ಉತ್ತರ ಕನ್ನಡ ಜಿಲ್ಲೆ ದಾಂಡೇಲಿ ಹಾಗೂ ಜೊಯಿಡಾ ಪ್ರದೇಶದ ಜನರು ವಿಚಿತ್ರ ರೋಗದಿಂದ ಬಳಲುತ್ತಿದ್ದಾರೆ. ಶಸ್ತ್ರ ಚಿಕಿತ್ಸೆ ನಡೆಸಿದರು ಪರಿಹಾರ ಸಿಗುತ್ತಿಲ್ಲ
ದಾಂಡೇಲಿ[ಜ.11]: ದಾಂಡೇಲಿ ಹಾಗೂ ಜೋಯಿಡಾ ಗ್ರಾಮೀಣ ಪ್ರದೇಶಗಳಲ್ಲಿ ವಿಚಿತ್ರ ಕಾಯಿಲೆಯೊಂದು ಕಾಣಿಸಿಕೊಂಡು ಜನತೆ ಆತಂಕಗೊಂಡಿದ್ದಾರೆ. ಈ ರೋಗದ ಬಗ್ಗೆ ಖಚಿತ ಮಾಹಿತಿ ಸಿಗುತ್ತಿಲ್ಲ. ಈ ರೋಗ ಲಕ್ಷಣಗಳನ್ನು ಕಂಡರೆ ಇದು ಜಿ.ಬಿ. ಸಿಂಡ್ರೋಮ್ (ಗೆಲ್ವಿನ್ ಬಾರ್ ಸಿಂಡ್ರೋಮ್) ಇರಬಹುದೆನ್ನುವ ಶಂಕೆ ಬಲವಾಗುತ್ತಿದ್ದು, ಆರೋಗ್ಯ ಇಲಾಖೆ ಈ ಕುರಿತು ಪರಿಶೀಲಿಸಬೇಕಿದೆ.
ಕಳೆದ ಕೆಲ ವರ್ಷಗಳ ಹಿಂದೆ ಹುಡಸಾ ಗ್ರಾಮದ ಆರೋಗ್ಯವಂತ ಗರ್ಭಿಣಿಗೆ ಇದೇ ರೀತಿ ರೋಗ ಕಾಣಿಸಿಕೊಂಡಿತ್ತು. ಅಂದು ಗರ್ಭಿಣಿಗೆ ಚಿಕಿತ್ಸೆ ನೀಡುತ್ತಿದ್ದ ಜೋಯಿಡಾ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ನೀಡಿದ ಚಿಕಿತ್ಸೆಯಿಂದಲೇ ಹೀಗಾಗಿದೆ ಎಂದು ದೂರಲಾಗಿತ್ತು.
undefined
ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ತನಿಖೆ ನಡೆಸಿ ಪರಿಶೀಲಿಸಿದಾದ ಅದು ಜಿ.ಬಿ. ಸಿಂಡ್ರೋಮ್ ಎನ್ನುವ ವಿಚಿತ್ರ ಕಾಯಿಲೆಯಾಗಿತ್ತ ಎನ್ನುವುದು ಬಹಿರಂಗಗೊಂಡು ವೈದ್ಯಾಧಿಕಾರಿ ಮೇಲಿನ ಶಂಕೆ ದೂರವಾಗಿತ್ತು. ಈಗ ಈ ಕಾಯಿಲೆ ಮತ್ತೆ ಈ ಭಾಗದಲ್ಲಿ ಕಾಣಿಸಿಕೊಂಡಿದೆ. ಹಲವರು ಈ ಕಾಯಿಲೆಯಿಂದ ಪೀಡಿತರಾಗಿ ಎಲ್ಲೆಲ್ಲೋ ಹೋಗಿ ಚಿಕಿತ್ಸೆ ಪಡೆದು ಗುಣಮುಖರಾಗದೆ ಕುತ್ತಿಗೆ ವರೆಗೆ ಹರಡಿ ಸಂಪೂರ್ಣ ಶರೀರದ ಸ್ವಾಧೀನವನ್ನೇ ಕಳೆದುಕೊಂಡ ಸ್ಥಿತಿಯಲ್ಲಿದ್ದರೆ ಇನ್ನು ಕೆಲವರು ಹುಬ್ಬಳ್ಳಿ, ಬೆಳಗಾವಿ, ಮಣಿಪಾಲ ಆಸ್ಪತ್ರೆಗೆ ಹೋಗಿ ಲಕ್ಷಾಂತರ ಹಣ ಖರ್ಚು ಮಾಡಿ ಶಸ್ತ್ರ ಚಿಕಿತ್ಸೆಗೆ ಒಳಗಾದರೂ ಈಗಲೂ ನಡೆದಾಡಲೂ ಆಗದೇ ಒದ್ದಾಡುತ್ತಿದ್ದಾರೆ.
