Udupi ಒಂದೂವರೆ ವರ್ಷದ ಹಿಂದೆ ಹೂತ ಪಂಜಾಬ್ ವ್ಯಕ್ತಿಯ ಶವ ಹೊರಕ್ಕೆ!

By Suvarna NewsFirst Published May 17, 2022, 3:15 PM IST
Highlights

ಒಂದೂವರೆ ವರ್ಷಗಳ ಹಿಂದೆ ಉಡುಪಿಯ ಬೀಡಿನಗುಡ್ಡೆ ರುದ್ರ ಭೂಮಿಯಲ್ಲಿ ಅಪರಿಚಿತ ಶವವೊಂದನ್ನು ಧಪನ ಮಾಡಲಾಗಿತ್ತು. ಈಗ ಮೃತ ವ್ಯಕ್ತಿ ಪಂಜಾಬ್ ಮೂಲದ ವ್ಯಕ್ತಿ ಎಂದು ತಿಳಿದುಬಂದಿದ್ದು, ಹೂತ ಶವವನ್ನು ಮೇಲಕ್ಕೆತ್ತಿ ಡಿಎನ್ಎ ಪರೀಕ್ಷೆಗೆ ಒಳಪಡಿಸಲಾಗಿದೆ.

ವರದಿ: ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ (ಎ.17): ಆತ ಕಣ್ಮರೆಯಾಗಿದ್ದು ಪಂಜಾಬಿನಿಂದ, ಆತನ ಶವ ಸಿಕ್ಕಿದ್ದು ಉಡುಪಿಯಲ್ಲಿ. ಕಾಣೆಯಾಗಿದ್ದ ವ್ಯಕ್ತಿಯನ್ನು ಅಪಹರಿಸಿ ಕೊಲೆ ಮಾಡಿದ ಶಂಕೆಯ ಹಿನ್ನೆಲೆಯಲ್ಲಿ ಇದೀಗ ಹೂತ ಶವವನ್ನು ಮೇಲಕ್ಕೆತ್ತಿ ಡಿಎನ್ಎ ಪರೀಕ್ಷೆಗೆ ಒಳಪಡಿಸಲಾಗಿದೆ.

ಒಂದೂವರೆ ವರ್ಷಗಳ ಹಿಂದೆ ಉಡುಪಿಯ ಬೀಡಿನಗುಡ್ಡೆ ರುದ್ರ ಭೂಮಿಯಲ್ಲಿ ಅಪರಿಚಿತ ಶವವೊಂದನ್ನು ಧಪನ ಮಾಡಲಾಗಿತ್ತು. ವಾರಿಸುದಾರರು ಯಾರು ಸಿಗದ ಕಾರಣ ಕಾನೂನು ಪ್ರಕ್ರಿಯೆಗಳನ್ನು ಪೂರೈಸಿ ಶವವನ್ನು ಬೀಡಿನಗುಡ್ಡೆ ಸ್ಮಶಾನದಲ್ಲಿ ಹೂಳಲಾಗಿತ್ತು. ಇದೀಗ ಶವದ ಮೂಲ ಸಿಕ್ಕಿದೆ. ದಕ್ಷಿಣ ಭಾರತದ ,ಕರ್ನಾಟಕ ರಾಜ್ಯದ, ಉಡುಪಿ ಜಿಲ್ಲೆಯ ಹೊಳೆ ಬದಿಯಲ್ಲಿ ಸಿಕ್ಕಿದ ಶವ ಪಂಜಾಬ್ ಮೂಲದ ವ್ಯಕ್ತಿಯದ್ದು ಎಂದು ಗೊತ್ತಾಗಿದೆ. ಮೃತದೇಹವನ್ನು ಪಂಜಾಬ್ ಪೊಲೀಸರು ಹೆಚ್ಚಿನ ತನಿಖೆಗಾಗಿ ಹೊರ ತೆಗೆಸಿ, ಮಾದರಿ ಸಂಗ್ರಹಿಸಿದ್ದಾರೆ.

