ಸಮಾನತೆ ಹಾಗೂ ರಕ್ತದಾನ ಬಗ್ಗೆ ಅರಿವು ಮೂಡಿಸುವ ಸದುದ್ದೇಶದಿಂದ ರಿಪ್ಪನ್‌ಪೇಟೆಯ ವಿಜೋ ವರ್ಗೀಸ್ ಬೈಕ್‌ನಲ್ಲಿ ದೇಶ ಸುತ್ತಲು ಹೊರಟಿದ್ದಾರೆ. ಶಿವಮೊಗ್ಗದಿಂದ ಭಾರತಾದ್ಯಂತ ಸುಮಾರು 13 ಸಾವಿರ ಕಿ.ಮೀ. ದೂರದಷ್ಟುಏಕಾಂಗಿಯಾಗಿ ಕ್ರಮಿಸಲು ಸಕಲ ಸಜ್ಜು ಮಾಡಿಕೊಂಡಿದ್ದಾರೆ.
ಶಿವಮೊಗ್ಗ (ಫೆ.8) : ಸಮಾನತೆ ಹಾಗೂ ರಕ್ತದಾನ ಬಗ್ಗೆ ಅರಿವು ಮೂಡಿಸುವ ಸದುದ್ದೇಶದಿಂದ ರಿಪ್ಪನ್‌ಪೇಟೆಯ ವಿಜೋ ವರ್ಗೀಸ್ ಬೈಕ್‌ನಲ್ಲಿ ದೇಶ ಸುತ್ತಲು ಹೊರಟಿದ್ದಾರೆ. ಶಿವಮೊಗ್ಗದಿಂದ ಭಾರತಾದ್ಯಂತ ಸುಮಾರು 13 ಸಾವಿರ ಕಿ.ಮೀ. ದೂರದಷ್ಟುಏಕಾಂಗಿಯಾಗಿ ಕ್ರಮಿಸಲು ಸಕಲ ಸಜ್ಜು ಮಾಡಿಕೊಂಡಿದ್ದಾರೆ.
ಉತ್ತಮ ಬೈಕ್ ರೈಡರ್ ಕೂಡ ಆಗಿರುವ ವಿಜೋ ವರ್ಗೀಸ್ ಫೆ.8ರಿಂದ ಸುಮಾರು ಎರಡೂವರೆ ತಿಂಗಳ ಕಾಲ ಬೈಕ್ ಸವಾರಿ ಕೈಗೊಳ್ಳಲಿದ್ದಾರೆ. ಶಿವಮೊಗ್ಗದಿಂದ ಭಾರತದ ಎಲ್ಲ ರಾಜ್ಯ ಹಾಗೂ ನೇಪಾಳ, ಭೂತಾನ್ ದೇಶಗಳಿಗೆ ಒಬ್ಬಂಟಿಯಾಗಿ ಬೈಕ್ ರೈಡಿಂಗ್‌ನಲ್ಲಿ ತೆರಳಲಿದ್ದಾರೆ.
ತ್ರಿಚಕ್ರ ಸೈಕಲ್‌ನಲ್ಲಿ ದೇಶ ಪರ್ಯಟನೆ ಮಾಡ್ತಿರೋ ಯುಟ್ಯೂಬರ್‌ಗಳು!
ತಂದೆ ಮೂಲತಃ ಕೇರಳದವರು. ಅವರು 30 ವರ್ಷಗಳಿಂದ ರಿಪ್ಪನ್‌ಪೇಟೆಯಲ್ಲಿ ವಾಸವಿದ್ದಾರೆ. ತಂದೆ ಪಿ.ಜೆ.ವರ್ಗೀಸ್, ತಾಯಿ ಜೋಳಿ ವರ್ಗೀಸ್ ದಂಪತಿಯ ಮೊದಲ ಮಗನಾದ ವಿಜೋ ವರ್ಗೀಸ್ ಅವರು ಬೈಕ್ ಸವಾರಿಯಲ್ಲಿ ವಿಶೇಷ ಆಸಕ್ತಿವುಳ್ಳವರು. ಫೆ.8ರಂದು ಬೆಳಿಗ್ಗೆ ಶಿವಮೊಗ್ಗ ನಗರದ ನೆಹರು ಕ್ರೀಡಾಂಗಣದಿಂದ ಪ್ರಯಾಣ ಬೆಳೆಸಲಿರುವ ವಿಜೋ ನಿತ್ಯ ಸುಮಾರು 350ರಿಂದ 400 ಕಿ.ಮೀ. ದೂರ ಬೈಕ್ ರೈಡ್ ಮಾಡುವ ಗುರಿ ಹೊಂದಿದ್ದಾರೆ.
