2015 ರ ಬ್ಯಾಚನ ಗೆಜೆಟೆಡ್ ಪ್ರೋಬೇಷನರಿ ಪರೀಕ್ಷೆ ಬರೆದಿರುವ ವಂಚಿತ ಅಭ್ಯರ್ಥಿ ರಮೇಶ ತನಿಖೆದಾರ ಸದ್ಯ RTI ಅಡಿಯಲ್ಲಿ ಕೆಪಿಎಸ್‌ಸಿ ಗೆ ಮಾಹಿತಿಯನ್ನ ಕೇಳಿದ್ದು, ಇಲ್ಲಿವರೆಗೆ ಸಿಕ್ಕಿರದ ಕಾರಣ ರಾಜ್ಯದ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದಾರೆ.
ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್
ಧಾರವಾಡ (ಮೇ.4): 2015 ರ ಗೆಜೆಡೆಡ್ ಪ್ರೋಬೇಷನರ್ಆ ಯ್ಕೆ ಪಟ್ಟಿಯ ಉತ್ತರ ಪತ್ರಿಕೆ ನಿಡುವಂತೆ ವಂಚಿತ ಅಭ್ಯರ್ಥಿ ರಮೇಶ ತನಿಖೆಧಾರ ಎಂಬುವರು ಸಿಎಂ ಬಸವರಾಜ ಬೊಮ್ಮಾಯಿ (CM basavaraj bommai) ಅವರಿಗೆ ಪತ್ರವೊಂದನ್ನ ಬರೆದಿದ್ದಾರೆ.
2015 ರ ಬ್ಯಾಚನ ಗೆಜೆಟೆಡ್ ಪ್ರೋಬೇಷನರಿ ಪರೀಕ್ಷೆ (kpsc gazetted probationers 2015 ) ಬರೆದಿರುವ ವಂಚಿತ ಅಭ್ಯರ್ಥಿ ರಮೇಶ ತನಿಖೆದಾರ ಸದ್ಯ RTI ಅಡಿಯಲ್ಲಿ ಕೆಪಿಎಸ್‌ಸಿ ಗೆ ಮಾಹಿತಿಯನ್ನ ಕೇಳಿದ್ದಾರೆ. 2015 ನೇಯ ಸಾಲಿನ 428 ಗೆಜೆಟೆಡ್ ಪ್ರೋಬೇಷನರ್ ಹುದ್ದೆಗಳ ಮುಖ್ಯ ಪರೀಕ್ಷೆಯ ಉತ್ತರ ಪತ್ರಿಕೆಯ ದೃಡಿಕೃತ ಪ್ರತಿ ಮತ್ತು ಮುಖ್ಯ ಪರೀಕ್ಷೆಯ ಅಂಕಗಳ ತಿದ್ದಿರುವ ಸಾದ್ಯತೆ ಇರುವ ಉದ್ದೇಶದಿಂದ ಕೆ ಪಿ ಎಸ್ ಸಿ ಗೆ ಮಾಹಿತಿಯನ್ನ ಕೇಳಿದ್ದಾರೆ. ಆದರೆ ಸುಪ್ರಿಂಕೋರ್ಟ್ ಮತ್ತು ಹೈಕೋರ್ಟ್, ಕರ್ನಾಟಕ ಮಾಹಿತಿ ಆಯೋಗದ ತೀರ್ಪು ಇದ್ದರೂ ಮಾಹಿತಿ ಕೊಡದೆ ಇರುವ ಕೆ ಪಿ ಎಸ್ ಸಿ ಅವರು ಉದ್ದೇಶಪೂರ್ವಕವಾಗಿ ಮಾಹಿತಿನ್ನ ನೀಡುತ್ತಿಲ್ಲ ಎಂದು ವಂಚಿತ ಅಭ್ಯರ್ಥಿ ರಮೇಶ ತನಿಖೆದಾರ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂದೆ ಹೇಳಿಕ್ಕೊಂಡಿದ್ದಾರೆ.
ಸುಪ್ರಿಂ ಕೋರ್ಟ್ ಆರ್ಡರ್‌ನಲ್ಲಿ ಹಂಗೆಶ ಕುಮಾರ ಪ್ರಕರಣ, 2010 ಯು ಪಿ ಎಸ್ ಸಿ ಪ್ರಿಲಿಮ್ಸ್, ಮಾಹಿತಿ ಕೇಳಿರುತ್ತಾರೆ ಆದರೆ ಪಾರಸ್ ಜೈನ್ ಪ್ರಕರಣ, ವಿನಯ ಕುಮಾರ ಪ್ರಕರಣಕ್ಕೆ ಸಂಭಂದಿಸಿದಂತೆ ಮಾಹಿತಿ ಆಯೋಗ (Karnataka Information Commission) ಹೇಳಿದ್ರೂ ಮಾಹಿತಿ ಕೊಟ್ಟಿಲ್ಲ ಆರ್ ಟಿ ಐ ಅಡಿ ಮಾಹಿತಿ ಕೊಡದೆ ಇರೋದಕ್ಕೆ ನಮಗೆ ಶಂಕೆ ವ್ಯಕ್ತವಾಗಿದೆ ಎಂದು ನೇರವಾಗಿ ಕೆ ಪಿ ಎಸ್ ಸಿ ಕಾರ್ಯದರ್ಶಿ ಮೆಲೆ ಆರೋಪ ಮಾಡಿದ್ದಾರೆ.
