
ವಿಜಯನಗರ (ಸೆ.8): ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅನ್ನಭಾಗ್ಯ ಯೋಜನೆಯಡಿ ರಾಗಿಯ ಬದಲು ಜೋಳ ನೀಡುವಂತೆ ಪಡಿತರದಾರರು ಒತ್ತಾಯಿಸಿದ ಘಟನೆ ವಿಜಯನಗರ ಜಿಲ್ಲೆಯಲ್ಲಿ ನಡೆದಿದೆ.
ವಿಜಯನಗರ ಜಿಲ್ಲೆಯಲ್ಲಿ ಜೋಳ, ಜೋಳದ ರೊಟ್ಟಿ ಇಲ್ಲಿನ ಜನರ ಮುಖ್ಯ ಆಹಾರ. ರಾಗಿ ತಿಂದು ಅಭ್ಯಾಸ ಇಲ್ಲ. ಹೀಗಾಗಿ ರಾಗಿ ಬದಲು ಜೋಳ ನೀಡುವಂತೆ ಪಡಿತರದಾರರಿಂದ ಒತ್ತಾಯ ಕೇಳಿಬಂದಿದೆ.
ಯಾವ್ಯವ ಪ್ರದೇಶದಲ್ಲಿ ಜನರ ಪದ್ಧತಿ ಹೇಗಿದೆಯೋ ಅದನ್ನೇ ವಿತರಿಸಬೇಕು. ದಕ್ಹಿಣ ಕರ್ನಾಟಕ ಬೆಂಗಳೂರು ಮಂಡ್ಯ, ಹಾಸನ ಭಾಗಗಳಲ್ಲಿ ಪಡಿತರದಾರರಿಗೆ ರಾಗಿ ಬದಲು ಜೋಳ ವಿತರಿಸಿದರೆ ಹೇಗೆ ಸಮಸ್ಯೆಯೋ ಅದೇ ರೀತಿ ನಮ್ಮ ಭಾಗದಲ್ಲಿ ಜೋಳ ಮುಖ್ಯ ಆಹಾರ ಆಗಿರೋದ್ರಿಂದ ಇಲ್ಲಿನ ಆಹಾರ ಪದ್ಧತಿಗೆ ಅನುಗುಣವಾಗಿ ರಾಗಿ ಬದಲು ಜೋಳ ವಿತರಿಸಬೇಕು ಎಂಬ ಆಗ್ರಹ ಪಡಿತರದಾರರದ್ದು.
ಪ್ರಸ್ತುತ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪ್ರತಿ ವ್ಯಕ್ತಿಗೆ 6 ಕೆ.ಜಿ. ಹಾಗೂ ಅಕ್ಕಿ 3 ಕೆ.ಜಿ. ನೀಡಲಾಗುತ್ತಿದೆ. ಆದರೆ ವಿಜಯನಗರ ಭಾಗದ ಜನರ ಮುಖ್ಯ ಆಹಾರ ಜೋಳ ಆಗಿರುವಾಗ ರಾಗಿ ತಗೊಂಡು ಏನು ಮಾಡಬೇಕು ಅಂತಿದ್ದಾರೆ ಪಡಿತರದಾರರು. ಹೀಗಾಗಿ ನ್ಯಾಯಬೆಲೆ ಅಂಗಡಿಗೆ ಬರುವ ಪಡಿತರರು 'ನಮಗ ರಾಗಿ ಬೇಡ ಜೋಳ ಕೊಡ್ರಿ' ಎಂಬ ಬೇಡಿಕೆ ಕೇಳಿಬರುತ್ತಿದೆ.
ನ್ಯಾಯಬೆಲೆ ಅಂಗಡಿಗೆ ಪ್ರತಿ ಪಡಿತರದಾರರು ನಮಗೆ ರಾಗಿ ಬೇಡ, ಜೋಳ ಬೇಕು ಅಂತಾ ಬೇಡಿಕೆ ಇಡುತ್ತಿದ್ದರೂ ನ್ಯಾಯಬೆಲೆ ಅಂಗಡಿಯವರಾಗಲಿ, ಜನಪ್ರತಿನಿಧಿಗಳಾಗಲಿ ಸ್ಪಂದಿಸುತ್ತಿಲ್ಲವೆಂಬ ದೂರು ಕೇಳಿಬಂದಿದೆ. ಹೀಗಾಗಿ ರಾಗಿ ಪಡೆಯಲು ಹಿಂದೇಟು ಹಾಕಿದ ಪರಿಣಾಮ ವಿತರಣೆಯಾಗದ ಉಳಿದಿದೆ. ಈ ಬಗ್ಗೆ ವಿಜಯನಗರ ಜಿಲ್ಲಾಡಳಿತ ಸರ್ಕಾರದ ಆಹಾರ ಹಾಗೂ ನಾಗರಿಕ ವ್ಯವಹಾರಗಳ ಇಲಾಖೆ ಆಯುಕ್ತರಿಗೆ ಅರ್ಜಿ ಸಲ್ಲಿಸಿದರೂ ಆಗಸ್ಟ್ ಸೆಂಪ್ಟೆಂಬರ್‌ನಲ್ಲೂ ನ್ಯಾಯಬೆಲೆ ಅಂಗಡಿಯಲ್ಲಿ ಜೋಳದ ಬದಲು ರಾಗಿಯನ್ನೇ ನೀಡಲಾಗಿದೆ. ಅಂದೆ ಸರ್ಕಾರದ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಸಲ್ಲಿಸಿದ ಪ್ರಸ್ತಾವನೆಗಗೆ ಸರ್ಕಾರ ಸ್ಪಂದಿಸಿಲ್ಲವೆಂಬುದು ಇದು ಸೂಚಿಸುತ್ತೆ.
ಈ ಬಗ್ಗೆ ಜಿಲ್ಲೆಯ ಆಹಾರ ಇಲಾಖೆ ಉಪನಿರ್ದೆಶಕ ರಿಯಾಜ್ ಪ್ರತಿಕ್ರಿಯಿಸಿದ್ದು, ವಿಜಯನಗರ ಭಾಗದಲ್ಲಿ ಜೋಳವೇ ಮುಖ್ಯ ಆಹಾರವಾಗಿರುವುದರಿಂದ ಪಡಿತರದಾರರು ರಾಗಿ ಬದಲಾಗಿ ಜೋಳ ವಿತರಿಸುವಂತೆ ಬೇಡಿಕೆ ಇಟ್ಟಿದ್ದಾರೆ. ಈ ಕುರಿತಂತೆ ಈಗಾಗಲೇ ಜಿಲ್ಲಾಡಳಿತದಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜಿಲ್ಲೆಯಲ್ಲಿ ರಾಗಿ ಹೆಚ್ಚಾಗಿ ಬೆಳೆಯುವುದರಿಂದ ರಾಗಿ ವಿತರಿಸಲಾಗುತ್ತಿದೆ, ಆದರೆ ಜೋಳ ವಿತರಿಸುವಂತೆ ಜನರು ಕೇಳುತ್ತಿದ್ದಾರೆ' ಎಂದಿದ್ದಾರೆ.