Vijayapura ಆದಿಲ್‌ ಶಾಹಿಗಳ ದಾಳಿ ನಲುಗಿದ್ದ ಪುರಾತನ  ಶಿವನ ದೇಗುಲಕ್ಕೆ ಪುನರುಜ್ಜೀವನ

By Suvarna News  |  First Published May 4, 2022, 4:35 PM IST

ಅಂದು ಆದಿಲ್‌ ಶಾಹಿಗಳ ದಾಳಿಗೆ ಒಳಗಾಗಿದ್ದ ವಿಜಯಪುರ ನಗರದ ಜಾಡರ ಓಣಿಯಲ್ಲಿರೋ ಪುರಾತನ  ಶಿವನ ದೇಗುಲವನ್ನ ಸ್ಥಳೀಯರೇ ಪುನರುಜ್ಜೀವನಗೊಳಿಸಿದ್ದಾರೆ. 


ವರದಿ: ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ‌ ನ್ಯೂಸ್

ವಿಜಯಪುರ (ಮೇ.4): ಮುಸ್ಲಿಂ ಸುಲ್ತಾನರ ದಾಳಿಗೆ ಒಳಗಾಗಿ ಪಾಳು ಬಿದ್ದ ಅದೆಷ್ಟೋ ದೇಗುಲಗಳನ್ನ ನಾವು ನೋಡಿದ್ದೀವಿ. ಮುಸ್ಲಿಂ ಸುಲ್ತಾನರ ದಾಳಿಗೆ ತುತ್ತಾರ ಅಂದಿನ ವಿಜಯನಗರ ಸಾಮ್ರಾಜ್ಯ ಇಂದು ಹಾಳು ಹಂಪೆಯಾಗಿ ನಿಂತಿದೆ. ಇನ್ನು ಕೆಲವೆಡೆ ಪಾಳು ಬಿದ್ದ, ಶಿಥಿಲಾವಸ್ತೆಯಲ್ಲಿರೋ ಶಿವನ ದೇಗುಲಗಳಲ್ಲೆ ಇಂದಿಗೂ ಪೂಜೆ ನಡೆಯುತ್ತಿರುವ ನಿದರ್ಶನಗಳಿವೆ. ಆದ್ರೆ ಹಿಂದೂ ಸಮುದಾಯ ಜಾಗೃತಗೊಂಡಿದ್ದು, ಅಂದು ದಾಳಿಗೊಳಗಾದ ದೇಗುಲಗಳಿಗೆ ಇಂದು ಪುನರುಜ್ಜೀವನಗೊಳಿಸುತ್ತಿದ್ದಾರೆ. ಹಾಗೇ ಅಂದು ಆದಿಲ್‌ ಶಾಹಿಗಳ ದಾಳಿಗೆ ಒಳಗಾಗಿದ್ದ ವಿಜಯಪುರ ನಗರದ ಪುರಾತನ ಶಿವನ ದೇಗುಲವನ್ನ ಸ್ಥಳೀಯರೇ ಪುನರುಜ್ಜೀವನಗೊಳಿಸಿದ್ದಾರೆ.

Tap to resize

Latest Videos

undefined

ಆದಿಲ್‌ ಶಾಹಿಗಳ ದಾಳಿಗೆ ಒಳಗಾಗಿದ್ದ ವಿಶಿಷ್ಟ ಶಿವದೇಗುಲ...!: ವಿಜಯಪುರ ನಗರದ ಜಾಡರ ಓಣಿಯಲ್ಲಿರೋ ಪುರಾತನ ಶಿವಲಿಂಗ ಇರುವ ದೇಗುಲದ ಕಥೆ ಇದು. ಆದಿಲ್‌ ಶಾಹಿಗಳ ಸಾಮ್ರಾಜ್ಯ ಸ್ಥಾಪನೆಯಾದಾಗ ಹಿಂದೂ ದೇಗುಲಗಳನ್ನ ಟಾರ್ಗೆಟ್‌ ಮಾಡಿ ದಾಳಿಗಳು ನಡೆದಿದ್ದವು. ಅಂಥಹ ದೇಗುಲಗಳ ಪೈಕಿ ಜಾಡರ ಓಣಿಯ ವಿಶಿಷ್ಟ ಶಿವಲಿಂಗವು ಒಂದು. ಆದಿಲ್‌ ಶಾಹಿ ಸುಲ್ತಾನರ ದೇಗುಲಗಳ ಮೇಲಿನ ದಾಳಿ ಸಂದರ್ಭದಲ್ಲಿ ಈ ಮಲ್ಲಿಕಾರ್ಜುನ ದೇಗುಲಕ್ಕು ಧಕ್ಕೆ ಆಗಿತ್ತು. ವಿಜಯಪುರ ನಗರದಲ್ಲಿ ಹಿಂದೂ ದೇಗುಲಗಳಿಗೆ ಹೆಚ್ಚಿನ ಹಾನಿಯಾಗಬಾರದೆಂದು ಆಗಿನ ಜನರು ದೇಗುಲಗಳನ್ನ ದೂರಿಂದ ನೋಡಿದರೇ ಒಂದು ಮನೆಯ ರೀತಿ ಕಾಣುವ ಹಾಗೇ ಕಾಪಾಡಿಕೊಂಡು ಬಂದಿದ್ದರು. ಇದೆ ಮಾದರಿಯಲ್ಲಿದ್ದ ಮಲ್ಲಿಕಾರ್ಜುನ ದೇಗಲವನ್ನ ಸ್ಥಳೀಯರೇ ಸೇರಿ ಪುನರುಜ್ಜೀವನಗೊಳಿಸಿದ್ದಾರೆ.