ಕೊಲೆಯಾದ ವ್ಯಕ್ತಿ ಯಾರು ? ಶವ ಇಲ್ಲಿ ಸಿಕ್ಕಿದ್ದು ಹೇಗೆ?
ಪಂಜಾಬ್ ರಾಜ್ಯದ ಸದಾರ್ ಪೊಲೀಸ್ ಠಾಣಾ ವ್ಯಾಪ್ತಿಯ ತೇಜೇಂದ್ರ ಸಿಂಗ್(31) ಎಂಬವರು 2020ರ ಡಿಸೆಂಬರ್ ತಿಂಗಳಲ್ಲಿ ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳುವ ಸಂಬಂಧ ಮಂಗಳೂರಿಗೆ ಹೊರಟಿದ್ದರು. ಬಳಿಕ ಅವರು ತನ್ನ ಮನೆಯವರಿಗೆ ಡಿ.15ರಂದು ಕರೆ ಮಾಡಿ ತಾನು ಮಂಗಳೂರಿನಲ್ಲಿ ಇರುವುದಾಗಿ ಹೇಳಿದ್ದರು. ಆ ಬಳಿಕ ಅವರ ಮೊಬೈಲ್ ಸ್ವಿಚ್‌ಆಫ್ ಆಗಿತ್ತು. ಈ ಹಿನ್ನೆಲೆಯಲ್ಲಿ ಮನೆಯವರು ಸದಾರ್ ಪೊಲೀಸ್ ಠಾಣೆಯಲ್ಲಿ ತೇಜೇಂದ್ರ ಸಿಂಗ್ ಅವರನ್ನು ಕಿಡಿಗೇಡಿಗಳು ಅಪಹರಿಸಿರುವುದಾಗಿ ದೂರು ನೀಡಿದ್ದರು.

BECIL RECRUITMENT 2022: ಖಾಲಿ ಇರುವ 86 ಹುದ್ದೆಗಳಿಗೆ ಅರ್ಜಿ ಆಹ್ವಾನ

ತನಿಖೆ ನಡೆಸಿದ ಪಂಜಾಬ್  ಪೊಲೀಸರಿಗೆ ಇದೊಂದು ಕೊಲೆ ಎಂಬು ದಾಗಿ ತನಿಖೆಯಿಂದ ಕಂಡುಬಂತು. ಅದರಂತೆ ಈ ಬಗ್ಗೆ ಕೊಲೆ ಪ್ರಕರಣ ದಾಖ ಲಿಸಿಕೊಂಡು ತನಿಖೆ ತೀವ್ರಗೊಳಿಸಿದರು ತೇಜೇಂದ್ರ ಅವರ ಫೋನ್ ಕರೆಯ ಜಾಡು ಹಿಡಿದುಕೊಂಡು ಮಂಗಳೂರಿಗೆ ಆಗಮಿಸಿದ ಪಂಜಾಬ್ ಪೊಲೀಸರು, ಮಂಗಳೂರು ಪಶ್ಚಿಮ ವಲಯ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ಪತ್ತೆ ಯಾಗಿದ್ದ ಅಪರಿಚಿತ ಮೃತದೇಹಗಳ ಫೋಟೋ ವನ್ನು ಪರಿಶೀಲನೆ ನಡೆಸಿದರು.

ಈ ವೇಳೆ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾಗಿದ್ದ ಮೃತದೇಹವು ತೇಜೇಂದ್ರ ಸಿಂಗ್ ಫೋಟೋದೊಂದಿಗೆ ಹೋಲಿಕೆ ಆಗಿತ್ತು. ಹೀಗೆ ಮೃತದೇಹ ವನ್ನು ಪತ್ತೆ ಹಚ್ಚಿದ ಪೊಲೀಸರು, ಮಲ್ಪೆಗೆ ಆಗಮಿಸಿ ವಿಚಾರಿಸಿದರು. 

ಉಡುಪಿಯಲ್ಲಿ ಅಪರಿಚಿತ ಶವವಾಗಿ ದೊರಕಿದ್ದರು ಸಿಂಗ್: ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೆಮ್ಮಣ್ಣು ಸಮೀಪದ ಮೂಡು ಕುದ್ರುವಿನ ಹೊಳೆಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹವೊಂದು 2020ರ ಡಿ.16ರಂದು ಪತ್ತೆಯಾಗಿತ್ತು. ಈ ಬಗ್ಗೆ ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿತ್ತು. ಆದರೆ ಮೃತರ ವಾರೀಸುದಾರರು ಯಾರು ಕೂಡ ಪೊಲೀಸ್ ಠಾಣೆಯನ್ನು ಸಂಪರ್ಕಿಸದ ಕಾರಣಕ್ಕಾಗಿ ಅಜ್ಜರಕಾಡು ಶವಗಾರದಲ್ಲಿದ್ದ ಈ ಮೃತದೇಹವನ್ನು ಮಲ್ಪೆ ಪೊಲೀಸರು ಬೀಡಿನಗುಡ್ಡೆ ರುದ್ರಭೂಮಿಯಲ್ಲಿ ಕಾನೂನು ಪ್ರಕ್ರಿಯೆ ನಡೆಸಿ ಧಪನ ಮಾಡಿದ್ದರು. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿತ್ತು. ಇದೀಗ ಈ ಮೃತದೇಹ ತೇಜೇಂದ್ರ ಸಿಂಗ್ ಅವರದ್ದು ಎಂಬುದಾಗಿ ಪಂಜಾಬ್ ಪೊಲೀಸರಿಂದ ಬೆಳಕಿಗೆ ಬಂದಿದೆ.

