Vijayapura ಅಪರೂಪದ ಘಟನೆಗೆ ಸಾಕ್ಷಿಯಾದ ಆ ಅಪಘಾತ!

Published : May 17, 2022, 04:26 PM IST
Vijayapura  ಅಪರೂಪದ ಘಟನೆಗೆ ಸಾಕ್ಷಿಯಾದ ಆ ಅಪಘಾತ!

ಸಾರಾಂಶ

ಗುಮ್ಮಟನಗರಿಯ ಒಂದು ಆಕ್ಸಿಡೆಂಟ್‌ ಕಥೆ ಇದು! ಅಪರೂಪದ ಘಟನೆಗೆ ಸಾಕ್ಷಿಯಾದ ಅದೊಂದು ಅಪಘಾತ! ಜೀವ ರಕ್ಷಿಸಿದವರನ್ನ ಹುಡುಕಿ ಕೃತಜ್ಞತೆ ಸಲ್ಲಿಸಿದ ಶಿಕ್ಷಕ!  

ವರದಿ: ಷಡಕ್ಷರಿ ಕಂಪೂನವರ್‌ ಏಷ್ಯಾನೆಟ್‌ ಸುವರ್ಣ ನ್ಯೂಸ್

ವಿಜಯಪುರ (ಮೇ.17): ಯಾರಾದ್ರು ಅಪಘಾತಗೊಂಡು ದಾರಿಯಲ್ಲಿ ಬಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದರೆ ಆಪತ್ಬಾಂಧವರಂತೆ ಬರೋದೆ ಆ್ಯಂಬುಲೆನ್ಸ್ ಸಿಬ್ಬಂದಿ. ಆ್ಯಂಬುಲೆನ್ಸ್  ಸಹಾಯ ಪಡೆದು ಪ್ರಾಣ ಉಳಿಸಿಕೊಂಡ ಬಹುತೇಕರು, ಮತ್ತೆ ಆ್ಯಂಬುಲೆನ್ಸ್ ಸಿಬ್ಬಂದಿಗಳನ್ನ ನೆನಪಿಸಿಕೊಳ್ಳೊದು ಕಡಿಮೆ. ಆದ್ರೆ ಇದಕ್ಕೆ ತದ್ವಿರುದ್ಧ ಎನ್ನುವಂತ ಅಪರೂಪದ ಘಟನೆಯೊಂದು ವಿಜಯಪುರದಲ್ಲಿ (Vijayapura ) ನಡೆದಿದೆ. 

ಅಪರೂಪದ ಘಟನೆ ಇದು!
ಅಂದು ಬೈಕ್‌ ಅಪಘಾತದಲ್ಲಿ ಗಾಯಗೊಂಡವ್ರನ್ನ ಆ್ಯಂಬುಲೆನ್ಸ್ ಸಿಬ್ಬಂದಿ ರಕ್ಷಿಸಿದ್ದರು. ಈಗ ಪ್ರಾಣ ಕಾಪಾಡಿದ ಆ್ಯಂಬುಲೆನ್ಸ್ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಲು ಹುಡುಕಿಕೊಂಡು ಬಂದ ಅಪರೂಪದ ಘಟನೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ನಡೆದಿದೆ. ಕಳೆದ ಕೆಲ ದಿನಗಳ ಹಿಂದೆ ಉಪ್ಪಲದಿನ್ನಿಯ ಶಿಕ್ಷಕರಾದ ಲಾಲ್‌ಸಾಬ್‌ ನದಾಫ್‌ ಉಪ್ಪಲದಿನ್ನಿ ರಸ್ತೆಯಲ್ಲಿ ಬೈಕ್ ಮೇಲೆ ಹೋಗುವಾದ ಬೈಕ್‌ ಅಪಘಾತಗೊಂಡಿತ್ತು. ಈ ವೇಳೆ ರಸ್ತೆಯಲ್ಲಿ ಬಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಆಗ ಅಲ್ಲಿದ್ದ ಒಬ್ಬರು 108 ಆ್ಯಂಬುಲೆನ್ಸ್ ಗೆ ಕರೆ ಮಾಡಿದ್ದಾರೆ. ಆಗ ಆ್ಯಂಬುಲೆನ್ಸ್ ಇಎಂಟಿ ವಿಜಕುಮಾರ್‌ ಲಿಂಗದಳ್ಳಿ ಹಾಗೂ ಪೈಲಟ್‌ ವಿಜಯ ಗದ್ದನಕೇರಿ ಶಿಕ್ಷಕ ಲಾಲ್‌ಸಾಬ್‌ ನದಾಫರನ್ನ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