2015 GAZETTED PROBATIONERS ಉತ್ತರ ಪತ್ರಿಕೆ ನಿಡುವಂತೆ ವಂಚಿತ ಅಭ್ಯರ್ಥಿಯಿಂದ ಸಿಎಂಗೆ ಪತ್ರ!

ಈಡೇರಿದ ಶತಮಾನಗಳ ಕನಸು..!: ಶತಮಾನಗಳಿಂದಲು ದೇಗುಲ ಪುನರುಜ್ಜೀವನಗೊಳಿಸಬೇಕು ಅನ್ನೋದು ಭಕ್ತರ ಕನಸಾಗಿತ್ತು. ಆದ್ರೆ ಅನೇಕ ಅಡಚಣೆಗಳಿಂದ ಸಾಧ್ಯವಾಗಿರಲಿಲ್ಲ. ಆದ್ರೆ ಈಗ ದೇಗುಲಕ್ಕೆ ಪುನರ್‌ ಶಿಖರ ನಿರ್ಮಿಸಿ ಕಳಸಾರೋಹಣವನ್ನು ಮಾಡ್ತಿದ್ದಾರೆ. ಸಾವಿರಾರು ಭಕ್ತರು ಸೇರಿ ಮೆರವಣಿಗೆ ಮೂಲಕ ಕಳಶವನ್ನ ತಂದಿದ್ದಾರೆ. ನೂರಾರು ಸುಮಂಗಲೆಯರು ತಲೆ ಮೇಲೆ ಪೂರ್ಣಕುಂಭ ಹೊತ್ತು 3 ಕಿ.ಮೀ ನಡೆದು ಕುಂಭದ ನೀರನ್ನ ಕಳಸಕ್ಕೆ ಎರೆದಿದ್ದಾರೆ. ಏಷ್ಯಾನೆಟ್‌ ಸುವರ್ಣ ನ್ಯೂಸ್‌.ಕಾಮ್‌ ಜೊತೆಗೆ ಮಾತನಾಡಿದ ದೇಗುಲ ಕಮಿಟಿಯ ಅಧ್ಯಕ್ಷರಾದ ಬಸವರಾಜ್‌ ಗೊಳಸಂಗಿ ನಮ್ಮ ಹಿಂದೂ ಸಮುದಾಯದ ಶತಮಾನಗಳ ಕನಸು ಈಗ ಈಡೇರಿದೆ ಎಂದಿದ್ದಾರೆ.

ಬರಿಗಾಗಲಲ್ಲಿ ಕುಂಭ ಹೊತ್ತು ಬಂದ ಮಹಿಳೆಯರು!: ಕಳಸದ ಮೆರವಣಿಗೆ ವೇಳೆ 400ಕ್ಕು ಅಧಿಕ ಮಹಿಳೆಯರು ಕಾಲಿಗೆ ಚಪ್ಪಲಿ ಧರಿಸದೆ ಬರಿಗಾಗಲಲ್ಲೆ ಕುಂಭ ಹೊತ್ತು ಬಂದಿದ್ದು ವಿಶೇಷವಾಗಿತ್ತು. ಆದ್ರೆ ವಿಜಯಪುರದಲ್ಲಿ ಬಿರುಬಿಸಿಲಿರುವ ಕಾರಣ ಕುಂಭ ಹೊತ್ತವರ ಪಾದಗಳು ಸುಡುದಿರಲಿ ಎಂದು ಮಲ್ಲಿಕಾರ್ಜುನನ ಭಕ್ತರು ಸುಮಾರು 3 ಕಿ.ಮೀಟರ್‌ ವರೆಗೆ ಮ್ಯಾಟ್‌ ವ್ಯವಸ್ಥೆ ಮಾಡಿದ್ದು ವಿಶೇಷವಾಗಿತ್ತು.  

