ಗುಮ್ಮಟನಗರಿ ವಿಜಯಪುರ ಜಿಲ್ಲೆಯಲ್ಲೂ ಇದೆ ಸೆಂಗೋಲ್..!

Published : May 28, 2023, 10:57 PM IST
ಗುಮ್ಮಟನಗರಿ ವಿಜಯಪುರ ಜಿಲ್ಲೆಯಲ್ಲೂ ಇದೆ ಸೆಂಗೋಲ್..!

ಸಾರಾಂಶ

ಸೆಂಗೋಲ್ ಹೋಲುತ್ತೆ ಸಿಂದಗಿ ಸಾರಂಗ ಮಠದ ಧರ್ಮದಂಡ, ಈ ಧರ್ಮದಂಡದ ವಿಶೇಷತೆ ಕೇಳಿದ್ರೆ ನೀವು ಅಚ್ಚರಿ ಪಡುತ್ತೀರಿ 

- ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ವಿಜಯಪುರ(ಮೇ.28):ದೆಹಲಿಯ ನೂತನ ಸಂಸತ್ ಭವನದಲ್ಲಿರುವ ಸೆಂಗೋಲ್ ಅನ್ನೇ ಹೋಲುವ ಮಾದರಿಯ ಸೆಂಗೋಲ್ ಗಳು ಅನಾದಿ ಕಾಲದಿಂದಲೂ ಇದ್ದವು ಎಂಬುದು ಸಾಬೀತಾಗಿದೆ. ಚೋಳರು ಮಾತ್ರವಲ್ಲದೇ ಬಾದಾಮಿಯ ಚಾಲುಕ್ಯರು, ಮಠಾಧೀಶರ ಬಳಿಯೂ ಈ ಸೆಂಗೋಲ್ ಗಳು ಇರುವುದು ಪತ್ತೆಯಾಗಿದೆ. ಅಲ್ಲದೆ ಒಂದು ಮೂಲದ ಪ್ರಕಾರ ಸಾಕ್ಷಾತ್ ಶಿವನ ವಾಹನವಾದ ನಂದಿಯನ್ನು ಉಳ್ಳ ಈ ಧರ್ಮದಂಡವನ್ನು ಶಿವನೇ ಉಪಯೋಗಿಸುತ್ತಿದ್ದ ಎಂಬುದು ಕೂಡ ಚರ್ಚೆಯಾಗಿದೆ. ಇದೀಗ ಇಂತಹದ್ದೇ ಒಂದು ಸೆಂಗೋಲ್ ಮಾದರಿಯ ಧರ್ಮದಂಡ ವಿಜಯಪುರದ ಸಿಂದಗಯ ಸಾರಂಗ ಮಠದಲ್ಲೂ ಕಂಡುಬಂದಿದೆ

ಸಾರಂಗಮಠದಲ್ಲಿ ಸೆಂಗೋಲ್ ಮಾದರಿಯ ಧರ್ಮದಂಡ..!

ವಿಜಯಪುರದ ಸಾರಂಗ ಮಠದಲ್ಲೂ ಚಿನ್ನದ ಸೆಂಗೋಲ್ ಹೋಲುವ ಧರ್ಮದಂಡ ಇದೆ.  ನೂತನ ಸಂಸತ್ತಿನಲ್ಲಿ ಇಡಲಾಗಿರುವ ಸೆಂಗೋಲ್ ಮಾದರಿಯ ಬೆಳ್ಳಿ ಧರ್ಮದಂಡ ಸಾರಂಗ ಮಠದಲ್ಲಿ ಪತ್ತೆಯಾಗಿದೆ. ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಇರುವ ಸಾರಂಗ ಮಠದಲ್ಲಿ ಸೆಂಗೋಲ್ ಮಾದರಿಯ ಧರ್ಮದಂಡವೊಂದು ಇರುವುದು ಬೆಳಕಿಗೆ ಬಂದಿದೆ.

ವಿಜಯಪುರ: ಜಿಲ್ಲೆಗೆ ಸಚಿವಗಿರಿಯ ಡಬಲ್‌ ಧಮಾಕಾ, ಇಂಡಿಗೆ ಮತ್ತೆ ಅನ್ಯಾಯ! 

ಉಜ್ಜಯಿನಿ ಪೀಠಕ್ಕೆ‌ಸೇರಿದ ಧರ್ಮದಂಡ..!

ಉಜ್ಜಯಿನಿ ಪೀಠಕ್ಕೆ ಸೇರಿದ ನಂದಿ ಇರುವ ಬಳ್ಳಿ ನಂದಿ ಹೊಂದಿರುವ ಧರ್ಮದಂಡ ಇದಾಗಿದೆ.  ಉಜ್ಜಯಿನಿ ಶಾಖಾ ಮಠವಾಗಿರುವ ಸಿಂದಗಿಯ ಸಾರಂಗ ಮಠದಲ್ಲೂ ಇದೆ. ಸಿಂದಗಿ ಸಾರಂಗ ಮಠದ ಗುರುಗಳು ಹಿಡಿಯುವ ಈ ಸಂಗೋಲ್ ಮಾದರಿಯ ಧರ್ಮದಂಡ, ನ್ಯಾಯ ಮತ್ತು ಧರ್ಮ ಸಂಸ್ಕೃತಿಯನ್ನು ರಕ್ಷಿಸಲು ಬಳಕೆಯಾಗುತ್ತಿದೆ. ಉಜ್ಜಯಿನಿ ಪೀಠದ ಈ ಧರ್ಮದಂಡ ಉಜ್ಜಯಿನಿ ಪೀಠದಿಂದ ಅನುಸರಣಾ ಪೀಠಾಧಿಪತಿಗಳಿಗೆ ನೀಡಲಾಗಿದೆ. 

