ಗದಗನ ಸಂಗೀತ ರಥೋತ್ಸವದಲ್ಲಿ ಮಿಂದೆದ್ದ ಭಕ್ತ ಸಾಗರ: 2 ವರ್ಷಗಳ ನಂತರ ನಡೆದ ಅದ್ಧೂರಿ ಜಾತ್ರೆ..!

By Girish Goudar  |  First Published Jun 18, 2022, 10:28 PM IST

*  ಕಲಾವಿದರ ಸಂಗಮಕ್ಕೆ ಸಾಕ್ಷಿಯಾದ ಅಜ್ಜನ ಸ್ವರ ಸಮಾರಾಧನೆ 
*  ಲಕ್ಷ ಜನರಿಗೆ ಅನ್ನ ಪ್ರಸಾದದ ವ್ಯವಸ್ಥೆ
*  ನಾಟಕ ಕಲಾವಿದರಿಗೂ ಅಜ್ಜನ ಸನ್ನಿಧಿಯೇ ಕಲಾ ಕಾಶಿ


ಗದಗ(ಜೂ.18):  ಸಂಗೀತದ ನಾಡು, ಕಲಾವಿದರ ಕಾಶಿ ಗದಗನ ವಿರೇಶ್ವರ ಪುಣ್ಯಾಶ್ರಮದ ಜಾತ್ರಾ ಮಹೋತ್ಸವ ನಿಮಿತ್ತ ಸಂಗೀತ ರಥೋತ್ಸವ ನಡೆದಿದೆ. 

ಜೂನ್ 14 ರಿಂದ 18 ವರೆಗೆ ನಾಲ್ಕು ದಿನ ಅದ್ಧೂರಿ ಜಾತ್ರೆ ನಡೆದಿದ್ದು, ಸಂಗೀತ ಜಾತ್ರೆಯಲ್ಲಿ ಈ ಬಾರಿ ನೂತನ ತೇರಿನಿಂದ ರಥೋತ್ಸವ ನೆರವೇರಿಸಿದ್ದು ವಿಶೇಷವಾಗಿತ್ತು. ಶ್ರೀ ಮಠಕ್ಕೆ ಅಡಿಪಾಯ ಹಾಕಿದ್ದ ಪಂಡಿತ ಪಂಚಾಕ್ಷರಿ ಗವಾಯಿಗಳ 78 ಪುಣ್ಯ ಸ್ಮರಣೆ ಹಾಗೂ ಅಂಧ ಅನಾಥರ ಪಾಲಿನ ಸೂರ್ಯ, ಪದ್ಮ ಭೂಷಣ ಪಂಡಿತ ಪುಟ್ಟರಾಜ ಕವಿ ಗವಾಯಿಗಳ 12 ವರ್ಷದ ಪುಣ್ಯಾರಾಧನೆ ನಿಮಿತ್ತ ಈ ಬಾರಿ ಜಾತ್ರೆ ನಡೆದಿದೆ. ಅಂಧರಿಗೆ ಸಂಗೀತದ ಮೂಲಕ ಉಭಯ ಗುರುಗಳು ಬದುಕು ಕಟ್ಟಿಕೊಟ್ಟವರು ಹೀಗಾಗಿ ಈ ಜಾತ್ರೆಯನ್ನ ಸಂಗೀತದ ಜಾತ್ರೆ, ಕಲಾವಿಧರ ಜಾತ್ರೆ ಅಂತಾನೇ ಕರೆಯಲಾಗುತ್ತೆ. 

Tap to resize

Latest Videos

ಗದಗ: ಬಾರ್ ಬೆಂಡಿಂಗ್ ಕೆಲಸ ಮಾಡೋ ಹುಡುಗ ಪಿಯುಸಿಯಲ್ಲಿ ರಾಜ್ಯಕ್ಕೆ 2ನೇ ರ್‍ಯಾಂಕ್..!

ಹೊಸ ತೇರು.. ಪಂಚಾಕ್ಷರಿ, ಪುಟ್ಟರಾಜ ಗವಾಯಿಗಳ ಗದ್ದುಗೆಗೆ ಹೂವಿನ ಅಲಂಕಾರ 

ಈ ಬಾರಿ ವಿಶೇಷ ಆಕರ್ಷಣೆ ಅಂದ್ರೆ ನೂತನವಾಗಿ ನಿರ್ಮಾಣವಾಗಿರೋ ತೇರು.. ಹುಬ್ಬಳ್ಳಿ ಮೂಲದ ಕಾಷ್ಠ ಶಿಲ್ಪಿ ಚೆನ್ನಪ್ಪ ಬಡಿಗೇರ್ ತಂಡ ಈ ರಥ ನಿರ್ಮಾಣ ಮಾಡಿದೆ. 12 ಫೀಟ್ ಅಗಲ, ಮೂವತ್ತು ಫೀಟ್ ಎತ್ತರದ ತೇರು ಜಾತ್ರೆಯ ಮುಖ್ಯ ಆಕರ್ಷಣೆ. ಪ್ರತಿ ಬಾರಿಯಂತೆ ಈ ಬಾರಿಯೂ ಪುಟ್ಟರಾಜರ ಹಾಗೂ ಪಂಚಾಕ್ಷರಿ ಗವಾಯಿಗಳ ಗದ್ದುಗೆಗೆ ಹೂವಿನ ಅಲಂಕಾರ ಮಾಡ್ಲಾಗಿದೆ. ಬೆಂಗಳೂರಿನಿಂದ ತರೆಸಿದ್ದ ಕಲರ್ ಕಲರ್ ಹೂವಿನಿಂದ ಅಜ್ಜನ ಸನ್ನಿಧಿಯ ಅಲಂಕಾರ ಮಾಡ್ಲಾಗಿತ್ತು..

