಹಿಸಿದ್ದಾರೆ.
2019ರಿಂದ 2022ರ ವರೆಗೆ ಒಟ್ಟು 3,25,406 ಸಂಚಾರಿ ನಿಯಮದ ಉಲ್ಲಂಘನೆಯ ಪ್ರಕರಣಗಳು(Violation of traffic rules case) ದಾಖಲಾಗಿವೆ. . 15.91 ಕೋಟಿಗೂ ಅಧಿಕ ದಂಡದ ಮೊತ್ತ ಬಾಕಿಯಿತ್ತು. ಈಗ ಒಂದೇ ವಾರದಲ್ಲಿ . 73 ಲಕ್ಷ ದಂಡ ವಸೂಲಾಗಿದೆ. ಕೊನೆ ದಿನವಾದ ಶನಿವಾರ . 25.61 ಲಕ್ಷ ದಂಡ ಸಂಗ್ರಹಿಸಲಾಗಿದೆ. ದಂಡ ಸಂಗ್ರಹ ನಿರಂತರ ಪ್ರಕ್ರಿಯೆಯಾಗಿದೆ. ಈಗ ಸರ್ಕಾರ ರಿಯಾಯಿತಿ ನೀಡಿದ್ದರಿಂದ ವಾಹನ ಸವಾರರೇ ಹೆಚ್ಚಿನ ಪ್ರಮಾಣದಲ್ಲಿ ಬಂದು ದಂಡ ಪಾವತಿಸಿದ್ದಾರೆ ಎಂದು ಪೊಲೀಸ್ ಉಪ ಆಯುಕ್ತ ಡಾ. ಗೋಪಾಲ ಬ್ಯಾಕೋಡ ತಿಳಿಸಿದ್ದಾರೆ.
. 15.91 ಕೋಟಿಗೂ ಅಧಿಕ ದಂಡದ ಮೊತ್ತ ಬಾಕಿ ಇದೆ. ಶೇ. 50ರಷ್ಟುರಿಯಾಯಿತಿ ಇದೆ. ಆದರೂ ಕೇವಲ . 70 ಲಕ್ಷ ದಂಡ ಮಾತ್ರ ಸಂಗ್ರಹವಾಗಿದೆ. ಹಾಗಾಗಿ ರಿಯಾಯಿತಿಯ ಅವಧಿಯನ್ನು ಇನ್ನಷ್ಟುಕಾಲ ವಿಸ್ತರಣೆ ಮಾಡಬೇಕೆಂಬುದು ವಾಹನ ಸವಾರರ ಬೇಡಿಕೆಯಾಗಿದೆ.
6ನೇ ದಿನ ದಾಖಲೆಯ 9 ಕೋಟಿ ಟ್ರಾಫಿಕ್ ದಂಡ; ಈವರೆಗೆ 18 ಲಕ್ಷ ಪ್ರಕರಣ ಇತ್ಯರ್ಥ
57 ಪ್ರಕರಣಗಳಿಗೆ ದಂಡ ಪಾವತಿಸಿದ ಯುವಕ
ನಗರದ ವಾಹನ ಸವಾರನೊಬ್ಬ ಬರೋಬ್ಬರಿ 57 ಪ್ರಕರಣಗಳಿಗೆ ದಂಡ ಪಾವತಿಸಿದ್ದಾನೆ. ಹುಬ್ಬಳ್ಳಿ ನಿವಾಸಿ ಸೂರಜ್ ಸಿಂಗ್ ಠಾಕೂರ ಎಂಬ ಯುವಕನ ಬೈಕ್ ಮೇಲೆ 57 ಪ್ರಕರಣ ದಾಖಲಾಗಿದ್ದವು. ಸುಮಾರು . 28,500 ದಂಡದ ಮೊತ್ತವಾಗಿತ್ತು. ರಿಯಾಯಿತಿ ಹಿನ್ನೆಲೆ ಹಳೆ ಕೋರ್ಚ್ ಸರ್ಕಲ್ ಹತ್ತಿರ ಸಂಚಾರಿ ಪೊಲೀಸರ ಬಳಿ . 14,250 ದಂಡ ತುಂಬಿದ್ದಾನೆ. ಈ ವೇಳೆ ಪೂರ್ವ ಸಂಚಾರಿ ಎಎಸ್‌ಐ ಬಿ.ಬಿ. ಮಾಯಣ್ಣವರ ಹಾಗೂ ಸಿಬ್ಬಂದಿಯಾದ ಶಂಭು ರೆಡ್ಡರ, ಕುಬೇರ ಕಾರಬಾರಿ ಇತರರಿದ್ದರು. ಇನ್ನು ಶನಿವಾರ ರಿಯಾಯಿತಿ ದರದಲ್ಲಿ ದಂಡ ಪಾವತಿಸಲು ಕೊನೆ ದಿನವಾದ ಹಿನ್ನೆಲೆ ನಿಯಮ ಉಲ್ಲಂಘಿಸಿದ ವಾಹನ ಸವಾರರು ಠಾಣೆಗೆ ಸ್ವತಃ ತೆರಳಿ ದಂಡ ತುಂಬಿದ್ದಾರೆ.