ಗಿಡ ನೆಟ್ಟು ಹರಸಿದ ವಿನಯ್ ಗುರೂಜಿ

By Kannadaprabha News  |  First Published Sep 6, 2020, 1:56 PM IST

ಗೌರಿಗದ್ದೆ ಗಾಂಧಿ ಸೇವಾಶ್ರಮ ಮತ್ತು ಕೊಪ್ಪ ಅರಣ್ಯ ಇಲಾಖೆ ಸಹಯೋಗದೊಂದಿಗೆ ಸಹಸ್ರಾರು ಗಿಡಗಳನ್ನು ನೆಡುವ ಕಾರ್ಯಕ್ರಮ ನಡೆಸಲಾಗುತ್ತಿದೆ. 


ಕೊಪ್ಪ (ಸೆ.06): ತಾಲೂಕಿನ ಸ್ವರ್ಣಪೀಠಿಕಾಪುರ ಗೌರಿಗದ್ದೆ ದತ್ತಾಶ್ರಮವು ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಇದೀಗ ಗೌರಿಗದ್ದೆ ಗಾಂಧಿ ಸೇವಾಶ್ರಮ ಮತ್ತು ಕೊಪ್ಪ ಅರಣ್ಯ ಇಲಾಖೆ ಸಹಯೋಗದೊಂದಿಗೆ ಸಹಸ್ರಾರು ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಮುಂದಾಗಿದೆ.

ಬುಧವಾರದಿಂದ ಶುಕ್ರವಾರದವರೆಗೂ ನಡೆದ ಗಿಡ ನೆಡುವ ಕಾರ್ಯಕ್ರಮಕ್ಕೆ ‘ಪರಿಸರ ಪ್ರೇಮಿ’ ಸಾಲುಮರದ ತಿಮ್ಮಕ್ಕ ಅವರು ವಿನಯ ಗುರೂಜಿ ಸಮ್ಮುಖದಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Tap to resize

Latest Videos

ಸಿದ್ಧಾರ್ಥ ಹೆಗ್ಡೆ ಸಮಾಧಿಗೆ ಮಂತ್ರಾಕ್ಷತೆ ಹಾಕಿ ಬೋದಿ ವೃಕ್ಷ ನೆಟ್ಟ ವಿನಯ್ ಗುರೂಜಿ

ಗೌರಿಗದ್ದೆ ದತ್ತಾಶ್ರಮದಿಂದ ಕುಪ್ಪಳಿ ಮೂಲಕ ಶೃಂಗೇರಿ ಸಂಪರ್ಕ ಕಲ್ಪಿಸುವ ಬಿಲಗದ್ದೆವರೆಗೆ ಸುಮಾರು 3.5 ಕಿ.ಮೀ. ರಸ್ತೆಯ ಇಕ್ಕೆಲಗಳಲ್ಲಿ ಅರಣ್ಯ ಇಲಾಖೆ ನೀಡಿದ ವಿವಿಧ ಜಾತಿಯ ಸುಮಾರು 600 ಗಿಡಗಳನ್ನು ನೆಡಲಾಗಿದೆ.

ಕಾರ್ಯಕ್ರಮದಲ್ಲಿ ಸಾಲುಮರದ ತಿಮ್ಮಕ್ಕ ಅವರನ್ನು ಸನ್ಮಾನಿಸಿದ ಗೌರವಿಸಿದ ವಿನಯ್‌ ಗುರೂಜಿ ಅವರು, ಪರಿಸರ ಉಳಿದರೆ ಮಾತ್ರ ಮಾನವ ಸೇರಿದಂತೆ ಸರ್ವಜೀವಿಗಳು ಉಳಿಯಲು ಸಾಧ್ಯ. ಪ್ರಕೃತಿ ವಿಕೋಪಗಳನ್ನು ತಡೆಯುವಲ್ಲಿ ಮರಗಳು ಮಹತ್ತರವಾದ ಪಾತ್ರ ವಹಿಸುತ್ತವೆ. ಪ್ರಕೃತಿಮಾತೆಯ ಪ್ರತಿರೂಪವೇ ಆಗಿರುವ ತಿಮ್ಮಕ್ಕ ಅವರಂತಹ ದೇವತೆ ಗಿಡಗಳನ್ನು ನೆಟ್ಟು, ವೃಕ್ಷಗಳನ್ನಾಗಿಸಿ ಪೋಷಿಸಲು ಪ್ರೇರಣೆಯಾಗಿದ್ದಾರೆ. ಇದರಿಂದ ನಮ್ಮೂರಿನ ಕೀರ್ತಿ ಮತ್ತಷ್ಟುಹೆಚ್ಚಾಗಲಿದೆ ಎಂದು ಹೇಳಿದರು.

'ನಾನೂ ಕೊಟ್ಟ ಸಲಹೆ ಎಂದೂ ಸಿಎಂ ನಿರಾಕರಿಸಿಲ್ಲ' : ವಿನಯ್ ಗುರೂಜಿ ...

ಕಾರ್ಯಕ್ರಮದಲ್ಲಿ ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ, ಜಿಲ್ಲಾ ಪಂಚಾಯಿತಿ ಸದಸ್ಯ ಎಸ್‌.ಎನ್‌. ರಾಮಸ್ವಾಮಿ, ಸಚಿವ ಕೆ.ಎಸ್‌.ಈಶ್ವರಪ್ಪ ಅವರ ಪುತ್ರ ಕಾಂತೇಶ್‌, ಬೇಳೂರು ರಾಘವೇಂದ್ರ ಶೆಟ್ಟಿ, ಗೌರಿಗದ್ದೆ ದತ್ತಾಶ್ರಮದ ಅಧ್ಯಕ್ಷ ಶಿವಪ್ಪ, ಎಸಿಎಫ್‌ ನಂದೀಶ್‌, ಜಯಪುರದ ಚಂದ್ರಣ್ಣ, ಕೂಳೂರು ಶೃಂಗೇಶ್ವರ, ಕೋಣಂದೂರಿನ ಪ್ರಕಾಶ, ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಪಾಲ್ಗೊಂಡಿದ್ದರು.

click me!