ಸಂಗೀತ ಜಾತ್ರೆಯಲ್ಲಿ ವಿಶ್ವ ವಿಖ್ಯಾತ ಸಂಗೀತಗಾರರಿಂದ ಸಂಗೀತ ಸೇವೆ

ಪಂಚಾಕ್ಷರಿ ಗವಾಯಿಗಳು ಹಾಗೂ ಪಂಡಿತ ಪುಟ್ಟರಾಜ ಗವಾಯಿಗಳು ನಾಡಿನಾದ್ಯಂತ ದೊಡ್ಡ ಶಿಷ್ಯ ಬಳಗ ಹೊಂದಿದವರು. ಪದ್ಮಭೂಷಣ ಪಂಡಿತ ವೆಂಕಟೇಶ ಕುಮಾರ, ಪಂಡಿತ ಡಿ ಕುಮಾರ್ ದಾಸ್, ಪಂಡಿತ ರಘುನಾಥ್ ನಾಕೋಡ ಸೇರಿದಂತೆ ಘಟಾನುಘಟಿ ಸಂಗೀತ ದಿಗ್ಗಜರು ಗದಗಿನ ಪುಣ್ಯಾಶ್ರಮದ ಆಶ್ರಯದಲ್ಲಿ ಬೆಳೆದವರು.. ಡಾ. ರಾಜ್ ಕುಮಾರ್ ಅವರೂ ಪುಟ್ಟರಾಜರಿಂದ ಸಂಗೀತದ ಪಟ್ಟು ಕಲೆತರು.. ಜಾತ್ರೆಯ ನಿಮಿತ್ತ ಮಠದ ಭಕ್ತರು, ಶ್ರೀಗಳ ಶಿಷ್ಯರು ಮಠಕ್ಕೆ ಬಂದು ಸಂಗೀತ ಸೇವೆ ಸಲ್ಲಿಸುತ್ತಾರೆ.. ಹೀಗಾಗಿ ಶ್ರೀಮಠದ ಆವರಣದಲ್ಲಿ ಸಂಗೀತ ಝೇಂಕಾರ ಪ್ರತಿಕ್ಷಣ ಕಿವಿಯ ಮೇಲೆ ಬೀಳುತ್ತೆ.. ಸಂಗೀತ ತೇರಿನ ನಂತ್ರ ಅಹೋರಾತ್ರಿ ಸಂಗೀತ ಸೇವೆಯೂ ಜರಗುತ್ತೆ.. ಪುಣೆ, ಮಧ್ಯಪ್ರದೇಶ, ಗ್ವಾಲಿಯರ್ ಸೇರಿದಂತೆ ರಾಷ್ಟ್ರಮಟ್ಟದ ಹಿರಿಯ ಕಿರಿಯ ಕಲಾವಿದರು ಸಂಗೀತ ಸೇವೆಯಲ್ಲಿ ಪಾಲ್ಗೊಳ್ಳುತ್ತಾರೆ. ಲಕ್ಷ ಸಂಭಾವನೆ ಪಡೆಯುವ ಕಲಾವಿದರೂ ಅಜ್ಜನ ಸನ್ನಿಧಿಯಲ್ಲಿ ಉಚಿತ ಕಲಾ ಸೇವೆಸಲ್ಲಿಸುತ್ತಾರೆ.

