ಫಾಸ್ಟ್ ಟ್ಯಾಗ್ ಅಳವಡಿಸಲು ಜನವರಿ 15ರವರೆಗೆ ಕಾಲಾವಕಾಶ ನೀಡಲಾಗಿದ್ದು, ಮಂಗಳೂರು ಭಾಗದಲ್ಲಿ ಫಾಸ್ಟ್ ಡ್ಯಾಗ್ ಹೊಂದಿರುವ ಕೆಲವೇ ಕೆಲವು ವಾಹನಗಳು ಕಂಡು ಬಂದಿದೆ. ಫಾಸ್ಟ್ ಟ್ಯಾಗ್ ಇಲ್ಲದೆಯೂ ಸಂಚರಿಸಬಹುದಾಗಿದ್ದು, ಏನು..? ಹೇಗೆ..? ಎಂದು ತಿಳಿಯಲು ಇಲ್ಲಿ ಓದಿ.
ಮಂಗಳೂರು(ಡಿ.15): ಫಾಸ್ಟ್ ಟ್ಯಾಗ್ ಅಳವಡಿಕೆಗೆ ಜ.15ರವರೆಗೆ ಕಾಲಾವಕಾಶ ಮುಂದೂಡಲಾಗಿದೆ. ಮಂಗಳೂರಿನ ಟೋಲ್‌ಗಳಲ್ಲಿ ಫಾಸ್ಟ್ ಟ್ಯಾಗ್ ಹೊಂದಿರೋ ವಾಹನಗಳ ಸಂಖ್ಯೆ ವಿರಳವಾಗಿದ್ದು, ಕೆಲವೇ ಕೆಲವು ವಾಹನಗಳು ಫಾಸ್ಟ್‌ಟ್ಯಾಗ್ ಅಳವಡಿಸಿಕೊಂಡಿವೆ.
ವಾಹನಗಳು ಎಂದಿನಂತೆ ಹಣ ಪಾವತಿಸಿಯೇ ಟೋಲ್‌ಗಳಲ್ಲಿ ಸಂಚರಿಸುತ್ತಿವೆ. ಬೆರಳೆಣಿಕೆಯಷ್ಟು ವಾಹನಗಳಿಂದ ಫಾಸ್ಟ್ ಟ್ಯಾಗ್ ಬಳಕೆಯಾಗಿದ್ದು, ತಲಪಾಡಿಯ ನವಯುಗ ಟೋಲ್‌ನಲ್ಲಿ ಆರು ಪ್ರತ್ಯೇಕ ಫಾಸ್ಟ್ ಟ್ಯಾಗ್ ಬೂತ್‌ಗಳನ್ನೂ ಸಿದ್ಧಪಡಿಸಲಾಗುತ್ತಿದೆ.
ಪ್ರವಾಹ ನಾಡಲ್ಲೀಗ ಸಾಂಪ್ರದಾಯಿಕ ಕಟ್ಟ ಆಂದೋಲನ
ಒಟ್ಟು ಹತ್ತು ಲೇನ್‌ಗಳಲ್ಲಿ ಆರು ಫಾಸ್ಟ್ ಟ್ಯಾಗ್ ಲೇನ್ ರೀಡರ್ ಅಳವಡಿಸಲಾಗಿದ್ದು, ಸಿಬ್ಬಂದಿಗೆ ಫಾಸ್ಟ್ ಟ್ಯಾಗ್ ಸ್ಕ್ಯಾನ್ ಹ್ಯಾಂಡ್ ಮೆಷಿನ್ ಒದಗಿಸಲಾಗಿದೆ. ಹೀಗಿದ್ದರೂ ವಾಹನಗಳು ಶುಲ್ಕ ಪಾವತಿಸಲು ಸಾಲುಗಟ್ಟಿ ನಿಂತಿರುವ ಘಟನೆ ನಡೆದಿದೆ. ಫಾಸ್ಟ್ ಟ್ಯಾಗ್ ಅಳವಡಿಸದ ಹಿನ್ನೆಲೆ ಮಂಗಳೂರು ಟೋಲ್ ಗಳಲ್ಲಿ ಯಥಾಸ್ಥಿತಿ ಮುಂದುವರಿಕೆ
