ವಿಜಯನಗರ: ಹೊಲಕ್ಕೆ ಹೋಗಿದ್ದ ರೈತನ ಮೇಲೆ ಕರಡಿ ದಾಳಿ, ಕೈ, ಕಾಲು ಭಾಗಕ್ಕೆ ಪರಚಿ ತೀವ್ರ ಗಾಯ

Kannadaprabha News   | Kannada Prabha
Published : Apr 16, 2026, 11:24 AM IST
Vijayanagar farmer brutally attack by wild bear while working in field rav

ಸಾರಾಂಶ

ಹೊಸಪೇಟೆ ತಾಲೂಕಿನ ಬುಕ್ಕಸಾಗರದಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಕರಡಿ ದಾಳಿ ನಡೆಸಿದ್ದು, ಗಾಯಾಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಭಾಗದಲ್ಲಿ ನಿರಂತರ ಕರಡಿ ಹಾವಳಿಯಿಂದ ಜನರಲ್ಲಿ ಆತಂಕ ಹೆಚ್ಚಾಗಿದ್ದು, ಅರಣ್ಯ ಇಲಾಖೆ ಕ್ರಮಕ್ಕೆ ಆಗ್ರಹಿಸಿದ್ದಾರೆ.

 ಹೊಸಪೇಟೆ (ಏ.16): ಹೊಲದಲ್ಲಿ ಕೆಲಸ ಮಾಡುವಾಗ ಏಕಾಏಕಿಯಾಗಿ ಕರಡಿ ರೈತನ ಮೇಲೆ ದಾಳಿ ನಡೆಸಿ, ಗಾಯಗೊಳಿಸಿದ ಘಟನೆ ತಾಲೂಕಿನ ಬುಕ್ಕಸಾಗರ ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿದೆ.ಬುಕ್ಕಸಾಗರದ ಗ್ರಾಮದ ನಿವಾಸಿ ರಾಜಶೇಖರ್ ಗೌಡ (45) ಎಂಬ ರೈತ ಗಾಯಗೊಂಡಿರುವ ವ್ಯಕ್ತಿಯಾಗಿದ್ದಾನೆ. ಗಾಯಗೊಂಡಿರುವ ವ್ಯಕ್ತಿಯು ಹೊಸಪೇಟೆ 100 ಹಾಸಿಗೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೊಲದಲ್ಲಿ ಬೆಳೆಗೆ ನೀರು ಕಟ್ಟುವಾಗ ಏಕಾಏಕಿ ಕರಡಿ ರೈತನ ಮೇಲೆ ದಾಳಿ ನಡೆಸಿದ್ದು, ರಾಜಶೇಖರ್ ನ ಬಲ ಗೈ ಹಾಗೂ ಕಾಲಿಗೆ ಪರಚಿ ಗಾಯಗೊಳಿಸಿದೆ. ಜೀವಕ್ಕೆ ಯಾವುದೇ ತೊಂದರೆಯಿಲ್ಲ ಎಂದು ವೈದ್ಯರು ಮಾಹಿತಿ ನೀಡಿದರು.

ಇತ್ತೀಚಿಗೆ ತಾಲೂಕಿನ ಮಲಪನಗುಡಿ ಹಾಗೂ ಕೊಂಡನಾಯಕನಹಳ್ಳಿ ಪ್ರದೇಶದಲ್ಲಿ ಕೆಲ ದಿನಗಳಿಂದ ನಿರಂತವಾಗಿ ಕರಡಿ ಕಾಣಿಸಿಕೊಳ್ಳುತ್ತಿತ್ತು. ಈ ನಡುವೆ ಬುಕ್ಕಸಾಗರದಲ್ಲಿ ಕರಡಿ ದಾಳಿ ನಡೆಸಿದ್ದರಿಂದ ಈ ಭಾಗದ ರೈತರಲ್ಲಿ ಸಹಜವಾಗಿಯೇ ಆತಂಕ ಮೂಡಿಸಿದೆ.

ಇತ್ತೀಚಿಗೆ ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ಬೆಳಿಗಿನ‌ಜಾವ ವಾಯುವಿಹಾರಕ್ಕೆ ತೆರಳಿಸ ವ್ಯಕ್ತಿಯ ಮೇಲೆ ಕರಡಿಯೊಂದು ದಾಳಿ‌ ನಡೆಸಿ, ತೀವ್ರ ಸ್ವರೂಪದ ಗಾಯಗಳಾಗಿ ಆ ವ್ಯಕ್ತಿಗೆ ಶಸ್ತ್ರಚಿಕಿತ್ಸೆ ಸಹ ನಡೆದಿದೆ. ಇನ್ನೂ ಚಿಕಿತ್ಸೆ ನಡೆಯುತ್ತಿರುವಾಗ ಈಗ ಮತ್ತೊಂದು ಘಟನೆ ರೈತನ ಮೇಲೆ ಕರಡಿ ದಾಳಿ‌ನಡೆಸಿರುವು ತಾಲೂಕಿನ‌ ಜನರು ಭಯಭೀತರಾಗಿದ್ದಾರೆ. ತಕ್ಷಣವೇ ಕರಡಿಗಳನ್ಮು ಬಂದಿಸಿ, ಜನರನ್ನು ರಕ್ಷಿಸಿ ಎಂದು ಸಾರ್ವಸನಿಕರು ಅರಣ್ಯ ಇಲಾಖೆಯ ಅಧಿಕಾರಿಗಳಲ್ಲಿ ಮನವಿ ಮಾಡಿಕಡಿದ್ದಾರೆ.

PREV
Read more Articles on
click me!

Recommended Stories

ಯೋಗೇಶ್ ಗೌಡ ಹತ್ಯೆ: ಪಾಪಪ್ರಜ್ಞೆ ಕಾಡ್ತಿತ್ತು ಹೀಗಾಗಿ ಕೋರ್ಟ್‌ನಲ್ಲಿ ಸತ್ಯ ಹೇಳಿದೆ, ಮಾಫಿ ಸಾಕ್ಷಿ ಬಸವರಾಜ್ ಮುತ್ತಗಿ
Raichur: ಸಹಾಯಧನ ಬಿಡುಗಡೆಗೆ 15 ಸಾವಿರ ಲಂಚ ಪಡೆದಿದ್ದ PDOಗೆ ಏಳು ವರ್ಷ ಜೈಲು ಶಿಕ್ಷೆ