CSL Recruitment 2022: ವಿವಿಧ 261 ಹುದ್ದೆಗಳಿಗೆ ಕೊಚ್ಚಿನ್ ಶಿಪ್‌ಯಾರ್ಡ್‌ ನೇಮಕಾತಿ

ಮೃತದೇಹ ಹೊರಕ್ಕೆ: ಹೆಚ್ಚಿನ ತನಿಖೆ ಹಿನ್ನೆಲೆಯಲ್ಲಿ ರುದ್ರಭೂಮಿಯಲ್ಲಿ ಧಪನ ಮಾಡಲಾಗಿದ್ದ ಮೃತದೇಹವನ್ನು ಪಂಜಾಬ್ ಪೊಲೀಸರ ಸಮ್ಮುಖದಲ್ಲಿ ಮೇ.14 ರಂದು ಹೊರ ತೆಗೆಯಲಾಯಿತು. ಡಿಎನ್‌ಎ ಮೂಲಕ ಈ ಮೃತದೇಹವು ತೇಜೇಂದ್ರ ಸಿಂಗ್ ಅವರದ್ದೆಯೇ ಎಂಬುದು ದೃಢಪಡಿಸಲು ಪಂಜಾಬ್ ಪೊಲೀಸರು, ಅಸ್ಥಿಪಂಜರದ ಕೆಲ ವೊಂದು ಮೂಳೆ ಹಾಗೂ ಮಾದರಿಯನ್ನು ಸಂಗ್ರಹಿಸಿದರು. ಇದನ್ನು ಇವರು ಪಂಜಾಬ್ ರಾಜ್ಯಕ್ಕೆ ಕೊಂಡೊಯ್ದು ಡಿಎಎನ್ ಪರೀಕ್ಷೆಗೆ ಒಳಪಡಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಮೃತದೇಹವನ್ನು ದಫನ ಮಾಡುವ ಮೊದಲು ಮರಣೋತ್ತರ ಪರೀಕ್ಷೆಗೆ ಒಳ ಪಡಿಸಿದ್ದರೂ ಸಾವಿಗೆ ಕಾರಣ ತಿಳಿದುಬಂದಿರಲಿಲ್ಲ ಎಂದು ಮೂಲಗಳು ತಿಳಿಸಿವೆ. ಇಷ್ಟಕ್ಕೂ ಸಿಂಗ್ ಮಂಗಳೂರು , ಉಡುಪಿ ಕಡೆಗೆ ಬರಲು ಕಾರಣವೇನು? ಆತನನ್ನು ಕೊಲೆ ಮಾಡಿದ್ದು ಯಾರು ? ಯಾಕೆ? ಅನ್ನೋದನ್ನು ಪಂಜಾಬ್ ಪೊಲೀಸರು ಇನ್ನಷ್ಟೇ ಬಹಿರಂಗ ಪಡಿಸಬೇಕಾಗಿದೆ.

ಶವವನ್ನು ಮೇಲಕ್ಕೆ ಎತ್ತುವ ವೇಳೆ  ಉಡುಪಿ ತಹಶೀಲ್ದಾರ್ ಅರ್ಚನಾ ಭಟ್, ಮಲ್ಪೆ ಎಸ್ಸೈ ಶಕ್ತಿವೇಲು ಹಾಜರಿದ್ದರು. ಮೃತದೇಹ ಹೊರ ತೆಗೆಯಲು ಉಡುಪಿ ನಗಸಭೆ ಸಿಬ್ಬಂದಿ, ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಸಹಕರಿಸಿದರು.

click me!