ಬೀದರ್‌: ಕೊರೋನಾದಿಂದ ಶಾಸಕ ಬಂಡೆಪ್ಪ ಖಾಶೆಂಪೂರ ಗುಣಮುಖ

Kannadaprabha News   | Asianet News
Published : Nov 16, 2020, 03:32 PM IST
ಬೀದರ್‌: ಕೊರೋನಾದಿಂದ ಶಾಸಕ ಬಂಡೆಪ್ಪ ಖಾಶೆಂಪೂರ ಗುಣಮುಖ

ಸಾರಾಂಶ

ಕೊರೋನಾದಿಂದ ಗುಣಮುಖರಾಗಿ ಮನೆಗೆ ತೆರಳಿದ ಬಂಡೆಪ್ಪ ಖಾಶೆಂಪೂರ| ಕೋವಿಡ್‌ ಸೋಂಕಿನಿಂದ ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಶಾಸಕರು| ಎಲ್ಲರ ಪ್ರಾರ್ಥನೆಯಿಂದ ಗುಣಮುಖನಾಗಿದ್ದೇನೆ ಎಂದು ಖಾಶೆಂಪೂರ| 

ಬೀದರ್‌(ನ.16): ಕೊರೋನಾ ಸೋಂಕಿನಿಂದ ನ.5ರಂದು ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಗೆ ದಾಖಲಾಗಿದ್ದ ಜೆಡಿಎಸ್‌ ಶಾಸಕಾಂಗ ಪಕ್ಷದ ಉಪನಾಯಕ, ಬೀದರ್‌ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪೂರ ಅವರು ಭಾನುವಾರ ಕೊರೋನಾದಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.

ಕೆಲ ದಿನಗಳು ಹೋಂ ಕ್ವಾರೆಂಟೈನ್‌ನಲ್ಲಿ ಇರುವಂತೆ ವೈದರು ಸಲಹೆ ನೀಡಿದ್ದು, ಬೆಂಗಳೂರಿನ ತಮ್ಮ ನಿವಾಸದಲ್ಲೇ ವಿಶ್ರಾಂತಿ ಪಡೆಯಲಿದ್ದು, ಬಳಿಕ ಕ್ಷೇತ್ರದ ಜನತೆಯ ಸೇವೆಯಲ್ಲಿ ತೊಡಗಿಕೊಳ್ಳಲಿದ್ದಾರೆ.

ಕರ್ನಾಟಕದಲ್ಲಿ ಮರಾಠ ಪ್ರಾಧಿಕಾರಕ್ಕೆ ಆಕ್ರೋಶ, ಸಿಎಂ ರಾಜೀನಾಮೆಗೆ ಆಗ್ರಹ

ಎಲ್ಲರ ಪ್ರಾರ್ಥನೆಯಿಂದ ಗುಣಮುಖ:

ಎಲ್ಲರಿಗೂ ನಮಸ್ಕಾರ ತಾಯಿ ಭವಾನಿ ಮಾತೆಯ ಕೃಪೆ, ಹಿರಿಯರ ಆಶಿರ್ವಾದ, ತಮ್ಮೆಲ್ಲರ ಪ್ರೀತಿ ವಿಶ್ವಾಸದ ಫಲವಾಗಿ ಮತ್ತು ತಾವೆಲ್ಲರೂ ಸೇರಿ ಸಲ್ಲಿಸಿದ ಪೂಜೆ, ಪ್ರಾರ್ಥನೆಗಳ ಫಲವಾಗಿ ನಾನು ಕೊರೋನಾದಿಂದ ಸಂಪೂರ್ಣವಾಗಿ ಗುಣಮುಖನಾಗಿದ್ದೇನೆ. ತಮ್ಮೆಲ್ಲರಿಗೂ ಕೋಟಿ ಕೋಟಿ ನಮನಗಳು. ನಾನು ಈ ಹಿಂದೆನಂತೆಯೇ ಬಡವರ ಪರವಾಗಿ, ಶ್ರಮಿಕರ ಪರವಾಗಿ, ಕ್ಷೇತ್ರದ ಜನರ ಪರವಾಗಿ ದುಡಿಯುತ್ತೇನೆ. ಆದರೆ ಕೆಲ ದಿನಗಳ ಕಾಲ ಹೋಂ ಕ್ವಾರಂಟೈನ್‌ನಲ್ಲಿ ಇರುವಂತೆ ವೈದ್ಯರು ತಿಳಿಸಿದ್ದಾರೆ. ಹೋಂ ಕ್ವಾರೆಂಟೈನ್‌ ಬಳಿಕ ಮತ್ತೆ ನಿಮ್ಮ ಸೇವೆಯಲ್ಲಿ ತೊಡಗಿಕೊಳ್ಳುತ್ತೇನೆ. ಸರ್ವರಿಗೂ ದೀಪಾವಳಿ ಹಬ್ಬದ ಶುಭಾಶಯಗಳು ಎಂದು ಶಾಸಕ ಬಂಡೆಪ್ಪ ಖಾಶೆಂಪೂರ ವಿಡಿಯೋ ಮೂಲಕ ಜನರಿಗೆ ತಿಳಿಸಿದ್ದಾರೆ.
 

PREV
click me!

Recommended Stories

ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!
ಜಾಸ್ತಿ ಬೇಡ ಎರಡೇ ಮಕ್ಕಳನ್ನಷ್ಟೇ ಮಾಡಿಕೊಳ್ಳಿ: ನವದಂಪತಿಗಳಿಗೆ ಸಿಎಂ ಸಲಹೆ