Chitradurga Lamb's Birthday: ಸಾಕಿದ ಕುರಿಯ ಹುಟ್ಟುಹಬ್ಬ ಆಚರಿಸಿದ ರೈತ!

By Suvarna News  |  First Published May 4, 2022, 3:39 PM IST

ಸಾಕಿದ ಕುರಿಯ ಭರ್ಜರಿ ಬರ್ತಡೆ ಆಚರಿಸಿದ ವ್ಯಾಪಾರಿ
15 ವರ್ಷಗಳಿಂದ ಕುರಿ ವ್ಯಾಪಾರ ಮಾಡುತ್ತಿರುವ ಕೃಷ್ಣಮೂರ್ತಿ
ಒಂದು ವರ್ಷದಿಂದ ಕುರಿ ಮರಿಯನ್ನು ಸ್ವಂತ ಮಗುವಿನಂತೆ ಸಾಕಿರುವ ಕುರಿ ವ್ಯಾಪಾರಿ


ಚಿತ್ರದುರ್ಗ(ಮೇ.4): ತಾನೇ ಸಾಕಿದ ಕುರಿ ಮರಿಯ ಕೇಕ್ ಕತ್ತರಿಸಿ ಬರ್ತಡೆ ಆಚರಿಸಿದ ಕುರಿ ವ್ಯಾಪಾರಿ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ TB ಗೊಲ್ಲರಹಟ್ಟಿಯ ಕುರಿ ವ್ಯಾಪಾರಿ ಕೃಷ್ಣಮೂರ್ತಿ ಸುಮಾರು 15 ವರ್ಷಗಳಿಂದ ಕುರಿ ವ್ಯಾಪಾರ ಮಾಡಿಕೊಂಡು ಬರ್ತಿದ್ದರು. ಕಳೆದ ಒಂದು ವರ್ಷದ ಹಿಂದೆ ವ್ಯಾಪಾರಕ್ಕೆಂದು ತಂದಿದ್ದ ಕುರಿಯೊಂದು ಮರಿ ಹಾಕಿದ ಕೇವಲ ಆರು ತಿಂಗಳಲ್ಲೇ ಅಸುನೀಗಿದ ಹಿನ್ನೆಲೆ ಬೇಸರಗೊಂಡ ಮಾಲೀಕ‌, ಆ ಕುರಿ ಮರಿಯನ್ನು ತನ್ನ ಸ್ವಂತ ಮಗುವಂತೆ ಸಾಕಿ ಸಲುಹಿದರು

ಇದೇ ತಿಂಗಳು 2ನೇ ತಾರೀಕಿಗೆ ಆ ಕುರಿ ಮರಿ ಜನನವಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆ, ಆ ಕುರಿಯ ಬರ್ತಡೆ ಯನ್ನು ಅದ್ದೂರಿ ಸಂಭ್ರಮಾಚರಣೆ ಮಾಡುವ ಮೂಲಕ ಜನರಲ್ಲಿ ಅಚ್ಚರಿ ಮೂಡಿಸಿದರು. ಸುಮಾರು 5 ಕೆಜಿ ಕೇಕ್ ತಂದು ಮಾನವರು ಯಾವ ರೀತಿ ತಮ್ಮ ಬರ್ತಡೆ ಸೆಲೆಬ್ರೇಷನ್ ಮಾಡಿಕೊಳ್ತಾರೋ ಆ ರೀತಿಯಲ್ಲೇ ಕುರಿಯ ಹುಟ್ಟುಹಬ್ಬವನ್ನು ಆಚರಣೆ ಮಾಡಿದನು. ಸಂಭ್ರಮಾಚರಣೆಗೆ ಆಗಮಿಸಿದ್ದ ಜನರು ಆ ಕುರಿ ಮರಿಗೆ ವಿಶ್ ಮಾಡುವ ಮೂಲಕ ಗಿಫ್ಟ್ ನೀಡಿದ್ದು ಅತ್ಯಂತ ವಿಶೇಷವಾದ ಸಂಗತಿಯಾಗಿತ್ತು.

Tap to resize

Latest Videos

ಇತ್ತೀಚಿನ ದಿನಗಳಲ್ಲಿ ಮೂಕ ಪ್ರಾಣಿಗಳನ್ನು ಸಾಕುವುದೇ ತುಂಬಾ ಕಡಿಮ ಆಗಿದೆ. ಅಂತದ್ರಲ್ಲಿ ಕುರಿ ವ್ಯಾಪಾರಿ ಕೃಷ್ಣಮೂರ್ತಿ ಮಾತ್ರ ತಾನೇ ಸಾಕಿದ ಕುರಿಯ ಬರ್ತಡೆ ಸೆಲೆಬ್ರೇಷನ್ ಮಾಡಿದ್ದು ವಿಶೇಷವೇ ಸರಿ.

