ಪೂರ್ತಿ ಗ್ರಾಮದ ಕಸ ಗುಡಿಸಿ ಗ್ರಾಮ ಪಂಚಾಯತ್ ಮುಂದೆ ಹಾಕಿದ ಯುವಕರು

By Suvarna NewsFirst Published Nov 17, 2020, 7:20 AM IST
Highlights

ಗ್ರಾಮ ಪಂಚಾಯತ್ ನಿರ್ಲಕ್ಷ್ಯಕ್ಕೆ ಬೇಸತ್ತ ಗ್ರಾಮಸ್ಥರು ಊರಿನ ಎಲ್ಲಾ ಕಸವನ್ನು ಗುಡಿಸಿ ತಂದು ಗ್ರಾಮ ಪಂಚಾಯತ್ ಮುಂದೆ ಸುರಿದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಯಾದಗಿರಿ (ನ.17) :  ಗ್ರಾಮದ ರಸ್ತೆ ಸ್ವಚ್ಛಗೊಳಲು ಸಹಕರಿಸದ ಪಂಚಾಯ್ತಿ ಅಧಿಕಾರಗಳಿಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಗ್ರಾಮದ ರಸ್ತೆ ಮೇಲಿನ ಕಸ ತಂದು ಪಂಚಾಯ್ತಿ ಎದುರು ಹಾಕಿ ಗ್ರಾಮಸ್ಥರು ಆಕ್ರೋಶ ಹೊರಹಾಕಿರುವ ಘಟನೆ ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಗ್ರಾಮದಲ್ಲಿ ನಡೆದಿದೆ. 

ಮರಿಯಮ್ಮ ದೇವಿ ಪ್ರತಿಷ್ಟಾಪನೆ ಹಿನ್ನೆಲೆ ಗ್ರಾಮದ ರಸ್ತೆ ಸ್ವಚ್ಛಗೊಳಿಸಲು ಗ್ರಾಮಸ್ಥರು ಕೇಳಿಕೊಂಡಿದ್ದರು. ಗ್ರಾಮದ ಪ್ರಮುಖ ರಸ್ತೆ ಮೂಲಕ ಮೂರ್ತಿ ಮೆರವಣಿಗೆಗೆ ಪ್ಲಾನ್ ಮಾಡಿದ್ದರು. ದೇವಿ ಮೆರವಣಿಗೆ ಮಾಡುವ ರಸ್ತೆ ಸ್ವಚ್ಛಗೊಳಿಸಲು ನಾಲ್ಕು ದಿನದ ಹಿಂದೆ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ.

ಯಾದಗಿರಿ; ಕಾಲುವೆಗೆ ಕಾರು, ಪತಿ ಸಾವು, ಮಗು ಎತ್ತಿಕೊಂಡು ಈಜಿ ದಡ ಸೇರಿದ ತಾಯಿ ...

ಗ್ರಾಮಸ್ಥರ ಮನವಿಗೆ ಸ್ಪಂದಿಸದ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಈ ಬಗ್ಗೆ ಅಸಡ್ಡೆ ತೋರಿದ್ದು ಇದರಿಂದ ಬೇಸತ್ತ ಗ್ರಾಮಸ್ಥರು ಎಲ್ಲಾ ಕಡೆಯೂ ಕಸ ಗುಡಿಸಿ ತಂದು ಗ್ರಾಮ ಪಂಚಾಯತ್ ಕಚೇರಿ ಮುಂದೆ ಡಂಪ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.

click me!