ನಾಟಕ ಕಲಾವಿದರಿಗೂ ಅಜ್ಜನ ಸನ್ನಿಧಿಯೇ ಕಲಾ ಕಾಶಿ

ಪಂಡಿತ ಪುಟ್ಟರಾಜರು ಸಂಗೀತ ಕಲೆಯೊಂದಿಗೆ ತ್ರಿಭಾಷಾ ಸಾಹಿತಿಗಳಾಗಿದ್ದರು‌. ಶ್ರೀಗಳು ನೂರಾರು ನಾಟಕಗಳನ್ನ ರಚಿಸಿದ್ದಾರೆ.. ನಾಟಕ ಕಂಪನಿಗಳ ಮೂಲಕ ಕಲಾವಿದರಿಗೆ ದಾರಿ ತೋರಿದವರು, ಹೀಗಾಗಿ ನಾಡಿನ ವೃತ್ತಿ ರಂಗ ಭೂಮಿ ಕಲಾವಿದರು ಜಾತ್ರೆಗೆ ಆಗಮಿಸಿ ಕಲಾ ದೈವದ ಆರಾಧನೆ ಮಾಡುತ್ತಾರೆ.. ಕುಂಟಕೋಣ ಮೂಕ ಜಾಣ ನಾಟಕ ಖ್ಯಾತಿಯ ದಯಾನಂದ ಬೀಳಗಿ ಅವರೂ ಈ ಬಾರಿಯ ಜಾತ್ರೆಯಲ್ಲಿ ಭಾಗಿಯಾಗಿದ್ರು.. ಈ ವೇಳೆ ಏಷ್ಯ ನೆಟ್ ಸುವರ್ಣ ನ್ಯೂಸ್ ಜೊತೆ ಮಾತ್ನಾಡಿ, ಕಲಾವಿದರಿಗೆ ಅಜ್ಜನ ಸನ್ನಿಧಿ ಕಾಶಿ ಇದ್ದಂತೆ.. ಚಿಕ್ಕಂದಿನಿಂದಲೂ ಜಾತ್ರೆಗೆ ಬರುತ್ತಿದ್ದೇವೆ.. ವರ್ಷ ಪೂರ್ತಿ ರಂಗ ಸೇವೆಯಲ್ಲಿ ನಿರತರಾಗುವ ಕಲಾವಿದರು ಜಾತ್ರೆಯ ನಿಮಿತ್ತ ಒಂದೆಡೆ ಸೇರುತ್ತೇನೆ.. ವಿವಿಧ ಕಾರ್ಯಕ್ರಮ ಮಾಡುತ್ತೇವೆ‌. ಎರಡು ವರ್ಷದಿಂದ ಕಾರ್ಯಕ್ರಮಗಳು ಆಗಿಲ್ಲ.. ಬರುವ ವರ್ಷದಿಂದ ಕಾರ್ಯಕ್ರಮ ನಡೆಸುವ ವಿಶ್ವಾಸ ಇದೆ ಎಂದರು.

ಆಸ್ತಿ ಬರೆದು ಕೊಡುವಂತೆ ಬಿಜೆಪಿ ಶಾಸಕ ಧಮ್ಕಿ: ಅಳಲು ತೋಡಿಕೊಂಡ ದಂಪತಿ

ಲಕ್ಷ ಜನರಿಗೆ ಅನ್ನ ಪ್ರಸಾದದ ವ್ಯವಸ್ಥೆ

ಜಾತ್ರೆಗೆ ಬರುವ ಭಕ್ತರಿಗಾಗಿ ಶ್ರೀಮಠದ ವತಿಯಿಂದ ಅನ್ನ ಪ್ರಸಾದದ ವ್ಯವಸ್ಥೆ ಮಾಡ್ಲಾಗಿತ್ತು.‌ ಸುನಾರು 12 ಕ್ವಿಂಟಲ್ ಬೂಂಧಿ, 3,500 ಕೆಜಿ ಅಕ್ಕಿ ಬಳಸಿ ಅನ್ನ ಮಾಡ್ಲಾಗಿತ್ತು.. ಜೊತೆಗೆ ಸಾಂಬಾರ್ ಪಲ್ಯ ಮಾಡಿ ಭಕ್ತರಿಗೆ ಪ್ರಸಾದ ಬಡಿಸಲಾಯ್ತು. ವಿಶೇಷ ಅದ್ರೆ ಅಜ್ಜನ ಜಾತ್ರೆಗೆ ಅಂತಾ ಸಂಭಾವನೆ ಪಡೆಯದೇ ನೂರಾರು ಸ್ವಯಂ ಸೇವಕರು, ಬಾಣಸಿಗರು ಕೆಲಸ ಮಾಡಿದ್ದಾರೆ.. ಅದ್ರಲ್ಲೂ ಬೇಳವಣಕಿ, ಚಿಕ್ಕಮಣ್ಣುರ, ಹೊನ್ನಿಗನೊರು, ಗುಜಮಾಗಡಿ, ಸೇರಿದಂತೆ ಹುಯಿಲಗೋಳ ಗ್ರಾಮದ ನೂರಾರು ಜನರು ಅನ್ನಪ್ರಸಾದದ ಉಸ್ತುವಾರಿ ನೋಡಿಕೊಂಡರು.‌ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪ್ರಸಾದ ಊಟ ಮಾಡಿದ್ರು.

ಧರ್ಮ ಸಮ್ಮೇಳನ, ಕೀರ್ತನ ಮೇಳ,  ಸೇರಿದಂತೆ ಪ್ರವಚನ ಕಾರ್ಯಕ್ರಮಗಳು, ಆರೋಗ್ಯ ಶಿಬಿರ, ನಾಲ್ಕು ದಿನ ನಡೆದ್ವು.. ಅನ್ನ ಪ್ರಸಾದ ಹಾಗೂ ಸಂಗೀತದ ಜಾತ್ರೆ ಮೂಲಕ ಆಜ್ಜನ ಜಾತ್ರೆ ಅದ್ದೂರಿಯಾಗಿ ನಡೆದಿದೆ. 
 

click me!