UDUPI: ವಯಸ್ಸಿಗೆ ಡೋಂಟ್ ಕೇರ್ ಹೇಳಿ ಡಾಕ್ಟರೇಟ್ ಪಡೆದ‌ ಮಹಿಳೆ

ಜಮೀನು ವಿವಾದ, ಪೆಟ್ರೋಲ್ ಸುರಿದು ಸಜೀವ ದಹನಕ್ಕೆ ಯತ್ನ: ಜಮೀನು ವಿವಾದ(Land Dispute) ಹಿನ್ನೆಲೆ ವ್ಯಕ್ತಿಯ ಸಜೀವ ದಹನಕ್ಕೆ ಯತ್ನ ಮಾಡಿರೋ ದುಷ್ಕೃತ್ಯ ಚಿತ್ರದುರ್ಗ(Chitradurga) ಜಿಲ್ಲೆ ಹೊಸದುರ್ಗ(Hosadurga) ತಾಲೂಕಿನ ಗರಗ ಗ್ರಾಮದ ರೈತ ಹನುಮಂತಪ್ಪನ ಜಮೀನಿನಲ್ಲಿ ಇಂದು(ಬುಧವಾರ) ನಡೆದಿದೆ. 

ಗರಗ ಗ್ರಾಮದ ಗಂಗಾಧರ ಹಾಗು ಹೆಗ್ಗೆರೆ ಗ್ರಾಮದ ಹನುಮಂತಪ್ಪ ನಡುವೆ ಕಳೆದ ಎರಡ್ಮೂರು ವರ್ಷಗಳಿಂದಲೂ ಜಮೀನು ವಿಚಾರಕ್ಕೆ ಗಲಾಟೆ ಶುರುವಾಗಿದ್ದು, ನಿತ್ಯ ಜಮೀನಿಗೆ ತೆರಳಿದ್ರೆ ಮುಸುಕಿನ ಗುದ್ದಾಟ ನಡೆಯುತ್ತಲೇ‌ ಇರುತ್ತಿತ್ತು. ಆದ್ರೆ ನಿನ್ನೆ ಜಮೀನಿನಲ್ಲಿ ಸ್ವಲ್ಪ‌ ಕೆಲಸವಿದ್ದ ಕಾರಣ ಜಮೀನಿಗೆ ಹನುಮಂತಪ್ಪ ತೆರಳಿದ್ದ ವೇಳೆ, ಗಂಗಾಧರ್ ಹಾಗೂ ಹನುಮಂತಪ್ಪ ಮಧ್ಯೆ ಎಂದಿನಂತೆ ಜಗಳ(Flash) ಶುರುವಾಗಿದೆ. ಆ ಜಗಳ ವಿಕೋಪಕ್ಕೆ ತಿರುಗಿ, ಹನುಮಂತಪ್ಪ ಮೇಲೆ ಪೆಟ್ರೋಲ್ ಸುರಿದು ಸಜೀವ ದಹನಕ್ಕೆ ಗರಗ ಗ್ರಾಮದ ಗಂಗಾಧರ್, ಲಕ್ಷ್ಮಣ ಎಂಬುವವರ ವಿರುದ್ಧ ಹನುಮಂತಪ್ಪ ಹಾಗೂ ಸಂಬಂಧಿಕರು ಗಂಭೀರ ಆರೋಪ(Allegation) ಮಾಡಿದ್ದಾರೆ.

NEET 2022: ಮೇ.21ರಂದೇ PG ಪರೀಕ್ಷೆ, UG ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

ಇನ್ನೂ ಘಟನೆಯಲ್ಲಿ ತೀವ್ರ ಗಾಯಗೊಂಡಿರೋ ಹನುಮಂತಪ್ಪ ಬೆಂಗಳೂರಿನ(Bengaluru) ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಚಿಕಿತ್ಸೆ(Treatment) ಪಡೆಯುತ್ತಿದ್ದಾರೆ. ಪೆಟ್ರೋಲ್ ದಾಳಿಯಿಂದ ತೀವ್ರ ಗಾಯಗೊಂಡಿರೋ ವ್ಯಕ್ತಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಬೇಗ ಗುಣಮುಖರಾಗಿ ಬರಲಿ ಎಂಬುದು ಸಂಬಂಧಿಕರ ಆಶಯವಾಗಿದೆ.

ಇನ್ನೂ ಈ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳು ನಾಪತ್ತೆಯಾಗಿದ್ದು, ಅವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕೂಡಲೇ ಪೊಲೀಸರು(Police) ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಹೊಸದುರ್ಗ ತಾಲ್ಲೂಕಿನ ಶ್ರೀರಾಂಪುರ ಪೊಲೀಸ್ ಠಾಣೆ ಮುಂಭಾದ ಸಂಬಂಧಿಕರು ಧರಣಿ ನಡೆಸಿದ್ದಾರೆ. ಈ ಕುರಿತು ಪೊಲೀಸರು ತನಿಖೆ ಶುರುಮಾಡಿದ್ದು, ಆರೋಪಿಗಳಾದ ಗಂಗಾಧರ, ಲಕ್ಷ್ಮಣನ ವಿರುದ್ಧ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 

SECR APPRENTICE RECRUITMENT 2022 ರೈಲ್ವೆ ಇಲಾಖೆ ಸೇರ ಬಯಸುವವರಿಗೆ ಸುವರ್ಣಾವಕಾಶ

click me!