ಯಾರ ಸಹಕಾರ ಇಲ್ಲ:
ಕೆಲ ಉದ್ದೇಶ ಇಟ್ಟುಕೊಂಡು ದೇಶಾದ್ಯಂತ ಸಂಚರಿಸುವ ಇಚ್ಛೆ ಹೊಂದಿದ್ದೇನೆ. ಆದರೆ, ನನ್ನ ಈ ಬೈಕ್ ಸವಾರರಿಗೆ ಯಾರ ಸಹಕಾರವೂ ಪಡೆಯುತ್ತಿಲ್ಲ. ತಂದೆ ಪ್ರೋತ್ಸಾಹದಿಂದ ಈ ಬೈಕ್ ರೈಡ್ ಆರಂಭಿಸುತ್ತಿದ್ದೇನೆ. ಸುಮಾರು 13 ಸಾವಿರ ಕಿ.ಮೀ. ದೂರ ಕ್ರಮಿಸಬೇಕಿದೆ. ಇದರಿಂದ ಸುಮಾರು .3 ಲಕ್ಷ ಖರ್ಚು ತಗಲುವ ನಿರೀಕ್ಷೆ ಇದೆ. ಇದಕ್ಕೆ ಸಿದ್ಧತೆ ಮಾಡಿಕೊಂಡಿದ್ದೇನೆ. ಶಿವಮೊಗ್ಗದ ಬೈಕ್ ಮೆಕ್ಯಾನಿಕ್ ಮುರುಗನ್ ತೊಂದರೆಯಾಗದಂತೆ ಬೈಕ್ ಅನ್ನು ಸಕಲ ರೀತಿಯಲ್ಲಿ ಸಿದ್ಧ್ದಪಡಿಸಿದ್ದಾರೆ ಎನ್ನುತ್ತಾರೆ ರೈಡರ್ ವಿಜೋ.
ವಿದೇಶಕ್ಕೆ ಹೋಗೋ ಪ್ಲ್ಯಾನ್ ಇದ್ಯಾ..? ಹಾಗಾದ್ರೆ ಇಲ್ಲಿಗೆ ಹೋಗೋಕೆ ಸಿಗುತ್ತೆ 5 ಲಕ್ಷ ಉಚಿತ ವಿಮಾನ ಟಿಕೆಟ್..!
ಎಲ್ಲ ರಾಜ್ಯಗಳ ಮಣ್ಣು ಸಂಗ್ರಹ
ಕಳೆದ 2013-14ರಲ್ಲಿ 7100 ಕಿ.ಮೀ ಸೌಥ್ ಇಂಡಿಯಾ ಪಯಣ ಮಾಡಿದ್ದೆ, ಆ ಅನುಭವದಿಂದಲೇ ಈ ಬಾರಿ 13 ಸಾವಿರ ಕಿ.ಮೀ. ದೂರ ಪಯಣ ಬೆಳೆಸಲಿದ್ದೇನೆ. ನಾನು ಚಲಿಸುವ ಎಲ್ಲ ರಾಜ್ಯಗಳಲ್ಲೂ ಹಿಡಿಯಷ್ಟುಮಣ್ಣನ್ನು ಸಂಗ್ರಹಿಸುವ ಉದ್ದೇಶ ಹೊಂದಿದ್ದೇನೆ. ಹೀಗೆ ಸಂಗ್ರಹಿಸಿದ ಮಣ್ಣನ್ನು ಪಯಣ ಮುಗಿಸಿ ವಾಪಸ್ ಬಂದಾಗ ಗಣ್ಯ ವ್ಯಕ್ತಿಗೆ ಅದನ್ನು ನೀಡುವ ಹಿಂಗಿತ ಇದೆ. ದಿನದಿಂದ ದಿನಕ್ಕೆ ಸ್ಟೆಪ್ ಬೈ ಸ್ಟೆಪ್ ಕಿ.ಮೀ ದೂರ ಬೈಕ್ ಓಡಿಸುತ್ತೇನೆ. ಮೊದಲ ದಿನ 400 ಕಿ.ಮೀ, 2ನೇ ದಿನ 300 ಕಿ.ಮೀ, ಹೀಗೆ ದಿನದಿಂದ ದಿನಕ್ಕೆ ಪ್ರಯಾಣದ ಪಟ್ಟಿಯನ್ನು ಸಿದ್ಧಪಡಿಸಿಕೊಂಡಿದ್ದೇನೆ. ಹೆತ್ತವರ ಪೋ›ತ್ಸಾಹ ಹಾಗೂ ಸಹಕಾರವಿದೆ ಎನ್ನುತ್ತಾರೆ ವಿಜೋ ವರ್ಗೀಸ್.