ಪ್ರಾಚೀನ ಕೊಳದಲ್ಲಿ ನಿಧಿಗಾಗಿ ಶೋಧ

By Kannadaprabha News  |  First Published Sep 6, 2020, 1:31 PM IST

ಅರಸರ ಕಾಲದ ಪ್ರಾಚೀನ ಕೊಳ ಒಂದರಲ್ಲಿ ನಿಧಿಗಾಗಿ ಪತ್ತೆ ಕಾರ್ಯ ನಡೆಸಿದ್ದು, ಹಲವು ಪ್ರಾಚೀನ ವಿಗ್ರಹಗಳನ್ನು ಕೆಡವಲಾಗಿದೆ.


ಆನಂದಪುರ (ಸೆ.06)​​: ಸ್ಥಳೀಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲಂದುರು ಗ್ರಾಮದ ಶಿಕಾರಿಪುರ ರಸ್ತೆ ಸಮೀಪ ಕೆಳದಿ ಅರಸ ವೆಂಕಟಪ್ಪನಾಯಕನ ಕಾಲದಲ್ಲಿ ನಿರ್ಮಾಣಗೊಂಡ ಚಂಪಕ ಸರಸು ಕೊಳದ ಬಳಿ ಕಳ್ಳರು ನಿಧಿಗಾಗಿ ಶೋಧ ನಡೆಸಿದ ಘಟನೆ ನಡೆದಿದೆ. 

ಇಲ್ಲಿ ಸುಂದರವಾದ ಕಲ್ಲಿನ ಆನೆಗಳು ಇದ್ದು, ಮುಂಭಾಗದಲ್ಲಿ ಇದ್ದ ಕಲ್ಲಿನ ಆನೆಗಳನ್ನು ಕೆಡವಿ ಅದರ ಅಡಿಯಲ್ಲಿ ಕಲ್ಲುಗಳನ್ನು ತಗೆದು ಕಳ್ಳರು ನಿಧಿಗಾಗಿ ಹುಡುಕಾಟ ನಡೆಸಿದ್ದಾರೆ.

Tap to resize

Latest Videos

ಜೋಗ ಜಲಪಾತದ ಯೋಜನೆಯೊಂದನ್ನು ರದ್ದು ಮಾಡಿದ ಸರ್ಕಾರ .

 ಹಾಗೆ ಚಂಪಕ ಕೊಳದ ಹತ್ತಿರ 4-5 ಕಡೆಯಲ್ಲಿ ಕಲ್ಲುಗಳನ್ನು ಕಿತ್ತು ಹಾಕಿದ್ದಾರೆ. ಪ್ರತಿ ವರ್ಷವು ಇದೇ ರೀತಿ ಇಲ್ಲಿ ನಿಧಿಗಾಗಿ ಶೋಧ ಕಾರ್ಯ ನಡೆಯುತ್ತದೆ. 

ಆದ್ದರಿಂದ ಕಂದಾಯ ಇಲಾಖೆಯವರಾಗಲಿ, ಚುನಾಯಿತ ಪ್ರತಿನಿಧಿಗಳಾಗಲಿ ಇತ್ತಕಡೆ ಗಮನ ಹರಿಸುವಂತೆ ಸ್ಥಳಿಯ ಇತಿಹಾಸ ಪರಂಪರೆ ಉಳಿಸಿ ಅಭಿಯಾನದವರು ಒತ್ತಾಯಿಸಿದ್ದಾರೆ. ಸಮಿತಿಯವರು ಸ್ವಚ್ಛತೆ ಮಾಡಲು ಹೋದಾಗ ನಿಧಿಗಾಗಿ ಶೋಧ ನಡೆಸಿದ್ದು ಬೆಳಕಿಗೆ ಬಂದಿದೆ.

click me!