ಲವ್ ಜಿಹಾದ್ ಮಾಡುವ ಮುಸ್ಲಿಮರ ವಿರುದ್ದ ವಿಎಚ್ ಪಿ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಕಿಡಿಕಾರಿದ್ದು, ಇನ್ಮುಂದೆ ಲವ್ ಜಿಹಾದ್ ಮಾಡುವ ಮುಸಲ್ಮಾನ್ ಗೂಂಡಾಗಳ ಮನೆಗೆ ನುಗ್ಗಿ ಹೊಡೆಯುತ್ತೇವೆ ಎಂದಿದ್ದಾರೆ.
ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್
ಮಂಗಳೂರು (ಮೇ.9): ಕನ್ಯಾನದ ಹಿಂದೂ ವಿದ್ಯಾರ್ಥಿನಿ ಆತ್ಮೀಕಾ ಆತ್ಮಹತ್ಯೆ ವಿಚಾರದಲ್ಲಿ ಲವ್ ಜಿಹಾದ್ ಮಾಡುವ ಮುಸ್ಲಿಮರ ವಿರುದ್ದ ವಿಶ್ವ ಹಿಂದೂ ಪರಿಷತ್ (Vishva Hindu Parishad) ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ (VHP ) ಕಿಡಿ ಕಾರಿದ್ದು, ಇನ್ಮುಂದೆ ಲವ್ ಜಿಹಾದ್ (Love Jihad) ಮಾಡುವ ಮುಸಲ್ಮಾನ್ ಗೂಂಡಾಗಳ ಮನೆಗೆ ನುಗ್ಗಿ ಹೊಡೆಯುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ದ.ಕ ಜಿಲ್ಲೆಯ ಬಂಟ್ವಾಳದ ಕನ್ಯಾನದಲ್ಲಿ ನಡೆದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಶರಣ್ ಪಂಪ್ ವೆಲ್, ಇನ್ಮುಂದೆ ಯಾವುದೇ ಹಿಂದೂ ಹೆಣ್ಮಗಳಿಗೆ ಈ ಅನ್ಯಾಯ ಆಗಬಾರದು. ಮುಂದಿನ ದಿವಸದಲ್ಲಿ ಹಿಂದೂ ತಾಯಂದಿರು ದುರ್ಗೆಯ ರೂಪದಲ್ಲಿ ಇರಬೇಕು. ಮುಸಲ್ಮಾನ ಯುವಕರು ಲವ್ ಜಿಹಾದ್ ಹೆಸರಿನಲ್ಲಿ ನಮ್ಮ ಹೆಣ್ಮಕ್ಕಳ ತಂಟೆಗೆ ಬಂದ್ರೆ, ನಮ್ಮ ಹೆಣ್ಮಕ್ಕಳಿಗೆ ಕಣ್ಣು ಹಾಕಿದ್ರೆ ಅವರಿಗೆ ಅಟ್ಟಾಡಿಸಿಕೊಂಡು ಹೊಡೆಯಿರಿ. ಮುಂದಿನ ದಿವಸಗಳಲ್ಲಿ ತಾಯಂದಿರು ಎಚ್ಚರವಾಗಿರಿ, ನಮ್ಮ ಹೆಣ್ಮಕ್ಕಳಿಗೆ ಕಣ್ಣು ಹಾಕಿದ್ರೆ ಅವರ ಕಣ್ಣುಗಳನ್ನ ಕಿತ್ತು ಬಿಸಾಡಿ. ಲವ್ ಜಿಹಾದ್ ವಿರುದ್ದ ಮುಂದಿನ ದಿನಗಳಲ್ಲಿ ಧರ್ಮ ಯುದ್ದ ಪ್ರಾರಂಭಿಸ್ತೇವೆ. ನಿಮ್ಮ ಯುವಕರಿಗೆ ನೀವು ಬುದ್ದಿ ಹೇಳಿ, ಇಲ್ಲವಾದ್ರೆ ನಮ್ಮ ಬಜರಂಗಿ ಪಡೆ ತಯಾರಾಗಿದೆ.
