
ಹಾವೇರಿ(ಜೂ.18): ಜಿಲ್ಲೆಯ ಶಿಗ್ಗಾಂವ್ ಪಟ್ಟಣದಲ್ಲಿ ವಿವಿಧ ಬೇಡಿಕೆ ಈಡೇರಿಸುವಂತೆ ಕರ್ನಾಟಕ ರಾಜ್ಯ ಕಾರ್ಮಿಕರ ಹಿತರಕ್ಷಣೆ ಮತ್ತು ಜಾಗೃತಿ ವೇದಿಕೆ ವತಿಯಿಂದ ಇಂದು(ಶನಿವಾರ) ಬೃಹತ್ ಪ್ರತಿಭಟನೆ ನಡೆಸಲಾಯಿತು.
ಶಿಗ್ಗಾವ್ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ಕಾರ್ಮಿಕರ ಹಿತರಕ್ಷಣೆ ಮತ್ತು ಜಾಗೃತಿ ವೇದಿಕೆ ವತಿಯಿಂದ ಪಟ್ಟಣದ ಸಂತೆ ಮೈದಾನದಿಂದ ತಹಶೀಲ್ದಾರ್ ಕಚೇರಿವರೆಗೆ ವಿವಿಧ ಬೇಡಿಕೆ ಇಡೆರಿಸುವಂತೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ಬಿಜೆಪಿ ಶಾಸಕ ನೆಹರು ಓಲೇಕಾರ ಕುಟುಂಬದ ದಬ್ಬಾಳಿಕೆಯಿಂದ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ರೈತರು
ಈ ವೇಳೆ ತಮ್ಮ ವಿವಿಧ ಬೇಡಿಕೆಯಾದ ಲೇಬರ ಕಾರ್ಡ ಪಡೆದವರಿಗೆ ಉಚಿತ ಮನೆಗಳನ್ನು ವಿತರಿಸುವುದು, ಉಚಿತವಾಗಿ 80 ಯುನಿಟ್ ವಿದ್ಯುತ್ತ ಒದಗಿಸುವಂತೆ ಹಾಗು ಉಚಿತ ಬಸ್ ಪಾಸ್, ಬಿದಿ ವ್ಯಾಪಾರಸ್ತರ ಮಕ್ಕಳಿಗೆ ವಿದ್ಯಾರ್ಥಿ ವೇತನ ಮದುವೆಯ ಸಹಾಯಧನ 1 ಲಕ್ಷಕ್ಕೆ ಏರಿಸುವಂತೆ, ಶಸ್ತ್ರ ಚಿಕಿತ್ಸೆಯ ಸಹಾಯಧನ 5 ಲಕ್ಷಕ್ಕೆ ಏರಿಸುವಂತೆ, ಮರಣದ ಸಹಾಯಧನ 5 ಲಕ್ಷ ಕ್ಕೆ ಏರಿಸುವಂತೆ ಮತ್ತು ಎಲ್ಲಾ ಯೋಜನೆಗಳು ಸಕಾಲದಲ್ಲಿ ದೊರೆಯಬೇಕು ಏಜೆಂಟರು ಹಾವಳಿ ತಪ್ಪಿಸುವಂತೆ ಹಾಗೂ ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿ ತಹಶೀಲ್ದಾರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಮುಖಂಡರು ಸೇರಿದಂತೆ ಸಾವಿರಾರು ಕಾರ್ಮಿಕರು ಭಾಗಿಯಾಗಿದ್ದರು.