'ತ್ರಿಪುರಾದಲ್ಲಿ ಮುಸ್ಲಿಮರ ಮೇಲೆ ದಾಳಿ, ಪ್ರಧಾನಿ ಮೌನವಾಗಿರುವದು ನಿಜಕ್ಕೂ ಆಘಾತ ತಂದಿದೆ'

By Kannadaprabha News  |  First Published Nov 1, 2021, 1:13 PM IST

*   ಹಿಂಸಾಚಾರ ತಡೆಯಲು ವಿಫಲರಾಗಿರುವ ಮುಖ್ಯಮಂತ್ರಿಯನ್ನು ಕೂಡಲೇ ವಜಾಗೊಳಿಸಿ
*   ಪ್ರಧಾನಿ ಮೋದಿ ಮೌನವಾಗಿರುವದು ನಿಜಕ್ಕೂ ಆಘಾತ ಉಂಟುಮಾಡಿದೆ
*   ಇಂತಹ ಘಟನೆಗಳು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ
 


ಕೊಪ್ಪಳ(ನ.01): ತ್ರಿಪುರಾ(Tripura) ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಮುಸ್ಮಿಮರು ಸೇರಿ ಅಲ್ಪಸಂಖ್ಯಾತರ ಮೇಲೆ ವ್ಯಾಪಕ ಹಿಂಸಾಚಾರ ಖಂಡಿಸಿ ವೆಲ್ಪೇರ ಪಾರ್ಟಿ ಆಫ್ ಇಂಡಿಯಾ(Welfare Party of India) ಕೊಪ್ಪಳ(Koppal) ಜಿಲ್ಲಾ ಘಟಕದ ವತಿಯಿಂದ ನಗರದ ಅಶೋಕ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿದರು.

ಈಶಾನ್ಯ ರಾಜ್ಯಗಳಲ್ಲಿ(Northeast States) ಮುಸ್ಲಿಮರನ್ನು(Muslim) ಗುರಿಯಾಗಿಸಿ ವ್ಯಾಪಕ ಹಿಂಸಾಚಾರ(Violence) ನಡೆಸುತ್ತಿದ್ದರೂ ಪ್ರಮುಖ ರಾಜಕೀಯ ಪಕ್ಷಗಳು(Political Parties) ಮೌನವಹಿಸಿವೆ. ಇದು ಪ್ರಜಾಪ್ರಭುತ್ವಕ್ಕೆ(Democracy) ಅಪಾಯಕಾರಿ. ತ್ರಿಪುರಾದಲ್ಲಿ ಈಚೆಗೆ ಮುಸ್ಲಿಮರ ಮೇಲೆ ಸಂಘ ಪರಿವಾರ ಕೇಂದ್ರಿತ ಪ್ಯಾಸ್ಟ್‌ ಹಿಂಸಾಚಾರ ನಡೆಸಿದ್ದಾರೆ.

Tap to resize

Latest Videos

ತ್ರಿಪುರಾದಲ್ಲಿ ನಡೆಯುತ್ತಿರುವ ಮುಸ್ಲಿಂರ ಮೇಲಿನ ದೌರ್ಜನ್ಯ ಕೆಲ ದಿನಗಳಿಂದ ನಡೆಯುತ್ತಿದ್ದರೂ ಅಲ್ಲಿನ ಸರ್ಕಾರ ಮಾತ್ರ ಯಾವ ಕ್ರಮವೂ ಕೈಗೊಳ್ಳದೆ ಮೌನವಾಗಿರುವುದು ನಿಜಕ್ಕೂ ಖಂಡನಿಯ ವಿಷಯವಾಗಿದೆ. ದೇಶದ ಪ್ರಧಾನಿಯವರು(Narendra Modi) ಯಾವುದೋ ಸಣ್ಣ ಸಣ್ಣ ವಿಷಯಗಳಿಗೂ ಟ್ವಿಟರ್(Twitter) ಮಾಡುತ್ತಿದ್ದವರೂ ಈಗ ತ್ರಿಪುರಾನಲ್ಲಿ ಮುಸ್ಲಿಂಸರ ಮೇಲೆ ಅವರ ಪ್ರಾರ್ಥನಾ ಸ್ಥಳಗಳ ಮೇಲೆ ದಿನದಿಂದ ದಿನಕ್ಕೆ ದೌರ್ಜನ್ಯ ಹೆಚ್ಚಾಗುತ್ತಿದ್ದರೂ ಸಹ ಮೌನವಾಗಿರುವದು ನಿಜಕ್ಕೂ ಆಘಾತ ಉಂಟುಮಾಡಿದೆ. ತ್ರಿಪುರದಲ್ಲಿ ನಡೆದಿರುವ ಹಿಂಸಾಚಾರ ತಡೆಯಲು ವಿಫಲರಾಗಿರುವ ಮುಖ್ಯಮಂತ್ರಿಯನ್ನು(Chief Minister) ಕೂಡಲೇ ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ(President's Rule) ಜಾರಿಗೊಳಿಸಬೇಕು ಎಂದು ವೆಲ್ಫೇರ ಪಾರ್ಟಿ ರಾಜ್ಯ ಅಧ್ಯಕ್ಷ ಅಡ್ವೋಕೇಟ್ ತಾಹೇರ ಹುಸೇನ್ ಒತ್ತಾಯಿಸಿದ್ದಾರೆ.

