ದಾವಣಗೆರೆ: ಆನಗೋಡು ಬಳಿ ಭೀಕರ ಅಪಘಾತ: 3 ಸಾವು

Published : Feb 12, 2023, 04:58 AM IST
ದಾವಣಗೆರೆ: ಆನಗೋಡು ಬಳಿ ಭೀಕರ ಅಪಘಾತ: 3 ಸಾವು

ಸಾರಾಂಶ

ದೇವರ ಕಾರ್ಯದಲ್ಲಿ ಊಟ ಮುಗಿಸಿ ದಾವಣಗೆರೆಗೆ ಮರಳುತ್ತಿದ್ದ ಮೂವರು ಯುವಕರಿದ್ದ ಬೈಕ್‌ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮೂವರು ದುರಂತ ಸಾವು ಕಂಡ ಘಟನೆ ತಾಲೂಕಿನ ಆನಗೋಡು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ.

ದಾವಣಗೆರೆ (ಫೆ.12) : ದೇವರ ಕಾರ್ಯದಲ್ಲಿ ಊಟ ಮುಗಿಸಿ ದಾವಣಗೆರೆಗೆ ಮರಳುತ್ತಿದ್ದ ಮೂವರು ಯುವಕರಿದ್ದ ಬೈಕ್‌ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮೂವರು ದುರಂತ ಸಾವು ಕಂಡ ಘಟನೆ ತಾಲೂಕಿನ ಆನಗೋಡು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ.

ದಾವಣಗೆರೆ(Davanagere) ಹೊರ ವಲಯದ ಶ್ರೀರಾಮ ನಗರ(Sriramanagara)ದ ವಾಸಿಗಳಾದ, ವಿವಿಧ ಮಿಲ್‌ಗಳಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಸಂದೇಶ್‌(23 ವರ್ಷ), ಪರಶುರಾಮ(24) ಹಾಗೂ ಶಿವು ಮೃತಪಟ್ಟವರು. ತಾಲೂಕಿನ ಕಾಟಿಹಳ್ಳಿ ಗ್ರಾಮದ ಸಂಬಂಧಿಕರ ಮನೆಯಲ್ಲಿ ಕಳೆದ ರಾತ್ರಿ ದೇವರ ಕಾರ್ಯಕ್ಕೆಂದು ಮೂವರೂ ತೆರಳಿದ್ದರು ಎಂದು ಹೇಳಲಾಗಿದೆ. ಮಿಲ್‌ಗಳಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಸಂದೇಶ್‌, ಪರಶುರಾಮ ಹಾಗೂ ಶಿವು ಮೂವರೂ ಸ್ನೇಹಿತರು.

 

ತುಮಕೂರು: ಬೈಕ್-ಲಾರಿ ನಡುವೆ ಅಪಘಾತ, ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳ ದುರ್ಮರಣ

ಕಾಟಿಹಳ್ಳಿ ಗ್ರಾಮ(Katihallli village)ದಲ್ಲಿ ಸಂಬಂಧಿಗಳ ಮನೆಯಲ್ಲಿ ದೇವರ ಕಾರ್ಯ ಮುಗಿಸಿ, ವಾಪಾಸ್ಸು ದಾವಣಗೆರೆ ಕಡೆಗೆ ಬರುವಾಗ ಲಾರಿಯು ಯುವಕರಿದ್ದ ಬೈಕ್‌ಗೆ ಅತಿ ವೇಗದಲ್ಲಿ ಬಂದು, ಡಿಕ್ಕಿ ಹೊಡೆದ ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್‌ನಲ್ಲಿ ಸಾಗುತ್ತಿದ್ದ ಸಂದೇಶ, ಪರಶುರಾಮ, ಶಿವು ಹೆದ್ದಾರಿ ಪಕ್ಕದ ಸವೀರ್‍ಸ್‌ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದು, ಸಾವನ್ನಪ್ಪಿದ್ದು ಭೀಕರ ಅಪಘಾತ ಸಂಭವಿಸಿದ್ದಕ್ಕೆ ಸಾಕ್ಷಿ. ಲಾರಿ ಡಿಕ್ಕಿ ಹೊಡೆದಿದ್ದರಿಂದ ಬೈಕ್‌ ನಜ್ಜುಗುಜ್ಜಾಗಿದ್ದು, ಅಪಘಾತಕ್ಕೆ ಕಾರಣವಾದ ಲಾರಿ ಹಾಗೂ ಚಾಲಕನಿಗಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.