ಮುತಾಲಿಕ್ ರನ್ನ ಒದ್ದು ಒಳಗಡೆ ಹಾಕ್ಬೇಕು HD Kumaraswamy
ಇನ್ಮುಂದೆ ನಮ್ಮ ಹೆಣ್ಮಕ್ಕಳಿಗೆ ತೊಂದ್ರೆ ಕೊಟ್ಟರೆ ಮುಸಲ್ಮಾನ್ ಗೂಂಡಾಗಳು ಆಸ್ಪತ್ರೆಗೆ ದಾಖಲಾಗಬೇಕಾಗುತ್ತೆ. ಲವ್ ಜಿಹಾದ್ ಮಾಡುವ ಮುಸಲ್ಮಾನ್ ಗೂಂಡಾಗಳ ಮನೆಗೆ ನುಗ್ಗಿ ಹೊಡೆಯುತ್ತೇವೆ. ಎಸ್ ಡಿಪಿಐನಲ್ಲಿ ಭಾಸ್ಕರ್ ಪ್ರಸಾದ್ ಮತ್ತು ಆನಂದ ಮಿತ್ತಬೈಲ್ ಇದಾರೆ. ಎಸ್ ಡಿಪಿಐನ ಯಾವುದೇ ಪ್ರತಿಭಟನೆಯಲ್ಲಿ ಭಾಗವಹಿಸಿ ಹಿಂದುಗಳಿಗೆ ಮತ್ತು ಸಂಘಟನೆಗಳಿಗೆ ಬೈತಾರೆ. ಆದ್ರೆ ಆತ್ಮೀಕಾ ಸಾವಾಗಿ ಒಂದು ವಾರ ಕಳೆದ್ರೂ ಅವರು ಮಾತನಾಡ್ತಿಲ್ಲ. ಮುಸಲ್ಮಾನರ ಮನೆಯ ಬಿರಿಯಾನಿ ಆಸೆಗೆ ಅವರ ಹಿಂದೆ ಓಡ್ತಾ ಇದೀರಾ. ಇವತ್ತು ಮನೆಯಲ್ಲಿ ಕೂತು ನಾಟಕ ಮಾಡ್ತಾ ಇದೀರಿ. ಭಾಸ್ಕರ್ ಪ್ರಸಾದ್ ಮತ್ತು ಆನಂದ ಮಿತ್ತಬೈಲ್ ಇನ್ಮುಂದೆ ಪ್ರತಿಭಟನೆ ಮಾಡಿದ್ರೆ ಹಿಂದೂ ಸಮಾಜ ಸುಮ್ಮನೆ ಕೂರಲ್ಲ. ಹಿಂದೂ ಯುವಕರು ನಿಮಗೆ ಚಪ್ಪಲಿ ತೆಗೊಂಡು ಹೊಡೀತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ವಾಮೀಜಿಗಳ ನೇತೃತ್ವದಲ್ಲಿ ಪ್ರತಿಭಟನೆ: ಅನ್ಯಕೋಮಿನ ಯುವಕನ ಕಿರುಕುಳಕ್ಕೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಆತ್ಮಹತ್ಯೆ ಹಿನ್ನೆಲೆ ಕನ್ಯಾನದಲ್ಲಿ ವಿಎಚ್ ಪಿ-ಬಜರಂಗದಳದಿಂದ ಬೃಹತ್ ಪ್ರತಿಭಟನೆ ನಡೆಯಿತು. ಕನ್ಯಾನ ಪೇಟೆಯಲ್ಲಿ ಲವ್ ಜಿಹಾದ್ ವಿರುದ್ದ ವಿಎಚ್ ಪಿ ನಡೆಸಿದ ಪ್ರತಿಭಟನೆಯಲ್ಲಿ ಸ್ವಾಮೀಜಿಗಳು ಮತ್ತು ಹಿಂದೂ ಮುಖಂಡರು ಭಾಗಿಯಾಗಿದ್ದರು. ಒಡಿಯೂರು ಗುರುದೇವಾನಂದ ಸ್ವಾಮೀಜಿ, ಮಾಣಿಲ ಮೋಹನ್ ದಾಸ್ ಸ್ವಾಮೀಜಿ ಹಾಗೂ ವಿಎಚ್ ಪಿ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಭಾಗಿಯಾಗಿದ್ದರು.
Mandyaದಲ್ಲಿ ಜೆಡಿಎಸ್‌ಗೆ ಶಾಕ್ ಮೇಲೆ ಶಾಕ್!
ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ ಕಣಿಯೂರು ಎಂಬಲ್ಲಿ ಮೂಲತಃ ಸುಳ್ಯ ತಾಲೂಕಿನ ಪಂಜ ನಿವಾಸಿ ಸಂಜೀವ ಅವರ ಪುತ್ರಿ ಆತ್ಮೀಕಾ(14) ಆತ್ಮಹತ್ಯೆ ಮಾಡಿಕೊಂಡಿದ್ದಳು. ಸ್ಥಳೀಯ ನಿವಾಸಿ ಶಾಹುಲ್ ಹಮೀದ್ ಎಂಬಾತನ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದ್ದು, ಆತ್ಮಹತ್ಯೆಗೆ ಪ್ರೇರಣೆ ನೀಡಿದ ಶಾಹುಲ್ ಹಮೀದ್ ನನ್ನ ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಸಾಹುಲ್ ಹಮೀದ್ ಪ್ರೀತಿಸುವಂತೆ ಪೀಡಿಸಿದ್ದು, ಕಾಟ ತಡೆಯಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದ್ದು, ಲವ್ ಜಿಹಾದ್ ಗೆ ಬಾಲಕಿ ಬಲಿ ಎಂದು ಆರೋಪಿಸಿರುವ ವಿಎಚ್ ಪಿ, ಬಾಲಕಿ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡಲು ಒತ್ತಾಯಿಸಿ ಪ್ರತಿಭಟನೆ ನಡೆಸಿದೆ.