ಹೇಗಿದೆ ಸಾರಂಗ ಮಠದ ಸೆಂಗೋಲ್..!

ಸಾರಂಗ ಮಠದಲ್ಲಿರುವ ಈ ಧರ್ಮದಂಡ ಬಿದಿರು, ಬೆಳ್ಳಿಯಿಂದ ಕೂಡಿದ್ದು, ಮೇಲ್ಭಾಗದಲ್ಲಿ ನಂದಿ ಇರುವ ಧರ್ಮದಂಡವಾಗಿದೆ. ಅನಾದಿ ಕಾಲದಿಂದಲೂ ಈ ಸೆಂಗೋಲ್ ಅನ್ನು ಪೀಠಾಧಿಪತಿಗಳಿಂದ ಪೀಠಾಧಿಪತಿಗಳಿಗೆ ನೀಡುತ್ತ ಬರಲಾಗ್ತಿದೆ. ಸಾರಂಗ ಮಠಕ್ಕೆ ಯಾವುದೇ ಮಠಾಧಿಪತಿಗಳು ಹೊಸದಾಗಿ ನೇಮಕಗೊಂಡಲ್ಲಿ ಈ ಧರ್ಮದಂಡವನ್ನ ಹಸ್ತಾಂತರಿಸಲಾಗುತ್ತದೆಯಂತೆ. ಇದು ಅನಾದಿಕಾಲದಿಂದಲೂ ನಡೆದುಕೊಂಡು ಬಂದಿದೆ ಎಂದು ಸ್ವತಃ ಸಾರಂಗಮಠದ  ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಮ್‌ಗೆ (asinaetsuvarnanews.com) ತಿಳಿಸಿದ್ದಾರೆ.

ಧರ್ಮದ ಹೆಸರಿನಲ್ಲಿ ಕೋಮುದ್ವೇಷ ಬಿತ್ತುತ್ತಿದೆ ಸಂಘ ಪರಿವಾರ: ಪ್ರಕಾಶ ಅಂಬೇಡ್ಕರ್ ಗಂಭೀರ ಆರೋಪ

ಈ ಧರ್ಮದಂಡದ ಬಳಕೆಯಾಗುತ್ತೆ ಯಾವಾಗ ಗೊತ್ತಾ.!?

ಸಂಸತ್ ನಲ್ಲಿರುವ ಸೆಂಗೋಲ್ ಅನ್ನೇ ಹೋಲುವ ಈ ಬೆಳ್ಳಿಯ ಧರ್ಮದಂಡ ಸಾವಿರಾರು ವರ್ಷಗಳ ಹಿಂದಿನಿಂದ ಬಂದಿದೆ ಎನ್ನಲಾಗಿದೆ. ಕೆಳಗೆ ಬಿದರಿನ ದಂಡ, ಮೇಲೆ ಬೆಳ್ಳಿಯಲ್ಲಿ ಮಾಡಲಾಗಿರುವ ನಂದಿ ಮೂರ್ತಿ ಇರುವ ಬೆತ್ತವನ್ನು ಹಿಡಿದು ಭಕ್ತರ ಮನೆಗಳಿಗೆ, ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಾರೆ ಸಾರಂಗ ಮಠದ ಸ್ವಾಮೀಜಿಗಳು. ಅಲ್ಲದೆ ವರ್ಷಕ್ಕೊಮ್ಮೆ ವಿಜಯದಶಮಿಯಂದು ಬನ್ನಿ‌ಮುಡಿಯುವಾಗ ಈ ಧರ್ಮದಂಡವನ್ನು ಬಳಸಲಾಗುತ್ತದೆ. ಇನ್ನು ಹಬ್ಬ ಹರಿದಿನ, ವಿಶೇಷ ಸಂದರ್ಭಗಳಲ್ಲಿ ಇದನ್ನು ಬಳಸಲಾಗುತ್ತದೆ. ಹಿಂದಿನ ಕಾಲದಲ್ಲಿ ನ್ಯಾಯ ಹೇಳುವಾಗ ಈ ಧರ್ಮದಂಡವನ್ನು ಸ್ವಾಮೀಜಿಗಳು ಸಹ ಬಳಸುತ್ತಿದ್ದರು ಎಂದು ಸಿಂದಗಿಯ ಕನ್ನಡ ಪ್ರಾಧ್ಯಾಪಕ ಪ್ರೊ. ವ್ಹಿ ಡಿ ವಸ್ತ್ರದ ಅಭಿಪ್ರಾಯಪಟ್ಟಿದ್ದಾರೆ.

ಜಿಲ್ಲೆಯ ಹೆಮ್ಮೆ ಸಾರಂಗ ಮಠದ ಸೆಂಗೋಲ್..!

ಅತ್ಯಂತ ಶಕ್ತಿಯುತ ಹಾಗೂ ಧರ್ಮ ಕಾಪಾಡುವ ಈ ಸೆಂಗೋಲ್ ಅನ್ನು ಸುರಕ್ಷತೆಯಿಂದ ಕಾಪಾಡಿಕೊಂಡು ಬರಲಾಗುತ್ತಿದೆ. ಸೆಂಗೋಲ್ ಅನ್ನು ಹೋಲುವ ಇಂತಹ ಧರ್ಮದಂಡ ಇರುವುದು ಹೆಮ್ಮೆಯ ಸಂಗತಿಯಾಗಿದೆ.

PREV
click me!

Recommended Stories

ನನಗೂ ಸಿಎಂ ಆಗುವ ಆಸೆ ಇದೆ, ಹೈಕಮಾಂಡ್ ನಿರ್ಧಾರ ಅಂತಿಮ: ದಿನೇಶ್‌ ಗುಂಡೂರಾವ್
Karnataka News Live: Aadi Lakshmi Purana Serial - ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