INDIAN ARMY RECRUITMENT 2022: ಟೆಕ್ನಿಕಲ್ ಗ್ರಾಜುಯೇಟ್ ಕೋರ್ಸ್‌ಗಳಿಗೆ ಅಧಿಸೂಚನೆ

ಆ್ಯಂಬುಲೆನ್ಸ್ ಸಿಬ್ಬಂದಿಯನ್ನ ಹುಡುಕಿದ ಶಿಕ್ಷಕ ಲಾಲ್‌ಸಾಬ್!
ವಿಜಯಪುರ ನಗರದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದ ಶಿಕ್ಷಕ ಲಾಲ್‌ಸಾಬ್‌ ನದಾಫ್‌ ಕೆಲ ದಿನಗಳಲ್ಲೆ ಚೇತರಿಸಿಕೊಂಡು ಡಿಶ್ಚಾರ್ಜ್‌ ಆಗಿದ್ದಾರೆ. ಬಳಿಕ ತನ್ನನ್ನ ಆಸೊತ್ರೆಗೆ ದಾಖಲಿಸಿ  ಪ್ರಾಣ ಉಳಿಸಿದ ಆ್ಯಂಬುಲೆನ್ಸ್ ಸಿಬ್ಬಂದಿಯನ್ನ ನೋಡಲೇ ಬೇಕು ಅಂತಾ ತನ್ನ ಪುತ್ರನ ಬಳಿ ಹೇಳಿಕೊಂಡಿದ್ದಾರೆ. ಬಳಿಕ ಆ್ಯಂಬುಲೆನ್ಸ್ ಸಿಬ್ಬಂದಿಗಳು ಯಾರು ಅಂತಾ ಹುಡುಕಾಡಿದ್ದಾರೆ. ಆಗ EMT ವಿಜಯಕುಮಾರ್‌ ಲಿಂಗದಳ್ಳಿ, ಡ್ರೈವರ್‌ ವಿಜಯ ಗದ್ದನಕೇರಿ ಅಂತಾ ಗೊತ್ತಾಗಿದೆ..

ಕೃತಜ್ಞತೆ ಸಲ್ಲಿಕೆಗೆ ಓಡೋಡಿ ಬಂದರು!
ತಮ್ಮ ಜೀವ ರಕ್ಷಿಸಿದ ಆ್ಯಂಬುಲೆನ್ಸ್ ಸಿಬ್ಬಂದಿ ಬಗ್ಗೆ ಮಾಹಿತಿ ಸಿಗ್ತಿದ್ದಂತೆ ಶಿಕ್ಷಕ ಲಾಲ್‌ಸಾಬ್‌ ಬಸವನ ಬಾಗೇವಾಡಿಗೆ ತೆರಳಿ ಇಎಂಟಿ ವಿಜಯಕುಮಾರ್‌ ಲಿಂಗದಳ್ಳಿ ಹಾಗೂ ಡ್ರೈವರ್‌ ವಿಜಯ ಗದ್ದನಕೇರಿಯನ್ನ ಭೇಟಿ ಮಾಡಿ ಧನ್ಯವಾದ ಹೇಳಿದ್ದಾರೆ. ಆಸ್ಪತ್ರೆಯ ಬೆಡ್ ಮೇಲಿಂದ ಏಳ್ತಿದ್ದಂತೆ ಜೀವ ರಕ್ಷಿಸಿದವರನ್ನೆ ನೆನಪಿಸಿಕೊಂಡಿದ್ದಾರೆ. ಜೊತೆಗೆ ತಮ್ಮ ಸಮಯಕ್ಕೆ ಸರಿಯಾಗಿ ಪ್ರಾಣ ರಕ್ಷಿಸಿದ ಇಎಂಟಿ ಹಾಗೂ ಪೈಲಟ್‌ ಗೆ ಕೃತಜ್ಞತೆ ಸಲ್ಲಿಸಿದ್ದಾರೆ.

BECIL Recruitment 2022: ಖಾಲಿ ಇರುವ 86 ಹುದ್ದೆಗಳಿಗೆ ಅರ್ಜಿ ಆಹ್ವಾನ

ಈ ಘಟನೆ ಮರೆಯೋಕೆ ಸಾಧ್ಯವಿಲ್ಲ ಎಂದ ಸಿಬ್ಬಂದಿ!
ಆ್ಯಂಬುಲೆನ್ಸ್ ಸೇವೆ ಪಡೆಯುವ ಬಹುತೇಕರು ಆಸ್ಪತ್ರೆ ತಲುಪಿದ ಬಳಿಕ ಆ ಸಿಬ್ಬಂದಿಗಳನ್ನ ಮರೆತು ಬಿಡೋದು ಕಾಮನ್‌, ಆದ್ರೆ ಶಿಕ್ಷಕ ಲಾಲ್‌ಸಾಬ್‌ ನದಾಫ್‌ ಮಾತ್ರ ಆ್ಯಂಬುಲೆನ್ಸ್ ಸಿಬ್ಬಂದಿಗಳನ್ನ ಭೇಟಿ ಮಾಡಿ ಕೃತಜ್ಞತೆ ಹೇಳಿದ್ದಾರೆ. ಈ ಘಟನೆಯಿಂದ ಆ್ಯಂಬುಲೆನ್ಸ್ ಸಿಬ್ಬಂದಿಗಳಾದ ವಿಜಯಕುಮಾರ್‌ ಹಾಗೂ ವಿಜಯ ಭಾವುಕರಾಗಿದ್ದಾರೆ. ತಮಗೆ ಕೆಲಸವಾದ ಮೇಲೆ ವಾಪಾಸ್‌ ಮಾತನಾಡಿಸೋರೆ ಕಡಿಮೆ. ಇಂಥದ್ರಲ್ಲಿ ನಮ್ಮನ್ನ ಹುಡುಕಿಕೊಂಡು ಬಂದು ಕೃತಜ್ಞತೆ ಸಲ್ಲಿಸಿದ ಶಿಕ್ಷಕ ಲಾಲ್‌ಸಾಬ್‌ ರೆ ದೊಡ್ಡವರು ಎಂದಿದ್ದಾರೆ..!

PREV
Read more Articles on
click me!

Recommended Stories

ಸಿಎಂ, ಡಿಸಿಎಂ ನಡುವೆ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ: ಸಂಸದ ಜಗದೀಶ್ ಶೆಟ್ಟರ್
ಗೆಳೆಯರ ಜೊತೆ ಟ್ರಿಪ್ ಹೋಗಿದ್ದ ಬೆಂಗಳೂರು ನಿವಾಸಿ ಗೋವಾ ನೈಟ್ ಕ್ಲಬ್ ದುರಂತದಲ್ಲಿ ಮೃತ