ಉತ್ತರ ಕನ್ನಡದಲ್ಲಿ 75 ವರ್ಷವಾದ್ರೂ ವಿದ್ಯುತ್ ಸೌಲಭ್ಯ ಕಾಣದ ಹಳ್ಳಿಗಳು

By Suvarna NewsFirst Published Jan 17, 2023, 10:49 PM IST
Highlights

ದೇಶಕ್ಕೆ ಸ್ವತಂತ್ರ ಬಂದು 75 ವರ್ಷಗಳು ಕಳೆದರೂ ಕರ್ನಾಟಕದ ಕೆಲವು ಹಳ್ಳಿಗಳಲ್ಲಿ ಇನ್ನೂ ವಿದ್ಯುತ್ ಸೌಲಭ್ಯವಿಲ್ಲ ಅನ್ನೋದು ದುರಂತ. ಇಂತದ್ದೇ ಸಮಸ್ಯೆಗಳ ಸಾಲಿಗೆ ಸೇರಿದೆ ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಉಳವಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಳ್ಳಿಗಳು.

ಉತ್ತರ ಕನ್ನಡ (ಜ.17): ದೇಶಕ್ಕೆ ಸ್ವತಂತ್ರ ಬಂದು 75 ವರ್ಷಗಳು ಕಳೆದರೂ ಕರ್ನಾಟಕದ ಕೆಲವು ಹಳ್ಳಿಗಳಲ್ಲಿ ಇನ್ನೂ ವಿದ್ಯುತ್ ಸೌಲಭ್ಯವಿಲ್ಲ ಅನ್ನೋದು ದುರಂತ. ಇಂತದ್ದೇ ಸಮಸ್ಯೆಗಳ ಸಾಲಿಗೆ ಸೇರಿದೆ ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಉಳವಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಳ್ಳಿಗಳು. ದೇಶ ಸ್ವಾತಂತ್ರ್ಯ ಕಂಡು ಸಾಕಷ್ಟು ವರ್ಷಗಳಾದ್ರೂ ಇಲ್ಲಿನ ಕೆಲವು ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕವೇ ಇಲ್ಲ. ಜೋಯಿಡಾ ತಾಲೂಕಿನ ಉಳವಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಂದೆಗಾಳಿ, ಬಿಕುಂಡಿ, ಕಾಟೂರು, ಬೋಗಳೆ, ಮುಂಬರಗಿ, ತುಳಸಗೇರಿ ಗ್ರಾಮದ ಮಜಿರೆಗಳಲ್ಲಿ ಈವರೆಗೂ ವಿದ್ಯುತ್ ಸೌಲಭ್ಯವಿಲ್ಲ. 

ವಿದ್ಯುತ್ ಸೌಲಭ್ಯವಿಲ್ಲದ ಕಾರಣ ಇಲ್ಲಿನ ಜನರು ಸೀಮೆಎಣ್ಣೆ ದೀಪದಲ್ಲಿ ರಾತ್ರಿ ಕಳೆಯುತ್ತಿದ್ದಾರೆ. ಸರ್ಕಾರ ಬೆಳಕು ಯೋಜನೆಯಡಿ ಪ್ರತೀ ಮನೆಗೆ ವಿದ್ಯುತ್ ಕಲ್ಪಿಸುವ ಮಾತುಗಳನ್ನಾಡುತ್ತಾದ್ರೂ ಈ ಹಳ್ಳಿಗಳಿಗೆ ಮಾತ್ರ ಬೆಳಕನ್ನು ನೀಡಿಲ್ಲ. ಹೀಗಾಗಿ ಆ ಗ್ರಾಮಗಳ ಜನರು ಕತ್ತಲಾದ್ರೆ ಸಾಕು ಕಾಡು ಪ್ರಾಣಿಗಳ ಭಯದಲ್ಲಿ ಮನೆ ಬಿಟ್ಟು ಹೊರಗೆ ಬರದೆ ಬದುಕು ನಡೆಸುವಂತಾಗಿದೆ. ಅಂದಹಾಗೆ, ಉಳವಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಏಳು ಮಜಿರೆಗಳಲ್ಲಿ 150 ಕ್ಕೂ ಹೆಚ್ಚು ಜನಸಂಖ್ಯೆ ಇದ್ದು, 45 ಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ವಿದ್ಯುತ್‌ ಕದ್ದವರಿಗೆ ಬೆಸ್ಕಾಂ ಶಾಕ್‌: 2.59 ಕೋಟಿ ದಂಡ

ವಿದ್ಯುತ್ ಕೊರತೆ ಕಾರಣ ಇವರಿಗೆ  ತೊಂದರೆಯಾಗುತ್ತಿದ್ದು, ಮಕ್ಕಳು ಚಿಮಣಿ ದೀಪದಲ್ಲೇ ಬರೆಯುವುದು, ಓದುವುದನ್ನು ಕಂಡರೆ ಎಂತವರ ಮನಸ್ಸು ಕೂಡಾ ಕರಗದಿರದು.‌ ಇಲ್ಲಿನ ಹಿರಿಯರು ಕಳೆದ 70ರಿಂದ 80 ವರ್ಷಗಳಿಂದ ಇದೇ ರೀತಿ ತಮ್ಮ ಬದುಕನ್ನು ಕಟ್ಟಿಕೊಂಡು ಬಂದಿದ್ದಾರೆ. ಆದರೆ, ಅವರು ಎದುರಿಸಿದ ಸ್ಥಿತಿ ಅವರ ಮಕ್ಕಳು, ಮೊಮ್ಮಕ್ಕಳು ಎದುರಿಸುವುದು ಬೇಡ ಅನ್ನೋದೇ ಇವರ ಕೋರಿಕೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಈ ಬಗ್ಗೆ ಮಾಹಿತಿಯಿದ್ದರೂ ಈವರೆಗೆ ಯಾವುದೇ ಸ್ಪಂದನೆಯಿಲ್ಲ.

ಸಿಲಿಕಾನ್ ಸಿಟಿಯಲ್ಲಿ ವಾಲಿದ ವಿದ್ಯುತ್‌ ಕಂಬಗಳು: ಬೆಸ್ಕಾಂ ನಿರ್ಲಕ್ಷ್ಯ

ಕಳೆದೆರಡು ವರ್ಷಗಳ ಹಿಂದೆ ಅಂಡರ್ ಗ್ರೌಂಡ್ ಕೇಬಲ್ ಮೂಲಕ ವಿದ್ಯುತ್ ಸಂಪರ್ಕಕ್ಕೆ ಸರ್ಕಾರ ಅನುಮೋದನೆಯನ್ನು ನೀಡಿತ್ತಾದ್ರೂ,  ಅರಣ್ಯ ಇಲಾಖೆ ಇದಕ್ಕೆ ಅಡ್ಡಿಪಡಿಸಿದೆ. ಕೇವಲ 35 ಲಕ್ಷ ರೂಪಾಯಿ ವೆಚ್ಚದಲ್ಲಿ ಉಳವಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಳ್ಳಿಗಳಿಗೆ ವಿದ್ಯುತ್ ನೀಡಬಹುದಾದ್ರೂ ಅಧಿಕಾರಿಗಳು ಮಾತ್ರ ಮನಸ್ಸು ಮಾಡುತ್ತಿಲ್ಲ ಅನ್ನೋದೇ ವಿಪರ್ಯಾಸ.

click me!