ಮಂಗಳೂರಿನ ಟೋಲ್‌ಗೇಟ್‌ಗಳಿಗೆ ಭಾರೀ ಪೊಲೀಸ್ ಭದ್ರತೆ ಒದಗಿಸಲಾಗಿದ್ದು, ತಲಪಾಡಿ ನವಯುಗ ಟೋಲ್‌ನಲ್ಲಿ, ಸುರತ್ಕಲ್, ಬಿ.ಸಿ.ರೋಡ್ ಟೋಲ್‌ಗಳಲ್ಲಿ ಭದ್ರತೆಗೆ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಟೋಲ್ ಭದ್ರತೆಗೆ 25ಕ್ಜೂ ಅಧಿಕ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು, ಕೇರಳ ಗಡಿ ಭಾಗವಾಗಿರೋ ಕಾರಣ ತಲಪಾಡಿ ಟೋಲ್ ಗೇಟ್‌ಗೆ ಹೆಚ್ಚಿನ ಭದ್ರತೆ ನೀಡಲಾಗಿದೆ.
ಉಚಿತ ಪ್ರಯಾಣ:
ತಲಪಾಡಿ ಟೋಲ್ ಗೇಟ್ ನಲ್ಲಿ ಖಾಸಗಿ ಬಸ್ಸುಗಳ ಉಚಿತ ಪ್ರಯಾಣಕ್ಕೆ ತಡೆ ಬಿದ್ದಿದ್ದು, ತಿಂಗಳಿಗೆ 32 ಸಾವಿರ ಟೋಲ್ ಪಾವತಿಸಲು ಬಸ್ಸುಗಳಿಗೆ ಸೂಚನೆ ನೀಡಲಾಗಿದೆ. 10 ಲೇನ್ ಗಳಲ್ಲಿ ಒಂದು ಲೇನ್ ನಲ್ಲಿ ಮಾತ್ರ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಆದರೆ ಆ ಲೇನ್‌ಗಳಲ್ಲಿ ಸಾಲು ಸಾಲು ವಾಹನಗಳು ನಿಂತು ಟ್ರಾಫಿಕ್ ಜಾಂ ಉಂಟಾಗುವ ಸಾಧ್ಯತೆ ಇದ್ದು, ಟೈಮಿಂಗ್ ಸರಿದೂಗಿಸಲು ಸಾಧ್ಯವಾಗದೇ ಬಸ್ ಚಾಲಕರಿಗೆ ಸಂಕಷ್ಟ ಎದುರಾಗಲಿದೆ.
ವಾಹನಗಳಿಗೆ ಪೇಟಿಎಂ ನಿಂದ ಪ್ರೀ-ಫಿಟ್ಟೆಡ್ ಫಾಸ್ಟ್ ಟ್ಯಾಗ್
ತಲಪಾಡಿ ಬಸ್ಸು ನಿಲ್ದಾಣಕ್ಕೆ ತೆರಳದೇ ಟೋಲ್ ಗೇಟ್ ಎದುರೇ ಬಸ್ಸುಗಳು ಪ್ರಯಾಣಿಕರನ್ನ ಹತ್ತಿಸಿಕೊಳ್ಳುತ್ತಿವೆ. ಪ್ರಯಾಣಿಕರು ಬಸ್ ನಿಲ್ದಾಣದಿಂದ 1 ಕಿ.ಮೀ ನಡೆದು ಬಸ್ಸು ಹಿಡಿಯಲು ಬರುತ್ತಿದ್ದು, ಬಸ್ಸು ಮಾಲಕರು ಮತ್ತು ಟೋಲ್ ಗೇಟ್ ನಿಂದ ಪ್ರಯಾಣಿಕರಿಗೆ ಸಂಕಷ್ಟ ಎದುರಾಗಿದೆ.