ಸಾವಿನಲ್ಲೂ ಒಂದಾದ ದಂಪತಿ: ಪತ್ನಿ ಸಾವಿನ ಸುದ್ದಿಕೇಳಿ ಹೃದಯಾಘಾತವಾಗಿ ಗಂಡನೂ ಸಾವು

By Sathish Kumar KHFirst Published May 28, 2023, 11:31 PM IST
Highlights

ಸುಮಾರು 50 ವರ್ಷಗಳ ಕಾಲ ಒಟ್ಟಿಗೆ ಜೀವನ ನಡೆಸಿದ್ದ ವಿಜಯಪುರ ಮೂಲದ ವೃದ್ಧ ದಂಪತಿ ಒಟ್ಟಿಗೆ ಸಾವನ್ನಪ್ಪಿದ ಘಟನೆ ನಡೆದಿದೆ. ಪತ್ನಿ ಸಾವಿನ ಸುದ್ದಿ ಕೇಳಿ ಪತಿಯೂ ಸಾವನ್ನಪ್ಪಿದ್ದಾನೆ.

ವಿಜಯಪುರ (ಮೇ 28): ವಿಜಯಪುರದಲ್ಲಿ ಸುಮಾರು 50 ವರ್ಷಗಳ ಕಾಲ ಸಂಸಾರ ಮಾಡಿದ ವೃದ್ಧ ಪತ್ನಿ ಈಗ ಒಂದೇ ದಿನ ಇಹಲೋಕವನ್ನು ತ್ಯಜಿಸಿದ್ದಾರೆ. ಈ ವೃದ್ಧ ದಂಪತಿಯನ್ನು ದೊಡ್ಡ ಚಟ್ಟವನ್ನು ಕಟ್ಟುವ ಮೂಲಕ ಇಬ್ಬರನ್ನೂ ಅಕ್ಕಪಕ್ಕದಲ್ಲಿಯೇ ಕೂರಿಸಿಕೊಂಡು ಸಾವಿನ ಮೆರವಣಿಗೆ ಮಾಡುತ್ತಾ ಸ್ಮಶಾನಕ್ಕೆ ಕೊಂಡೊಯ್ದು ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

ಭಾರತೀಯ ಸಂಪ್ರದಾಯದಲ್ಲಿ ಮುತ್ತೈದೆ ಸಾವು ಬೇಕು ಎಂದು ಬಯಸುವವರ ಸಂಖ್ಯೆಯೇ ಅಧಿಕವಾಗಿದೆ. ಜೊತೆಗೆ, ಗಂಡ-ಹೆಂಡತಿ ಒಟ್ಟಿಗೆ ಜೀವನ ಮಾಡುತ್ತಾ ಒಟ್ಟಿಗೆ ಸಾವನ್ನಪ್ಪುವುದು ಅತಿ ವಿರಳಾತಿ ವಿರಳ ಎಂದು ಹೇಳುತ್ತೇವೆ. ಒಂದು ವೇಳೆ ಹೀಗೆ ಘಟನೆ ನಡೆದರೆ ಪುಣ್ಯವಂತರು ಎಂದು ಹೇಳುತ್ತಾರೆ. ಇಲ್ಲಿ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಡೋಣೂರ ಗ್ರಾಮದಲ್ಲಿ ಘಟನೆ ನಡೆದಿದೆ. ರಾಮಪ್ಪ ಟಕ್ಕಳಕಿ ಹಾಗೂ ಶಾಂತವ್ವ ಟಕ್ಕಳಕಿ ಸಾವಲ್ಲಿ ಒಂದಾದ ದಂಪತಿ ಆಗಿದ್ದಾರೆ. ಸುಮಾರು 50 ವರ್ಷಗಳ ಸಂಸಾರ ನಡೆಸಿದ್ದ ದಂಪತಿ ಇಂದು ಕೊನೆಯುಸಿರೆಳೆದಿದ್ದಾರೆ. ಅನಾರೋಗ್ಯದ ಕಾರಣ ಶಾಂತವ್ವ ಇಂದು ಬೆಳಿಗ್ಗೆ ಮೃತಪಟ್ಟಿದ್ದರು. ಬಳಿಕ ಪತ್ನಿ ಸಾವಿನ ಅಘಾತದಿಂದ ರಾಮಪ್ಪ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಒಂದೇ ದಿನ ಕುಟುಂಬದ ಇಬ್ಬರು ಹಿರಿ ಜೀವಗಳನ್ನು ಕಳೆದುಕೊಂಡ ಕುಟುಂಬ ಸದಸ್ಯರಲ್ಲಿ ಆಕ್ರಂದನ ಮುಗಿಲು ಮುಟ್ಟಿತ್ತು. 