ಮೃತರ ಪೈಕಿ ಪರಶುರಾಮನಿಗೆ ಒಂದೂವರೆ ವರ್ಷದ ಹಿಂದಷ್ಟೇ ಮದುವೆಯಾಗಿದ್ದು, ಆತನ ಪತ್ನಿ ಈಗಷ್ಟೇ 7 ತಿಂಗಳ ಗರ್ಭಿಣಿಯಾಗಿದ್ದಾರೆ. ಇನ್ನು ತಂದೆ, ತಾಯಿಯನ್ನು ಕಳೆದುಕೊಂಡಿದ್ದ ಶಿವು ಅಜ್ಜಿ ಆರೈಕೆಯಲ್ಲಿ ಬೆಳೆದ ಮಗ. ಅಪಘಾತದಲ್ಲಿ ಮೃತಪಟ್ಟಸಂದೇಶ್‌, ಪರಶುರಾಮ, ಶಿವು ಶವಗಳನ್ನು ಜಿಲ್ಲಾಸ್ಪತ್ರೆಗೆ ಶನಿವಾರ ಬೆಳಗಿನ ಜಾವ ಶವಾಗಾರಕ್ಕೆ ತರಲಾಗಿತ್ತು. ಶವಾಗಾರದ ಬಳಿ ಮೃತರ ಕುಟುಂಬಸ್ಥರು, ಬಂಧುಗಳು ಆಕ್ರಂದನ ಮುಗಿಲು ಮುಟ್ಟುವಂತಿತ್ತು. ದಾವಣಗೆರೆ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ, ತನಿಖೆ ಕೈಗೊಂಡಿದ್ದಾರೆ. ಮೃತ ಮೂವರ ಜೊತೆಗೆ ಇನ್ನೂ ಯಾರಾದರೂ ದೇವರ ಕಾರ್ಯಕ್ಕೆ ಯಾರೆಲ್ಲಾ ಹೋಗಿದ್ದರು ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸಿದ್ದಾರೆ ಎನ್ನಲಾಗಿದೆ. 

ಶಿಗ್ಗಾಂವಿ ಬಳಿ ಭೀಕರ ಅಪಘಾತ: ಮೈಲಾರಲಿಂಗನ ದರ್ಶನಕ್ಕೆ ಹೊರಟ್ಟಿದ್ದ ಇಬ್ಬರು ಭಕ್ತರ ದುರ್ಮರಣ

ಬೈಕ್‌ಗೆ ಬಸ್‌ ಡಿಕ್ಕಿ: ಸವಾರ ಸಾವು

ಶಿವಮೊಗ್ಗ: ಇಲ್ಲಿನ ವಾಜಪೇಯಿ ಬಡಾವಣೆ ಬಳಿ ಬೈಕ್‌ಗೆ ಬಸ್‌ ಡಿಕ್ಕಿ ಹೊಡೆದು ಬೈಕ್‌ ಸವಾರ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ. ಅಪಘಾತದಲ್ಲಿ ಮೃತಪಟ್ಟಾತ ಜಾರ್ಖಂಡ್‌ ಮೂಲದ ಯುವಕ ಅನ್ಸಾರಿ ಎಂದು ಗುರುತಿಸಲಾಗಿದೆ. ಸಾಗರ ರಸ್ತೆಯಲ್ಲಿ ಶ್ರೀ ರಾಮ್‌ಪುರದಿಂದ ಶಿವಮೊಗ್ಗದ ಕಡೆ ಬರುತ್ತಿದ್ದ ಬೈಕ್‌ನಲ್ಲಿ ಬರುತ್ತಿದ್ದಾಗ ಈ ಘಟನೆ ಸಂಭವಿಸಿದ್ದು, ಕಾರನ್ನು ಹಿಂದಿಕ್ಕಲು ಪ್ರಯತ್ನಿಸುತ್ತಿದ್ದ ವೇಳೆ ಖಾಸಗಿ ಬಸ್‌ಕ್ಕೆ ಡಿಕ್ಕಿಯಾಗಿದೆ. ಅಪಘಾತ ರಭಸಕ್ಕೆ ಸವಾರ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ. ಪಶ್ಚಿಮ ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
Read more Articles on
click me!

Recommended Stories

ಭದ್ರಾವತಿ: ಜೈ ಭೀಮ್ ನಗರದಲ್ಲಿ ಪ್ರೇಮಿಗಳ ವಿಚಾರಕ್ಕೆ ರಕ್ತಪಾತ: ಇಬ್ಬರು ದುರ್ಮರಣ!
'ನಿಮ್ಮ ಸುರಕ್ಷತೆ ನನಗೂ ಮುಖ್ಯ..' ಮಹಿಳಾ ಪ್ರಯಾಣಿಕರ ಮನ ಗೆದ್ದ ಆಟೋ ಚಾಲಕ, ಸಂದೇಶ ವೈರಲ್ ಮಾಡಿದ ಬೆಂಗಳೂರು ಪೊಲೀಸರು!