ಬೆಂಗಳೂರಲ್ಲಿ ಸ್ಮೋಕಿಂಗ್, ತಂಬಾಕು ಬ್ಯಾನ್ ?

By Kannadaprabha NewsFirst Published Dec 15, 2019, 11:23 AM IST
Highlights

ಬೆಂಗಳೂರಿನಲ್ಲಿ ಧೂಮಪಾನ ಹಾಗೂ ತಂಬಾಕು ಸೇವನೆ ಬಗ್ಗೆ ಜಾಗೃತಿ ಆರಂಭವಾಗಿದ್ದು, ಇದೀಗ ಬಿಬಿಎಂಪಿಯು ಇತ್ತ ಹೆಚ್ಚಿನ ಗಮನ ಹರಿಸಿದೆ.

ಬೆಂಗಳೂರು [ಡಿ.15]:  ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಬ್ಲೂಮ್‌ಬರ್ಗ್‌ ಸಹಯೋಗದಲ್ಲಿ ಬೆಂಗಳೂರನ್ನು ‘ಧೂಮಪಾನ ಮುಕ್ತ ನಗರ’ವಾಗಿಸುವುದಕ್ಕೆ ಬಿಬಿಎಂಪಿ ಮುಂದಾಗಿದೆ.

ಬೆಂಗಳೂರು ಸೇರಿದಂತೆ ವಿಶ್ವದ 70 ನಗರದಲ್ಲಿ ಧೂಮ ಮತ್ತು ತಂಬಾಕು ನಿಯಂತ್ರಣದ ಬಗ್ಗೆ ಬ್ಲೂಮ್‌ ಬರ್ಗ್‌ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಬೆಂಗಳೂರು ನಗರದ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಸೇವನೆ ಮಾಡುವವರಿಗೆ ಪೊಲೀಸ್‌ ಸಹಯೋಗದಲ್ಲಿ ದಂಡ ವಿಧಿಸುವುದು, ಧೂಮಪಾನ ನಿಷೇಧಿಸಿದೆ ಎಂಬ ನಾಮಫಲಕ ಅಳವಡಿಸುವುದು, ಬೀದಿ ನಾಟಕಗಳ ಮೂಲಕ ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ.

ಈಗಾಗಲೇ ನಗರದಲ್ಲಿ ತಂಬಾಕು ಮತ್ತು ಧೂಮಪಾನ ಸೇವನೆ ನಿಯಂತ್ರಣಕ್ಕೆ ಸಾಕಷ್ಟುಕ್ರಮ ಕೈಗೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಅವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌. ಅನಿಲ್‌ಕುಮಾರ್‌ ತಿಳಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇತ್ತೀಚೆಗೆ ಇಂಡೋನೇಷ್ಯಾದಲ್ಲಿ ನಡೆದ ತಂಬಾಕು ನಿಯಂತ್ರಣ ಮತ್ತು ಎನ್‌ಸಿಡಿಎಸ್‌ ನಿಯಂತ್ರಣ ಕುರಿತ ಏಷ್ಯಾ ಪೆಸಿಫಿಕ್‌ ನಗರಗಳ ಸಮಾವೇಶದಲ್ಲಿ ಬೆಂಗಳೂರು ನಗರಕ್ಕೆ 2019ರಲ್ಲಿ ಉತ್ತಮ ಸಾಧನೆ ನಗರಿ ಎಂಬ ಪ್ರಶಸ್ತಿ ಕೂಡ ಲಭಿಸಿದೆ. 2017-18ರಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಶೇ.21ರಷ್ಟು‘ಧೂಮಪಾನ ನಿಷೇಧಿಸಿದೆ’ ಎಂಬ ನಾಮಫಲಕಗಳನ್ನು ಅಳವಡಿಸಲಾಗಿತ್ತು. ಇದೀಗ ಶೇ.49.8ರಷ್ಟುಅಳವಡಿಸಲಾಗಿದೆ ಎಂದು ಆಯುಕ್ತ ಬಿ.ಎಚ್‌. ಅನಿಲ್‌ಕುಮಾರ್‌ ತಿಳಿಸಿದ್ದಾರೆ.

click me!