ಸರ್ಕಾರ ಗೋಹತ್ಯೆ ನಿಲ್ಲಿಸದಿದ್ದರೆ, ನಾವು ನಿಲ್ಲಿಸುತ್ತೇವೆ: ಪ್ರಮೋದ್ ಮುತಾಲಿಕ್

ತ್ರಿಪುರಾದಲ್ಲಿ ನಡೆಯುತ್ತಿರುವ ಮುಸ್ಲಿಂರ ಮೇಲೆ ದೌರ್ಜನ್ಯವನ್ನು ಅಲ್ಲಿನ ಸರ್ಕಾರ ಮೌನವಾಗಿದ್ದು ಖಂಡನೀಯ. ಮುಸ್ಲಿಂರ ಆಸ್ತಿಗಳು ಹಾನಿಯಾಗಿದ್ದು ಸರ್ಕಾರ(Government of Tripura) ಹಾನಿಯ ನಷ್ಟವನ್ನು ಸಂಪೂರ್ಣವಾಗಿ ಭರಿಸಬೇಕು. ನಾವೆಲ್ಲರೂ ಜಾತಿ(Caste) ಧರ್ಮ(Religion) ಎಂದು ಕಿತ್ತಾಡದೆ ಭಾರತಿಯರು(Indians) ಎಂದು ಪರಸ್ಪರ ಸಹೋದರರಾಗಿ ಬಾಳಬೇಕಿದೆ ಎಂದು ನಗರಸಭಾ ಸದಸ್ಯ ಸಬೀಹಾ ಪಟೇಲ್ ಹಾಗೂ ಹುಮೇರಾ ಜಹಾನ್ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ವೆಲ್ಫೇರ್ ಪಾರ್ಟಿಯ ರಾಜ್ಯ ಕಾರ್ಯದರ್ಶಿ ಅಜೀಜ್ ಜಾಗಿದಾರ, ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷ ಆದಿಲ್ ಪಟೇಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಲಿಮುದ್ದೀನ, ಜಿಲ್ಲಾ ಮಹಿಳಾ ಅಧ್ಯಕ್ಷೆ ಸಲ್ಮಾ ಜಹಾನ, ಕಾರ್ಮಿಕರ ಜಿಲ್ಲಾ ಮುಖಂಡರಾದ ಮೌಲಾ ಹಣಿಗೆ, ನಾಸೀರ್ ಮಾಳೇಕೊಪ್ಪ, ಸಾಲಿಡಾರಿಟಿ ಮೂವ್ಮೆಂಟ್ ಅಧ್ಯಕ್ಷ ಗೌಸ್ ಪಟೇಲ್, ಕಲೀಮುಲ್ಲಾ ಖಾನ, ಜಕ್ರಿಯಾ ಖಾನ ಹಾಗೂ ಸದಸ್ಯರು ಸೇರಿ ನೂರಾರು ಕಾರ್ಯಕರ್ತರು ಇದ್ದರು. 

ದೇಶದ ಪ್ರಧಾನಿಯವರು ಯಾವುದೋ ಸಣ್ಣ ಸಣ್ಣ ವಿಷಯಗಳಿಗೂ ಟ್ವೀಟ್ ಮಾಡುತ್ತಿದ್ದವರೂ ಈಗ ತ್ರಿಪುರಾನಲ್ಲಿ ಮುಸ್ಲಿಮರ ಮೇಲೆ ಅವರ ಪ್ರಾರ್ಥನಾ ಸ್ಥಳಗಳ ಮೇಲೆ ದಿನದಿಂದ ದಿನಕ್ಕೆ ದೌರ್ಜನ್ಯ ಹೆಚ್ಚಾಗುತ್ತಿದ್ದರೂ ಸಹ ಮೌನ ವಾಗಿರುವದು ನಿಜಕ್ಕೂ ಆಘಾತ ಉಂಟುಮಾಡಿದೆ.
 

click me!