ಬೆಂಗಳೂರಿನಲ್ಲಿ 180 ಜೀವಂತ ಇಂಡಿಯನ್ ಸ್ಟಾರ್ ಆಮೆಗಳ ಜಪ್ತಿ; DRI ಭರ್ಜರಿ ಕಾರ್ಯಾಚರಣೆ

Published : Sep 08, 2026, 11:10 AM IST
Bengaluru Star Tortoises Seized

ಸಾರಾಂಶ

ಬೆಂಗಳೂರಿನ ಗಾಂಧಿನಗರದಲ್ಲಿ ಡಿಆರ್‌ಐ ಅಧಿಕಾರಿಗಳು 180 ಜೀವಂತ ಇಂಡಿಯನ್ ಸ್ಟಾರ್ ಆಮೆಗಳನ್ನು ಜಪ್ತಿ ಮಾಡಿದ್ದಾರೆ. ಕೇವಲ ₹10 ಸಾವಿರದ ಆಸೆಗಾಗಿ ಟ್ರಾಲಿ ಬ್ಯಾಗ್‌ನಲ್ಲಿ ಆಮೆಗಳನ್ನು ಸಾಗಿಸುತ್ತಿದ್ದ ಆರೋಪಿಯೊಬ್ಬನನ್ನು ಬಂಧಿಸಲಾಗಿದ್ದು, ಕಳ್ಳಸಾಗಣೆ ಜಾಲದ ಬಗ್ಗೆ ತನಿಖೆ ಮುಂದುವರೆದಿದೆ.

ಬೆಂಗಳೂರು (ಸೆ.08): ಬೆಂಗಳೂರಿನಲ್ಲಿ ಕಳ್ಳಸಾಗಣೆ ಮಾಡುತ್ತಿದ್ದ ಎನ್ನಲಾದ 180 ಜೀವಂತ ಇಂಡಿಯನ್ ಸ್ಟಾರ್ ಆಮೆಗಳನ್ನು DRI ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಬೆಂಗಳೂರಿನ ಗಾಂಧಿನಗರದಲ್ಲಿ ವ್ಯಕ್ತಿಯೊಬ್ಬನಿಂದ ಆಮೆಗಳನ್ನು ವಶಕ್ಕೆ ಪಡೆಯಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

ಆರೋಪಿ ಹಸಿರು ಬಣ್ಣದ ಟ್ರಾಲಿ ಬ್ಯಾಗ್‌ನಲ್ಲಿ ಆಮೆಗಳನ್ನು ಸಾಗಿಸುತ್ತಿದ್ದ ಎನ್ನಲಾಗಿದೆ. ಬ್ಯಾಗ್ ಪರಿಶೀಲಿಸಿದಾಗ 6 ಬಟ್ಟೆಯ ಕವರ್‌ಗಳಲ್ಲಿ ಒಟ್ಟು 180 ಜೀವಂತ ಆಮೆಗಳು ಪತ್ತೆಯಾಗಿವೆ. ವಿಚಾರಣೆ ವೇಳೆ, ಕಲಾಸಿಪಾಳ್ಯದಿಂದ ಟ್ರಾಲಿ ಬ್ಯಾಗ್ ಪಡೆದಿದ್ದಾಗಿ ಆರೋಪಿ ಅಧಿಕಾರಿಗಳಿಗೆ ತಿಳಿಸಿದ್ದಾನೆ ಎನ್ನಲಾಗಿದೆ. ಬಳಿಕ ಆಮೆಗಳನ್ನು ಮೆಜೆಸ್ಟಿಕ್‌ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬನಿಗೆ ತಲುಪಿಸುವಂತೆ ಸೂಚಿಸಲಾಗಿತ್ತು ಎಂದು ಹೇಳಲಾಗಿದೆ.

ಕೇವಲ ₹10 ಸಾವಿರದ ಆಸೆಗೆ ಜೈಲಿಗೆ

ಆಮೆಗಳ ಸಾಗಣೆ ಯಶಸ್ವಿಯಾದರೆ ₹10 ಸಾವಿರ ನೀಡುವುದಾಗಿ ಭರವಸೆ ನೀಡಲಾಗಿತ್ತು ಎಂದು ಆರೋಪಿ ವಿಚಾರಣೆ ವೇಳೆ ಹೇಳಿದ್ದಾನೆ ಎನ್ನಲಾಗಿದೆ. ಹಣದ ಆಸೆಗೆ ಈ ಕೆಲಸ ಮಾಡಿದ್ದಾಗಿ ಆತ ತಿಳಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಆಮೆಗಳ ಕಳ್ಳಸಾಗಣೆಯ ಹಿಂದೆ ಇನ್ನೂ ಯಾರಾದರೂ ಇದ್ದಾರೆಯೇ ಎಂಬುದರ ಕುರಿತು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಜಪ್ತಿ ಮಾಡಿರುವ ಆಮೆಗಳನ್ನು ವನ್ಯಜೀವಿ (ಸಂರಕ್ಷಣಾ) ಕಾಯ್ದೆ, 1972ರ ಅಡಿಯಲ್ಲಿ ವಶಕ್ಕೆ ಪಡೆಯಲಾಗಿದೆ.

PREV
Read more Articles on
click me!

Recommended Stories

ಕಾನೂನು ರೀತಿ ಸೈಟ್‌: ಬೇಕಿದ್ರೆ ಉಪವಾಸ ಕೂರಿ, ನನಗೂ ಸಾಮಾನ್ಯ ಜ್ಞಾನ ಇದೆ, ದೇವೇಗೌಡಗೆ ಸಿಎಂ ತಿರುಗೇಟು
ದೇವೇಗೌಡ - ಡಿಕೆ ನೈಸ್‌ ಫೈಟ್‌: ನೈಸ್ ಯೋಜನೆ ದೇಶದ ಅತಿ ದೊಡ್ಡ ಅಕ್ರಮ, 1453 ನಿವೇಶನ ನೆಪದಲ್ಲಿ ಭೂ ಲೂಟಿಗೆ ಯತ್ನ