ಗ್ರಾಮೀಣ ಭಾಗದವರನ್ನು ಕಡ್ಡಾಯವಾಗಿ ಕೋವಿಡ್‌ ಕೇರ್‌ ಸೆಂಟರಿನಲ್ಲಿಡಿ : DC ತಮ್ಮಣ್ಣ

Kannadaprabha News   | Asianet News
Published : May 18, 2021, 03:11 PM ISTUpdated : May 18, 2021, 03:34 PM IST
ಗ್ರಾಮೀಣ ಭಾಗದವರನ್ನು ಕಡ್ಡಾಯವಾಗಿ ಕೋವಿಡ್‌ ಕೇರ್‌ ಸೆಂಟರಿನಲ್ಲಿಡಿ  : DC ತಮ್ಮಣ್ಣ

ಸಾರಾಂಶ

 ಯಾವುದೇ  ಲಕ್ಷಣಗಳಿಲ್ಲದ ಗ್ರಾಮೀಣ ಭಾಗದ ಸೋಂಕಿತರನ್ನು ಹೋಂ ಐಸೋಲೇಷನ್ ಮಾಡುವುದು ಸರಿಯಲ್ಲ  ಕೋವಿಡ್ ಕೇರ್ ಸೆಂಟರ್‌ಗಳಿಗೆ ದಾಖಲಿಸಿ ಚಿಕಿತ್ಸೆ ನೀಡುವುದು ಉತ್ತಮ ಶಾಸಕ ಡಿ.ಸಿ ತಮ್ಮಣ್ಣ ಸೂಚನೆ

ಮದ್ದೂರು (ಮೇ.18): ಕೊರೋನಾ 2ನೆ ಅಲೆ ತೀವ್ರವಾಗಿದ್ದು,  ಜನರನ್ನು ಕಾಡುತ್ತಿದೆ.  ಯಾವುದೇ  ಲಕ್ಷಣಗಳಿಲ್ಲದ ಗ್ರಾಮೀಣ ಭಾಗದ ಸೋಂಕಿತರನ್ನು ಹೋಂ ಐಸೋಲೇಷನ್ ಮಾಡುವುದು ಸರಿಯಲ್ಲ. ಅವರನ್ನು ಕೋವಿಡ್ ಕೇರ್ ಸೆಂಟರ್‌ಗಳಿಗೆ ದಾಖಲಿಸಿ ಚಿಕಿತ್ಸೆ ನೀಡುವುದು ಉತ್ತಮ ಎಂದು ಶಾಸಕ ಡಿ.ಸಿ ತಮ್ಮಣ್ಣ ಹೇಳಿದರು. 

ಹಳ್ಳಿಯಲ್ಲಿ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿವೆ. ಗುಣಲಕ್ಷಣಗಳಿಲ್ಲದವರನ್ನು ಹೋಂ ಐಸೋಲೇಷನ್‌ಗೆ ಒಳಪಡಿಸಿ ನಿಗಾ ಇರಿಸಲಾಗುತ್ತದೆ.  ಆದರೆ ಅವರೆಲ್ಲರೂ  ಜವಾಬ್ದಾರಿಯಿಂದ ನಡೆದುಕೊಳ್ಳುತ್ತಿಲ್ಲ. ಸೊಂಕಿತರೇ  ಬಂದು ಮಾರುಕಟ್ಟೆಗಳಲ್ಲಿ  ಸಾಮಾಗ್ರಿಗಳನ್ನು ಖರೀದಿಸುವುದು, ಇತರೆಡೆಗಳ್ಲಿ  ಒಡಾಡುವುದು ಮುಂದುವರಿಸಿದ್ದಾರೆ.  ಇದರಿಂದ ಮತ್ತಷ್ಟು ಕೋವಿಡ್ ಸೋಂಕು ಹೆಚ್ಚಾಗುವ ಭೀತಿ ಇದೆ ಎಂದು ತಮ್ಮಣ್ಣ ಹೇಳಿದರು.

ಲಾಕ್‌ಡೌನ್ ವಿಸ್ತರಣೆ ಬಗ್ಗೆ ಸರ್ಕಾರಕ್ಕೆ ತಮ್ಮ ಅಭಿಪ್ರಾಯ ತಿಳಿಸಿದ ಎಚ್‌ಡಿಕೆ ...

ಎಲ್ಲವನ್ನು ಪರಾಮರ್ಶಿಸಿ ಗ್ರಾಮೀಣ ಭಾಗದ ಸೋಂಕಿತರನ್ನು ಕಡ್ಡಾಯವಾಗು ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಇಟ್ಟು ಚಿಕಿತ್ಸೆ ನೀಡುವಂತೆ ಟಾಸ್ಕ್ಫೋರ್ಸ್ ಅಧ್ಯಕ್ಷರು, ಉನ್ನತ ಶಿಕ್ಷಣ ಸಚಿವರಾದ ಸಿ.ಎನ್ ಅಶ್ವತ್ಥ ನಾರಾಯಣ ಅವರಿಗೆ ಪತ್ರ ಬರೆದು ಒತ್ತಾಯಿಸುವುದಾಗಿ ತಿಳಿಸಿದರು. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

PREV
click me!

Recommended Stories

ಡಿವೈಡರ್‌ನಿಂದ ಹಾರಿ KSRTC ಬಸ್‌ಗೆ ಡಿಕ್ಕಿಯಾದ ಕಾರ್, ಮೂರು ಸಾವು ಚೆಲ್ಲಾಪಿಲ್ಲಿಯಾದ ಮೃತದೇಹಗಳು
ಸರ್ಕಾರಿ ಶಾಲೆ ಟಾಯ್ಲೆಟ್‌ ಸ್ವಚ್ಛತೆಗೆ ಉದ್ಯಮಿ ನೆರವು