ನಿರಂತರ ಭೂಕಂಪ: 'ಶೆಡ್‌ ಹಾಕಿ ಕೊಡಿ, ಅಲ್ಲೇ ಮಕ್ಕೊಂಡು ಜೀವಾ ಉಳಿಸ್ಕೋತೀವಿ'

By Kannadaprabha News  |  First Published Nov 1, 2021, 2:45 PM IST

*  ಪ್ರಾದೇಶಿಕ ಆಯುಕ್ತರ ಮುಂದೆ ಗೋಳಾಡಿದ ಊರ ಮಂದಿ ಮನವಿ ಸಲ್ಲಿಕೆ
*  ಭೂಕಂಪನದಿಂದ ಗ್ರಾಮಸ್ಥರ ಗೋಳಾಟ 
*  ಆಯುಕ್ತರು ಕೇವಲ ಕಾಟಾಚಾರಕ್ಕೆ ಭೇಟಿ ನೀಡಿದ್ದಾರೆ ಎಂಬ ಗ್ರಾಮಸ್ಥರ ಆರೋಪ  
 


ಕಲಬುರಗಿ/ಚಿಂಚೋಳಿ(ನ.01): ಶೆಡ್ ಕಟ್ಟಿ ಕೊಡ್ರಿ, ಈ ಭೂಕಂಪನದಿಂದ(Earthquake), ಬಾರಿ ಸದ್ದಿನಿಂದ ಬಚಾವ್ ಆಗಲಿಕ್ಕಿ ಅಲ್ಲೇ ಮುದ್ಯಾಗಿ ಮಕ್ಕೊಂಡು ನಮ್ಮ ಜೀವಾ ಉಳಸ್ಕೋತೇವಿ ಎಂದು ಭೂಕಂಪ ಪೀಡಿತ ಗಡಿಕೇಶ್ವರ ಊರಿನ ಜನತೆ ಗೋಳಾಡುತ್ತಿದ್ದಾರೆ.

ಕೊನೆಗೂ ತಮ್ಮೂರಿಗೆ ಭೇಟಿ ನೀಡಿದ್ದ ಕಲಬುರಗಿ(Kalaburagi) ವಿಭಾಗೀಯ ಮಟ್ಟದ ಹಿರಿಯ ಕಂದಾಯ ಅಧಿಕಾರಿ, ಪ್ರಾದೇಶಿಕ ಆಯುಕ್ತ ಡಾ. ಪ್ರಸಾದ್ ಜೊತೆ ಮಾತನಾಡಿದ ಊರವರೆಲ್ಲರೂ ಭೂಮಿಯಿಂದ ಭಾರಿ ಶಬ್ದ ಉಂಟಾಗಿ ನಂತರ ಭೂಮಿ ಕಂಪಿಸುತ್ತಿರುವುದರಿಂದ ಜನರು ಜೀವದ ಭಯದಿಂದ ಜೀವನ ಕಳೆಯುವಂತಾಗಿದೆ. ನಮ್ಮ ಗ್ರಾಮಸ್ಥರ(Villagers) ಮನೆಯ ಮುಂದೆ ಅಂಗಳದಲ್ಲಿ ಚಿಕ್ಕದಾದ ಶೆಡ್(Shed) ನಿರ್ಮಿಸಿ ಕೊಟ್ಟರೆ ನಮ್ಮ ಪ್ರಾಣ ರಕ್ಷಣೆ ಮಾಡಿಕೊಳ್ಳುತ್ತೇವೆ. ಭೂಕಂಪನದಿಂದ ಜನರು ಊರನ್ನೇ ಬಿಟ್ಟು ಹೋಗಿದ್ದಾರೆಂಜು ಗೋಳಿಟ್ಟರು.

Tap to resize

Latest Videos

ಭೂಕಂಪದೂರಲ್ಲಿ ಪ್ರತಿ ಮನೆ ಮುಂದೆ ಶೆಡ್‌ ನಿರ್ಮಾಣ: ಸಚಿವ ಅಶೋಕ

ಗ್ರಾಮಸ್ಥರಾದ ರೇವಣಸಿದ್ದಪ್ಪ ಅಣಕಲ, ಪ್ರಕಾಶ ರಂಗನೂರ, ವಿರೇಶ ರೆಮ್ಮಣಿ, ನಾಗರಾಜ ಚಕ್ರವರ್ತಿ ಮಾತನಾಡಿ, 6 ವರ್ಷಗಳಿಂದ ಭೂಮಿ ಕಂಪಿಸುತ್ತಿರುವುದರಿಂದ ಅನೇಕ ಮನೆಗಳಲ್ಲಿ ಬಿರುಕು(Crack) ಉಂಟಾಗಿ ಕೆಲವರ ಮನೆಗಳು ಬಿದ್ದಿವೆ. ಜನರು ಭಯಗೊಂಡು ಊರನ್ನೇ ತೊರೆದು ಮನೆ ಬಿಟ್ಟು ಹೋಗಿದ್ದಾರೆ. ಕೆರೋಳಿ, ಬೆನಕನಳ್ಳಿ, ಕೊರವಿ, ಹಲಚೇರಾ, ತೇಗಲತಿಪ್ಪಿ, ಹೊಸಳ್ಳಿ, ರಾಮನಗರ ತಾಂಡಾ, ಕುಪನೂರ, ಬಂಟನಳ್ಳಿ, ರುದನೂರ, ರಾಯಕೋಡ, ಚಿಂತಪಳ್ಳಿ, ಭೂತಪೂರ ಗ್ರಾಮಗಳಲ್ಲಿ ಭಾರಿ ಶಬ್ದ ಉಂಟಾಗಿದೆ ಇದರಿಂದ ಯಾವಾಗ ಭೂಮಿ ನಡುಗುತ್ತದೆ ಎಂಬ ಭಯ ಜನರಿಗೆ ಕಾಡುತ್ತಿದೆ. ನಮ್ಮ ಮನೆಯ ಅಂಗಳದಲ್ಲಿ ಶೆಡ್ ನಿರ್ಮಿಸಿಕೊಡಬೇಕೆಂದು ಆಯುಕ್ತರಲ್ಲಿ ಮನವಿ ಮಾಡಿದರು.