ಮೇದಿನಿ ಗ್ರಾಮಕ್ಕೆ ಹೆಣ್ಣು ಕೊಡೋಕೂ ಹೆದರ್ತಾರೆ !...
ಈ ರೋಗ ಆರೋಗ್ಯವಂತ ಮನುಷ್ಯನಿಗೆ ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳುತ್ತಿದ್ದು, ಮೊದಲಿಗೆ ಕಾಲುಗಳ ಮಂಡಿಯ ನರಗಳು ಬಿಗಿತಗೊಂಡು ಹೆಜ್ಜೆಯಿಡಲು ಕಷ್ಟಆಗುತ್ತದೆ. ಕ್ರಮೇಣ ಕಾಲಿನ ಬೆರಳುಗಳು ಅಲುಗಾಡಿಸಲಾಗದಂತೆ ನಿಯಂತ್ರಣ ತಪ್ಪುತ್ತದೆ. ನಂತರ ಈ ರೋಗ ಕ್ರಮೇಣ ಹರಡುತ್ತ ಕೈಯಿಗೆ, ಕೈ ಬೆರಳುಗಳಿಗೆ ಹರಡಿ ನಿಯಂತ್ರಣ ತಪ್ಪುತ್ತದೆ. ಮುಂದೆ ನಡೆದಾಡಲಾಗದೇ ಕುಸಿದು ಬೀಳುತ್ತಾರೆ. ಇದು ಕುತ್ತಿಗೆ ವರೆಗೆ ಹರಡುತ್ತದೆ ಎನ್ನಲಾಗಿದೆ. ಇದನ್ನು ಆರಂಭದಲ್ಲಿ ಕಂಡು ಹಿಡಿಯುವುದೇ ವೈದ್ಯರಿಗೆ ಸವಾಲಾಗಿ ಪರಿಣಮಿಸಿದೆ.
ಮೇದಿನಿ ಎಂಬ ಸುಂದರ ಊರಲ್ಲಿ 2ಹಗಲು 1ರಾತ್ರಿ : ಇಲ್ಲಿ ಜೀವಕ್ಕೆ ಗ್ಯಾರಂಟಿ ಇಲ್ಲ!...
ಪ್ರಾರಂಭದಲ್ಲಿ ರೋಗ ಕಾಣಿಸಿಕೊಂಡಾಗ ನಾಟಿ ವೈದ್ಯರು ಹಾಗೂ ಬೇರೆ ಇನ್ನೀತರ ಔಷಧಿಗಳನ್ನು ಮಾಡಿ ನಂತರ ಉಲ್ಬಣಗೊಂಡಾಗ ದೊಡ್ಡ ಆಸ್ಪತ್ರೆಗಳಿಗೆ ಕರೆದೊಯ್ಯುವ ಅಷ್ಟರಲ್ಲಿ ರೋಗ ಸಂಪೂರ್ಣವಾಗಿ ಹರಡಿರುತ್ತದೆ. ರೋಗಿಗೆ ಚಿಕಿತ್ಸೆ ಕಷ್ಟಕರವಾಗುತ್ತದೆ. ನಿಧಾನವಾಗಿ ವರ್ಷಾನುಗಟ್ಟಲೆ ಚಿಕಿತ್ಸೆಯ ನಂತರ ನರಗಳು ಬಲವರ್ಧನೆಗೊಂಡು ನಡೆದಾಡಲು ಸಾಧ್ಯವಾಗುತ್ತದೆ ಎನ್ನಲಾಗಿದೆ. ಈ ರೋಗ ಹೆಚ್ಚಾಗಿ ಕಟ್ಟಿನಿಂತ ನೀರನ್ನು ಬಳಸುವುದರಿಂದ ಹಾಗೂ ಅದರಲ್ಲಿರುವ ಜಲಚರಗಳನ್ನು ತಿಂದಾಗ ವೈರಲ್ ಸೋಂಕಿನಿಂದ ಉಂಟಾಗುತ್ತದೆ ಎನ್ನಲಾಗಿದೆ. ಈ ಭಾಗದ ನದಿ ತೀರದ ಹಾಗೂ ಜಲಾಶಯದ ಹಿನ್ನೀರಿನ ಸಮೀಪವಿರುವ ಗ್ರಾಮಗಳಲ್ಲಿ ಈ ವಿಚಿತ್ರ ರೋಗ ಕಾಣಿಸಿಕೊಂಡಿದ್ದು, ಆರೋಗ್ಯ ಇಲಾಖೆ ಈ ರೋಗಕ್ಕೆ ಸೂಕ್ತ ಚಿಕಿತ್ಸೆ ಕುರಿತು ಅಗತ್ಯ ಮಾಹಿತಿ ನೀಡುವ ಕಾರ್ಯ ಮಾಡಬೇಕಿದೆ.