ಇಲ್ಲಿ ಪೂಜೆಗೊಳ್ಳುತ್ತೆ ಉಲ್ಟಾ ಶಿವಲಿಂಗ..!: ಜಾಡರ ಓಣಿಯಲ್ಲಿರೋ ಈ ಶಿವಲಿಂಗವೇ ವಿಶಿಷ್ಟ.  ಎಲ್ಲ ಕಡೆಗಳಲ್ಲಿ ಶಿವಲಿಂಗಗಳು ಪೂರ್ವಾಭಿಮುಖವಾಗಿ ಪೂಜೆಗೊಂಡರೇ, ಇಲ್ಲಿ ಶಿವಲಿಂಗ ಪಶ್ಚಿಮಾಭಿಮುಖವಾಗಿ ಪೂಜೆಗೊಳ್ಳುವುದು ವಿಶೇಷ. ಉಲ್ಟಾ ರೀತಿಯಲ್ಲಿ ಇಲ್ಲಿ ಶಿವಲಿಂಗ ಪೂಜೆಗೊಳ್ಳುವುದರಿಂದ ಈ ಶಿವಲಿಂಗದ ದರ್ಶನದಿಂದ  ಹೆಚ್ಚಿನ ಲಾಭ ದೊರೆಯುತ್ತೆ ಎನ್ನುವ ನಂಬಿಕೆ ಭಕ್ತರಲ್ಲಿವೆ.

Chitradurga Lamb's Birthday: ಸಾಕಿದ ಕುರಿಯ ಹುಟ್ಟುಹಬ್ಬ ಆಚರಿಸಿದ ರೈತ!

ಚಾಲುಕ್ಯರ ಕಾಲದಲ್ಲಿ ಸ್ಥಾಪನೆ.!: ಸ್ಥಳೀಯರು ನೀಡುವ ಮಾಹಿತಿಯಂತೆ 12ನೇ ಶತಮಾನದಲ್ಲಿ ಈ ವಿಶಿಷ್ಟ ಶಿವಲಿಂಗ ಸ್ಥಾಪನೆಯಾಗಿರಬಹುದು ಎನ್ನಲಾಗಿದೆ. ಚಾಲುಕ್ಯರ ಆಳ್ವಿಕೆ ಸಮಯದಲ್ಲಿ ಶಿವಲಿಂಗದ ಸ್ಥಾಪನೆ ಮಾಡಿದ್ದು, ಆದಿಲ್‌ ಶಾಹಿ ಸುಲ್ತಾನರ ಆಳ್ವಿಕೆ ವೇಳೆ ದಾಳಿಗೆ ಒಳಗಾಗಿರಬಹುದು ಎನ್ನುವ ಮಾಹಿತಿಗಳನ್ನ ಸ್ಥಳೀಯರು ಹೇಳ್ತಾರೆ.

ಸುಲ್ತಾನರ ಅರಮನೆ ಸಮೀಪದಲ್ಲೆ ಈ ದೇಗುಲ..!: ಆಗಿನ ಆದಿಲ್‌ ಶಾಹಿ ಸುಲ್ತಾನರು ತಾವು ವಾಸ ಮಾಡುವ ಸ್ಥಳಗಳ ಸುತ್ತ ಹಿಂದೂ ದೇಗುಲಗಳನ್ನ ಉಳಿಸಿಕೊಂಡಿದ್ದು ತುಂಬಾನೇ ಕಡಿಮೆ (ಗೋಳಗುಮ್ಮಟದ ಎದುರಿಗೆ ಇರುವ ಪವಾಡ ಬಸವೇಶ್ವರ ದೇಗುಲ ಹೊರತು ಪಡೆಸಿ) ಈ ಐತಿಹಾಸಿಕ ಮಲ್ಲಿಕಾರ್ಜುನ ದೇಗುಲವು ಗೋಳಗುಮ್ಮಟ ಹತ್ತಿರದಲ್ಲೆ ಅಂದರೇ ಆಗಿನ ಸುಲ್ತಾನರ ಅರಮನೆಗಳು ಕೂಗಳತೆ ದೂರದಲ್ಲೆ ಇದ್ವು. ಹೀಗಾಗಿ ದೇಗುಲವನ್ನ ಉಳಿಸಿಕೊಳ್ಳಲು, ಗರ್ಭಗುಡಿಯಲ್ಲಿರುವ ಶಿವಲಿಂಗಕ್ಕೆ ದಕ್ಕೆ ಆಗದಿರಲಿ, ಈ ದೇಗುಲ ಆದಿಲ್‌ ಶಾಹಿ ಸುಲ್ತಾನರ ಕಣ್ಣೀಗೆ ಬೀಳದಿರಲಿ ಎಂದು ಆಗಿನ ಶಿವಭಕ್ತರು ಗರ್ಭಗುಡಿಯ ಬಾಗಿಲನ್ನ ಪೂರ್ವದಿಂದ ಪಶ್ಚಿಮಕ್ಕೆ ಬದಲಿಸಿರಬಹುದು. ಹೀಗಾಗಿ ಇಲ್ಲಿ ಶಿವಲಿಂಗ ಉಲ್ಟಾ ಅಂದ್ರೆ ಪಶ್ಚಿಮಾಭಿಮುಖವಾಗಿ ಪೂಜೆಯಾಗ್ತಿದೆ ಎನ್ನುವ ಊಹೆಗಳು ಇವೆ.

click me!