ಬೆಳಗಾವಿ: ವಿವಾದಿತ ಮಸೀದಿಗೆ ಬೀಗ ಜಡಿದ ವಕ್ಫ್ ಮಂಡಳಿ

By Kannadaprabha News  |  First Published Jan 17, 2023, 10:00 PM IST

ದಾನ ಪಡೆದ ಜಾಗದಲ್ಲಿ ಸೊಸೈಟಿಯಿಂದ ಮಸೀದಿ ನಿರ್ಮಾಣ ಮಾಡಿ ಧಾರ್ಮಿಕ ಚಟುವಟಿಕೆ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಮಸೀದಿಗೆ ಬೀಗ ಹಾಕಿದ ವಕ್ಫ್ ಕಮಿಟಿ.  


ಬೆಳಗಾವಿ(ಜ.17):  ಇಲ್ಲಿನ ಸಾರಥಿ ನಗರದ ವಿವಾದಿತ ಫಾತಿಮಾ ಮಸೀದಿಗೆ ಮಹಾನಗರ ಪಾಲಿಕೆ ಆಯುಕ್ತ ಡಾ.ರುದ್ರೇಶ ಘಾಳಿ ಸೂಚನೆಯ ಮೇರೆಗೆ ವಕ್ಫ್ ಕಮಿಟಿ ಬೀಗ ಹಾಕಿದೆ. ಅನುಮೋದಿತ ನಕ್ಷೆ ಉಲ್ಲಂಘಿಸಿ ಧಾರ್ಮಿಕ ಕಟ್ಟಡ ಕಟ್ಟುತ್ತಿರುವ ಆರೋಪ ಕೇಳಿ ಬಂದಿತ್ತು. ಕಟ್ಟಡ ಕಾಮಗಾರಿ ಹಾಗೂ ಧಾರ್ಮಿಕ ಚಟುವಟಿಕೆ ತಕ್ಷಣ ನಿಲ್ಲಿಸಲು ಬೆಳಗಾವಿ ಜಿಲ್ಲಾ ವಕ್ಫ್ ಕಾರ್ಯಾಲಯದ ಅಧಿಕಾರಿಗೆ ಮಹಾನಗರ ಪಾಲಿಕೆ ಆಯುಕ್ತರು ನೋಟಿಸ್‌ ಮೂಲಕ ಸೂಚನೆ ನೀಡಿದ್ದರು. ಮಹಾನಗರ ಪಾಲಿಕೆ ನೋಟಿಸ್‌ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.

2011ರಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ವಾಹನ ಚಾಲಕರ ಸಂಘದಿಂದ ಲೇಔಟ್‌ ನಿರ್ಮಾಣ ಮಾಡಿ ಮಾರಾಟ ಮಾಡಲಾಗಿತ್ತು. 2013ರಲ್ಲಿ ನಿಂಗಪ್ಪ ದನವಾಡೆ ಎಂಬುವವರು ಪ್ಲಾಟ್‌ ನ.19 ಖರೀದಿ ಮಾಡಿದ್ದರು. ಇದಾದ ಬಳಿಕ ಅಬ್ದುಲ್‌ ಅಜೀಜ್‌ ಕಮದೋಡ್‌ ದಂಪತಿಗೆ ಮಾರಾಟ ಮಾಡಿದ್ದರು. ನಂತರ ಕಮದೋಡ್‌ ದಂಪತಿಯಿಂದ ಮೌಲಾನಾ ಅಬ್ದುಲ… ಕಲಾಂ ಆಜಾದ್‌ ಎಜುಕೇಶನ್‌ ಆ್ಯಂಡ್‌ ಚಾರಿಟಬಲ್‌ ಸೊಸೈಟಿಗೆ ದಾನ ನೀಡಿದ್ದರು. ದಾನ ಪಡೆದ ಜಾಗದಲ್ಲಿ ಸೊಸೈಟಿಯಿಂದ ಮಸೀದಿ ನಿರ್ಮಾಣ ಮಾಡಿ ಧಾರ್ಮಿಕ ಚಟುವಟಿಕೆ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

Latest Videos

undefined

ಮಕ್ಕಳ ಅನ್ನಕ್ಕೂ ಕುತ್ತು: ಅಕ್ರಮ ಅಕ್ಕಿಯೇ ಮಕ್ಕಳಿಗೆ ಬಿಸಿಯೂಟ ಆಹಾರ!

ವಸತಿ ಉದ್ದೇಶ ಕಟ್ಟಡದಲ್ಲಿ ಧಾರ್ಮಿಕ ಚಟುವಟಿಕೆ ನಡೆಸುತ್ತಿದ್ದ ಆರೋಪ, ಭೂಬಳಕೆ ಮಾರ್ಗಸೂಚಿ ಹಾಗೂ ಕಟ್ಟಡ ಪರವಾನಗಿ ಉಲ್ಲಂಘಿಸಿದ ಆರೋಪ ಹಿನ್ನೆಲೆಯಲ್ಲಿ ಕೂಡಲೇ ಧಾರ್ಮಿಕ ಚಟುವಟಿಕೆ ನಿಲ್ಲಿಸುವಂತೆ ಪಾಲಿಕೆ ನೋಟಿಸ್‌ ನೀಡಿದೆ. ಮಸೀದಿಗೆ ಬೀಗ ಜಡಿದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮಸೀದಿ ಮುಂಭಾಗದಲ್ಲಿ ಒಂದು ಕೆಎಸ್‌ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಒಂದು ವಾರದ ಹಿಂದಷ್ಟೇ ಹಿಂದೂಪರ ಸಂಘಟನೆ ಹಾಗೂ ಬಿಜೆಪಿ ಸ್ಥಳೀಯ ನಾಯಕರಿಂದ ಡಿಸಿಗೆ ಮನವಿ ವಸತಿ ಉದ್ದೇಶ ಕಟ್ಟಡದಲ್ಲಿ ಧಾರ್ಮಿಕ ಚಟುವಟಿಕೆ ಮಾಡುತ್ತಿದ್ದಾರೆ. ಕೂಡಲೇ ಬಂದ್‌ ಮಾಡಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಿದ್ದರು.

click me!