ಸಿಸ್ಮೋ ಮೀಟರ್(Sysmo Meter) ಅಳವಡಿಸಿದ್ದಾರೆ, ಆದರೆ ಭೂಕಂಪನ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ(Information) ನೀಡುತ್ತಿಲ್ಲ. ಗಡಿಕೇಶ್ವರ, ಹೊಸಳ್ಳಿ, ರಾಮನಗರ ತಾಂಡಾದಲ್ಲಿ ಮಾತ್ರ ಕಾಳಜಿ ಕೇಂದ್ರ ಪ್ರಾರಂಭಿಸಲಾಗಿದೆ. ಉಳಿದ ಗ್ರಾಮಗಳನ್ನು ಪರಿಗಣಿಸಿಲ್ಲ, ಕಂಪನ ಭಯದಲ್ಲಿರುವ ಊರುಗಳಲ್ಲಿ ಕಾಳಜಿ ಕೇಂದ್ರ ಪ್ರಾರಂಭಿಸಿ ಊಟದ ವ್ಯವಸ್ಥೆ ಮತ್ತು ಶೆಡ ನಿರ್ಮಿಸಿಕೊಡಬೇಕೆಂದು ಆಗ್ರಹಿಸಿದರು(Demand).

ಕಲಬುರಗಿ: ಸಂಸದ ಉಮೇಶ್‌ ಜಾಧವ್‌ ಗ್ರಾಮ ವಾಸ್ತವ್ಯದ ವೇಳೆಯೇ ಭೂಕಂಪ..!

ಭೂಕಂಪನದಿಂದ ಮನೆಗಳು ಬಿದ್ದಿರುವ ಮತ್ತು ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿರುವ ಕುರಿತು ಪರಿಶೀಲಿಸಿದರು. ಮನೆ ಮುಂದೆ ತಾಡಪತ್ರಿ ಕಟ್ಟಿಕೊಂಡಿರುವ ಕೆಲವು ಮನೆಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಜನರಿಂದ ಮಾಹಿತಿ ಪಡೆದುಕೊಂಡರು. ತಾಲೂಕು ಮಟ್ಟದ ಅಧಿಕಾರಿಗಳ ಸಭೆಯನ್ನು ಸರಕಾರಿ ಪ್ರೌಢ ಶಾಲೆಯಲ್ಲಿ ನಡೆಸಿ ಭೂಕಂಪನ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಮನೆಬಿದ್ದಿರುವ ರಾಯಕೋಡಕ್ಕೆ ಬರೋದಾಗಿ ಹೇಳಿದ್ದ ಡಾ. ಪ್ರಸಾದ್ ಅಲ್ಲಿಗೆ ಹೋಗದೆ ನೇರಾಗಿ ಸೇಡಂ(Sedam) ಪಟ್ಟಣಕ್ಕೆ ಹೋಗಿರೋದು ಊರವರಲ್ಲಿ ಆಸೆ ಮೂಡಿಸಿತ್ತು. ಆಯುಕ್ತರು(Commissioner) ಕೇವಲ ಕಾಟಾಚಾರಕ್ಕೆ ಭೇಟಿ ನೀಡಿದ್ದಾರೆ ಗ್ರಾಮಸ್ಥರ ಸಮಸ್ಯೆಗಳನ್ನು ಕೇಳದೆ ಹೋಗಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ. 

ಸಹಾಯಕ ಆಯುಕ್ತೆ ಅಶ್ವಿಜಾ, ತಹಸೀಲ್ದಾರ ಅಂಜುಮ ತಬ್ಸುಮ, ತಾಪಂ ಅಧಿಕಾರಿ ಅನೀಲಕುಮಾರ ರಾಠೋಡ, ಎಇಇ ಗುರುರಾಜ ಜೋಶಿ, ಸಿದ್ರಾಮ ದಂಡಗುಲಕರ, ಮಹ್ಮದ ಅಹೆಮದ ಹುಸೇನ, ಡಾ.ಜಗದೀಶ್ವರ ಬುಳ್ಳ, ಡಾ.ಅಜೀತ ಪಾಟೀಲ, ಸಿಡಿಪಿಒ ಗುರುಪ್ರಸಾದ ಕವಿತಾಳ, ಎಇಇ ವೀರೇಂದ್ರ ಚವ್ಹಾಣ ಇದ್ದರು. 

click me!