ಹಿರಿಯ ಪತ್ರಕರ್ತ, ಕನ್ನಡ ಹೋರಾಟಗಾರ ರಾಘವೇಂದ್ರ ಜೋಶಿ ಇನ್ನಿಲ್ಲ

Suvarna News   | Asianet News
Published : Dec 21, 2020, 10:51 AM IST
ಹಿರಿಯ ಪತ್ರಕರ್ತ, ಕನ್ನಡ ಹೋರಾಟಗಾರ ರಾಘವೇಂದ್ರ ಜೋಶಿ ಇನ್ನಿಲ್ಲ

ಸಾರಾಂಶ

ಹಿರಿಯ ಪತ್ರಕರ್ತ ಹಾಗೂ ಕನ್ನಡ ಹೋರಾಟಗಾರ ರಾಘವೇಂದ್ರ ಜೋಶಿ ನಿಧನ| ಬೆಳಗಾವಿ ನಗ ಸ್ವಗೃಹದಲ್ಲಿ ಇಹಲೋಕ ತ್ಯಜಿಸಿದ ರಾಘವೇಂದ್ರ ಜೋಶಿ| ವಾಕಿಂಗ್ ಮುಗಿಸಿ ಮನೆಗೆ ಮರಳುತ್ತಲೇ ಕುಸಿದು ಬಿದ್ದು ಹೃದಯಾಘಾತದಿಂದ ಸಾವು| 

ಬೆಳಗಾವಿ(ಡಿ.21): ನಗರದ ಹಿರಿಯ ಪತ್ರಕರ್ತ ಹಾಗೂ ಕನ್ನಡ ಹೋರಾಟಗಾರ ರಾಘವೇಂದ್ರ ಜೋಶಿ(78)ಇಂದು(ಸೋಮವಾರ) ಬೆಳಿಗ್ಗೆ ನಿಧನಹೊಂದಿದ್ದಾರೆ. 

ವಾಕಿಂಗ್ ಮುಗಿಸಿ ಭಾಗ್ಯ ನಗರದ ಮನೆಗೆ ಮರಳುತ್ತಲೇ ರಾಘವೇಂದ್ರ ಜೋಶಿ ಕುಸಿದು ಬಿದ್ದು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.  ರಾಘವೇಂದ್ರ ಜೋಶಿ ಅವರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.

‘ಸಿಎಂ 2 ದಿನದಲ್ಲಿ ಸಿಹಿಸುದ್ದಿ ಎಂದಿದ್ದರು, ಏನಾಯ್ತೋ’

ಇಂದು ಸಂಜೆ 5 ಗಂಟೆಗೆ ಹಿಂದವಾಡಿಯ ರುದ್ರಭೂಮಿಯಲ್ಲಿ ಮೃತರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರಿಂದ ಮಾಹಿತಿ ಲಭ್ಯವಾಗಿದೆ. 
 

PREV
click me!

Recommended Stories

ಬಿಡಿಎ ಸೈಟ್ ತಗೊಂಡ್ರೆ ಚಿಪ್ಪೇ ಗತಿ; ಕೆಂಪೇಗೌಡ ಲೇಔಟ್ ಸೈಟ್ ತಗೊಂಡು 15 ವರ್ಷವಾದ್ರೂ ಸೈಟೂ ಇಲ್ಲ, ಸಾಲನೂ ಸಿಗ್ತಿಲ್ಲ!
ಬಿರಿಯಾನಿ ಹೋಟೆಲ್ ಕುಟುಂಬದ ಸಾಮೂಹಿಕ ಆತ್ಮ*ಹತ್ಯೆ ಕೇಸಿಗೆ ಟ್ವಿಸ್ಟ್; ವಿಷ ಸೇವಿಸದ ಅಜ್ಜಿ ಸತ್ತಿದ್ಹೇಗೆ!