ಮಂಗಳೂರು ಗಲಭೆಗೆ ಸಂಬಂಧಿ ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಅವರು ಶುಕ್ರವಾರ ವಿಡಿಯೋ ಬಿಡುಗಡೆ ಮಾಡಿದ್ದರು. ಜೆಡಿಎಸ್ ಬಿಡುಗಡೆ ಮಾಡಿದ ವಿಡಿಯೋ ಬಗ್ಗೆ ರಾಜಕೀಯ ಮುಖಂಡರು ಬೇರೆ ಬೇರೆ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ. ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಅವರು ಈ ವಿಡಿಯೋ ಕಟ್ ಪೇಸ್ಟ್ ಎಂದು ವ್ಯಂಗ್ಯ ಮಾಡಿದ್ದಾರೆ.
ಕೋಲಾರ(ಜ.11): ಮಂಗಳೂರು ಗಲಭೆಗೆ ಸಂಬಂಧಿ ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಅವರು ಶುಕ್ರವಾರ ವಿಡಿಯೋ ಬಿಡುಗಡೆ ಮಾಡಿದ್ದರು. ಜೆಡಿಎಸ್ ಬಿಡುಗಡೆ ಮಾಡಿದ ವಿಡಿಯೋ ಬಗ್ಗೆ ರಾಜಕೀಯ ಮುಖಂಡರು ಬೇರೆ ಬೇರೆ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಅವರು ಕೋಲಾರದಲ್ಲಿ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಮಂಗಳೂರು ಗಲಭೆ ವಿಚಾರ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಿಡಿ ಬಿಡುಗಡೆ ಹಿನ್ನಲೆ ಮಾತನಾಡಿದ ಅವರು, ಅವುಗಳು ಕಟ್ ಆ್ಯಂಡ್ ಪೇಸ್ಟ್ ಮಾಡಿರುವ ನಕಲಿ ಸಿಸಿಟಿವಿ ಕ್ಯಾಮೆರಾ ವೀಡಿಯೋಗಳು. ಕುಮಾರಸ್ವಾಮಿ ಅವರ ನೇಚರ್ ಹಿಟ್ ಅಂಡ್ ರನ್ ಇದ್ದ ಹಾಗೆ ಎಂದು ಹೇಳಿದ್ದಾರೆ.
ಸೀಕ್ವೆನ್ಸ್ ಬದಲಿಸಿ ವಿಡಿಯೋ ಬಿಡುಗಡೆ ಮಾಡಿದ್ರಾ ಕುಮಾರಸ್ವಾಮಿ..?
ಗಾಳಿಯಲ್ಲಿ ಗುಂಡು ಹಾರಿಸುವುದು ಅಷ್ಟೆ ಕುಮಾರಸ್ವಾಮಿ ಅವರ ಕೆಲಸ. ಮುಖ್ಯ ಮಂತ್ರಿಯಾಗಿದ್ದಾಗಿನಿಂದಲೂ ಬ್ಲಾಕ್ ಮೇಲ್ ಮಾಡುವಂತಹ ಸ್ವಭಾವ ಅವರದ್ದು. ಅವರ ಮಾತನ್ನ ಗಂಭೀರವಾಗಿ ತೆಗೆದುಕೊಳ್ಳುವ ಮಟ್ಟಕ್ಕೆ ರಾಜ್ಯದ ಜನತೆ ಹೋಗುವುದಿಲ್ಲ ಎಂದಿದ್ದಾರೆ.
ಸಿಎಎ ಬಂದ ನಂತರ ಅವರ ಪಕ್ಷದ ಉಳಿವಿಗಾಗಿ, ಅಲ್ಪಸಂಖ್ಯಾತರ ಓಲೈಕೆಗಾಗಿ ರಾಜಕಾರಣ ಮಾಡುತ್ತಿದ್ದಾರೆ ಎಂದಿದ್ದಾರೆ. ಕೀಳುಮಟ್ಟದ ರಾಜಕಾರಣ ಕೈಬಿಡಿ. ಸಮಾಜದಲ್ಲಿ ಒಳ್ಳೆಯ ವಾತಾವರಣ ಸೃಷ್ಟಿ ಮಾಡಿ ಎಂದು ಅವರು ಸಲಹೆ ಕೊಟ್ಟಿದ್ದಾರೆ.
ಕುಮಾರಸ್ವಾಮಿ ಸ್ಫೋಟಕ ವಿಡಿಯೋ ರಿಲೀಸ್: ಒಂದಲ್ಲ ಎರಡಲ್ಲ 35