CHITRADURGA LAMB'S BIRTHDAY: ಸಾಕಿದ ಕುರಿಯ ಹುಟ್ಟುಹಬ್ಬ ಆಚರಿಸಿದ ರೈತ!
ಇಂಟರ್ವ್ಯೂ ಮುಗಿದ ತಕ್ಷಣ ಒಂದು ವಾರದಲ್ಲಿ ರಿಸಲ್ಟ್ ಅನೌನ್ಸ್ ಮಾಡಬೇಕಿತ್ತು ಆದರೆ ಒಂದು ತಿಂಗಳು ಟೈಂ ತೆಗೆದುಕ್ಕೊಂಡಿದ್ದೇಕೆ? ಮೇನ್ಸ್ ಪರೀಕ್ಷೆಯಲ್ಲಿ 110 ಕ್ಕೂ ಹೆಚ್ಚು ಅಭ್ಯರ್ಥಿಗಳ ಮಾರ್ಕ ಟೆಂಪರಿಂಗ್ ಆಗಿದೆ 1000 ಅಂಕ ಪಡೆದಿರುವ ಅಭ್ಯರ್ಥಿಗೆ 800, 800 ಇದ್ದ ಅಭ್ಯರ್ಥಿಗೆ 1000 ಈ ರೀತಿಯಾಗಿ ಟೆಂಪರಿಂಗ್ ಮಾಡಿದ್ದಾರೆ.
ನಾವು ಹೆಮ್ಮಯಿಂದ ಹೇಳ್ತಾ ಇದ್ದೇನೆ ಎಥಿಕ್ಸ್, ನಲ್ಲಿ ರಾಜ್ಯದಲ್ಲಿ ಮೊದಲನೇಯ ಸ್ಥಾನ ಬರಬೇಕಿತ್ತು ನಾನು ಫಿಲಾಸಫಿ (Philosophy) ವಿದ್ಯಾರ್ಥಿಯಾಗಿದ್ದು , ಈ ಬಾರಿ ಫಿಲಾಸಫಿ ಆಧಾರದ ಪ್ರಶ್ನೆಗಳಿದ್ದವು, ನಾನು ಸಿಎಂ ಗೆ ಮನವಿ ಮಾಡಿಕ್ಕೊಳ್ಳುವುದೇನೆಂದರೆ ಆರ್ ಟಿಐ ಅಂಡರ್‌ನಲ್ಲಿ ಉತ್ತರ ಪತ್ರಿಕೆ ಕೊಡಿಸಿ ಎಂದು ಪತ್ರ ಬರೆದಿದ್ದೇನೆ ಅಂತಾರೆ ರಮೇಶ.
ಸಿಐಡಿ ನೆತೃತ್ವದ ಕಮಿಟಿ ಮಾಡಿ ಇಲ್ಲದಿದ್ದರೆ ನ್ಯಾಯಾದೀಶರ ಕಮಿಟಿ ಮಾಡಿ, ತನಿಖೆ ಮಾಡಬೇಕು. ಡಿಜಿಟಲ್ ಮೌಲ್ಯಮಾಪನದ ಟಿಸೆಸ್ ಕಾರ್ಯಭಾರವನ್ನು ವಹಿಸಿಕ್ಕೊಂಡಿತ್ತು .ಕೆ ಪಿ ಎಸ್ ಸಿ ಯ ಮುಖಪುಟದ ಬಾರಕೋಡ್ ಸ್ಕ್ಯಾನ್ ಮಾಡಿದಾಗ ಅಲ್ಲಿ ಅಸಲಿ ಅಂಕಗಳು ಹೊರಬರುತ್ತವೆ. ಆವಾಗ ಸತ್ಯ ಹೊರಬರಲಿದೆ ಎಂದು ಸಿಎಂಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ತನಿಖೆ ನಡೆಸಿ ಅವರದ್ದು ತಪ್ಪಾದ್ರೆ ಅವರಿಗೆ 10 ವರ್ಷ ಜೈಲಿಗೆ ಹಾಕಿ ನಾನು ಎನಾದ್ರೂ ಸುಳ್ಳು ಕಾಲಹರಣ ಮಾಡಿದ್ದು ಖಚಿತವಾದರೆ ನನಗೆ 10 ವರ್ಷ ಜೈಲಿಗೆ ಹಾಕಿ ಎಂದು ಅಳಲು ತೋಡಿಕೊಂಡರು.
Udupi: ವಯಸ್ಸಿಗೆ ಡೋಂಟ್ ಕೇರ್ ಹೇಳಿ ಡಾಕ್ಟರೇಟ್ ಪಡೆದ ಮಹಿಳೆ
ಕೆ ಪಿ ಎಸ್ ಸಿ ಅವರು ಮಾಹಿತಿಯನ್ನ ಕೊಡದೆ ಇರೋದಕ್ಕೆ ರಮೇಶ ತನಿಖೆದಾರ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ. ನನಗೆ 2015 ರ ಸಾಲಿನ ಮುಖ್ಯ ಪರೀಕ್ಷೆಯ ಉತ್ತರ ಪತ್ರಿಕೆಗಳ ಪ್ರತಿ ಗಳನ್ನ ಮಾಹಿತಿಗಳನ್ನ ಮಾಹಿತಿ ಹಕ್ಕಿನಡಿ ನೀಡುವಂತೆ ಸಿಎಂ ಬಸವರಾಜ ಬೊಮ್ಮಾಯಿ ಕೆ ಪಿ ಎಸ್ ಸಿಗೆ ಸೂಚನೆ ಕೊಡಬೇಕು ಎಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.