ಕೊಪ್ಪಳದಲ್ಲಿ ಭೀಕರ ಅಪಘಾತ: ಟೈರ್‌ ಸ್ಪೋಟಗೊಂಡು ಲಾರಿಗೆ ಗುದ್ದಿದ ಇಂಡಿಕಾ ಕಾರು, 6 ಮಂದಿ ಸಾವು

ಒಟ್ಟಿಗೆ ದಂಪತಿಯ ಸಾವಿನ ಮೆರವಣಿಗೆ: ಇನ್ನು ಹಿಂದೂ ಸಂಪ್ರದಾಯದ ಪ್ರಕಾರ ಒಂದು ಚಟ್ಟವನ್ನು ತಯಾರಿಸಿ ಅದರಲ್ಲಿ ಜೋಡಿ ಮೃತದೇಹಗಳನ್ನು ಕೊಂಡೊಯ್ಯುವುದಿಲ್ಲ. ಆದರೆ, ಇಲ್ಲಿ ವೃದ್ಧ ದಂಪತಿ ಸಾವಿನಲ್ಲೂ ಒಂದಾದ ಸುದ್ದಿ ತಿಳಿದ ಗ್ರಾಮಸ್ಥರು ದೊಡ್ಡದಾದ ಒಂದೇ ಚಟ್ಟವನ್ನು ತಯಾರಿಸಿ ನವ ವಿವಾಹಿತರನ್ನು ಮೆರವಣಿಗೆ ಮಾಡುವ ರೀತಿಯಲ್ಲೇ ದಂಪತಿಯನ್ನು ಅಕ್ಕ-ಪಕ್ಕದಲ್ಲಿ ಕೂರಿಸಿ ಸಾವಿನ ಮೆರವಣಿಗೆ ಮಾಡಲಾಗಿದೆ. ನಂತರ, ಸ್ಮಶಾನಸಲ್ಲಿಯೂ ಕೂಡ ದಂಪತಿಯನ್ನು ದೂರ ಮಾಡದೇ ಅಕ್ಕ-ಪಕ್ಕದಲ್ಲಿಯೇ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. 

ಮಿನಿ ಟ್ರಕ್‌ನಲ್ಲಿ ನೂರಾರು ಹಸುಗಳ ಮಾಂಸ ಸಾಗಣೆ: ಬೆಳಗಾವಿ (ಮೇ 28): ಅಕ್ರಮವಾಗಿ ಜಾನುವಾರುಗಳ  ಮಾಂಸ ಸಾಗಿಸುತ್ತಿದ ವಾಹನ ಪಲ್ಟಿಯಾಗಿದೆ. ಹುಕ್ಕೇರಿ ತಾಲೂಕಿನ ಹಿಟ್ನಿ ಗ್ರಾಮದ ಹೊರವಲಯದ ರಾಷ್ಟ್ರೀಯ ಹೆದ್ದಾರಿ-4 ರಲ್ಲಿ ಘಟನೆ ನಡೆದಿದೆ. ಮಹಾರಾಷ್ಟ್ರದ ಕೊಲ್ಹಾಪುರದಿಂದ ಬೆಳಗಾವಿಗೆ ಹೋಗುವಾಗ ನಡೆದ ಘಟನೆ ನಡೆದಿದೆ. ಮಾಂಸ ಮತ್ತು ವಾಹನ ಸಂಕೇಶ್ವರ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ. ವಾಹನ ಚಾಲಕ ಸ್ಥಳದಿಂದ ಫರಾರಿಯಾಗಿದ್ದಾನೆ. ನೂರಾರು ಗೋವುಗಳ ಹತ್ಯೆ ಶಂಕೆ ವ್ಯಕ್ತವಾಗಿದೆ. ನಿನ್ನ ರಾತ್ರಿ ನಡೆದ ಘಟನೆ, ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

BENGALURU- ನಂದಿ ಬೆಟ್ಟಕ್ಕೆ ಹೋದ ಸ್ನೇಹಿತರು ಜಲಸಮಾಧಿಯಾದರು: ಕೈ-ಕೈ ಹಿಡಿದು ಕೆರೆಯಲ್ಲಿ ಮುಳುಗಿದರು

ಕೊಪ್ಪಳ (ಮೇ 28): ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಲಕೇರಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ರಸ್ತೆಯಲ್ಲಿ ಹೋಗುವಾಗ ಕಾರಿನ ಟೈರ್‌ ಸ್ಪೋಟಗೊಂಡು ಲಾರಿಗೆ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಕಾರಿನಲ್ಲಿದ್ದ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು 6 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಕೊಪ್ಪಳದಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟವರನ್ನು ರಾಜಪ್ಪ ಬನಗೋಡಿ, ರಾಘವೇಂದ್ರ, ಅಕ್ಷಯ, ಶಿವಶರಣ, ಜಯಶ್ರೀ, ರಾಖಿ, ರಶ್ಮಿಕಾ ಎಂದು ಗುರುತಿಸಲಾಗಿದೆ. ವಿಜಯಪುರಿಂದ ಬೆಂಗಳೂರಿಗೆ ಇಂಡಿಕಾ ಕಾರಿನಲ್ಲಿ ಹೋಗುವಾಗ ಕುಷ್ಟಗಿ ಹೆದ್ದಾರಿಯಲ್ಲಿ ಕಾರಿನ ಟೈರ್‌ ಸ್ಪೋಟಗೊಂಡಿದೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು ಮುಂದೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಎಲ್ಲರೂ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನು ದೇಹಗಳು ಕೂಡ ನಜ್ಜುಗುಜ್ಜಾಗಿ ಮೈಯಲ್ಲಿನ ಮೂಳೆಗಳೆಲ್ಲ ಪುಡಿ- ಪುಡಿಯಾಗಿವೆ.

click me!