ಈಶ್ವರ್ ಖಂಡ್ರೆಗೆ ಅವಮಾನಿಸಿದ ಆರೋಪ; ಸ್ಪೀಕರ್ ಕಾಗೇರಿ ವಜಾಕ್ಕೆ ವೀರಶೈವ ಮಹಾಸಭಾ ಆಗ್ರಹ

By Kannadaprabha News  |  First Published Feb 18, 2023, 2:11 PM IST

ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಹಾಗೂ ಕ್ಷೇತ್ರದ ಮತದಾರರನ್ನು ಅವಮಾನಿಸಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ವಿಧಾನಸಭಾಧ್ಯಕ್ಷ ಹುದ್ದೆಯಿಂದ ವಜಾಗೊಳಿಸಬೇಕೆಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಯುವ ಘಟಕ ಆಗ್ರಹಿಸಿದೆ.


ಬೀದರ್‌ (ಫೆ.18) : ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಹಾಗೂ ಕ್ಷೇತ್ರದ ಮತದಾರರನ್ನು ಅವಮಾನಿಸಿರುವ ವಿಶ್ವೇಶ್ವರ ಹೆಗಡೆ ಕಾಗೇರಿ(Vishweshwar Hegade Kageri) ಅವರನ್ನು ವಿಧಾನಸಭಾಧ್ಯಕ್ಷ ಹುದ್ದೆಯಿಂದ ವಜಾಗೊಳಿಸಬೇಕೆಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ(Veerashaiva Lingayat Mahasabha) ಜಿಲ್ಲಾ ಯುವ ಘಟಕ ಆಗ್ರಹಿಸಿದೆ.

ಯುವ ಘಟಕದ ಪದಾಧಿ​ಕಾರಿಗಳು ನಗರದಲ್ಲಿ ನಿಯೋಗದಲ್ಲಿ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾ​ಡಳಿತಕ್ಕೆ ಸಲ್ಲಿಸಿ, ವಿಧಾನಸಭಾಧ್ಯಕ್ಷರ ಹುದ್ದೆ ಸಾಂವಿಧಾನಿಕವಾದದ್ದು. ಆದರೆ, ಕಾಗೇರಿ ಪಕ್ಷಪಾತದಿಂದ ವರ್ತಿಸಿದ್ದಾರೆ. ಪ್ರತಿ ಪಕ್ಷದ ಸದಸ್ಯರನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ. ಶಾಸಕ ಈಶ್ವರ ಖಂಡ್ರೆ ಜತೆ ಅನುಚಿತವಾಗಿ ನಡೆದುಕೊಂಡಿದ್ದಾರೆ. ಕ್ಷೇತ್ರದ ಜನರಿಗೂ ಅವಮಾನ ಮಾಡಿದ್ದಾರೆ. ಅವರ ವರ್ತನೆಯನ್ನು ತೀವ್ರವಾಗಿ ಖಂಡಿಸಲಾಗುತ್ತದೆ ಎಂದು ಹೇಳಿದರು.

Latest Videos

undefined

 

ಸದನದಲ್ಲಿ ಈಶ್ವರ್‌ ಖಂಡ್ರೆ-ಸ್ಪೀಕರ್‌ ಕಾಗೇರಿ ವಾಕ್ಸಮರ, ಕೋಲಾಹಲ

ಚುನಾವಣೆ(Election) ವೇಳೆ ಈಶ್ವರ ಖಂಡ್ರೆ ಘನತೆಗೆ ಚ್ಯುತಿ ತರಲೆಂದೇ ವಿಧಾನಸಭಾಧ್ಯಕ್ಷರು(Assembly Speaker) ಮಾತುಗಳನ್ನು ಆಡಿದ್ದಾರೆ. ಕೂಡಲೇ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು. ಇಲ್ಲವಾದಲ್ಲಿ ಹೋರಾಟ ನಡೆಸಲಾಗುತ್ತದೆ ಎಂದು ತಿಳಿಸಿದರು.

ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಬಾಬುರಾವ್‌(Babu rao) ತುಂಬಾ, ರಾಜ್ಯ ಘಟಕದ ಕಾರ್ಯದರ್ಶಿ ನಾಗಶೆಟ್ಟಿ, ಶಿವಶೆಟ್ಟಿ, ಜಿಲ್ಲಾಧ್ಯಕ್ಷ ವೈಜಿನಾಥ ಕಮಠಾಣೆ, ಜಿಲ್ಲಾ ಯುವ ಅಧ್ಯಕ್ಷ ಸಂಗಮೇಶ ಮೂಲಗೆ, ಮುಖಂಡರಾದ ಗಣೇಶ ಪಾಟೀಲ ಜ್ಯಾಂತಿ, ಹಣಮಂತ ಮಲ್ಕಾಪುರ, ಧನರಾಜ ಹಂಗರಗಿ, ಧನರಾಜ ಪಾಟೀಲ, ಪ್ರಕಾಶ ಪಾಟೀಲ, ಸಂಜು ಯಾದವ್‌, ರಾಮಶೆಟ್ಟಿಹುಣಜೆ, ಗೋಪಾಲ್‌, ಶಿವರಾಜ ವೀರಣ್ಣೂರ, ದೊಡ್ಡಿ, ದಯಾನಂದ ಜಾಧವ್‌, ಅನೀಲ ಪಾಟೀಲ್‌, ದತ್ತಾತ್ರಿ ಬಿರಾದಾರ, ಸಂಜುಕುಮಾರ ಕುರನಳ್ಳಿಕರ್‌, ಅಮರ ಹಜನಾಳೆ ಮೊದಲಾದವರು ಇದ್ದರು.

ನಿಮ್ಮಂಥವರನ್ನು ಆಯ್ಕೆ ಮಾಡುವುದೇ ಅಗೌರವ: ಈಶ್ವರ ಖಂಡ್ರೆಗೆ ಸ್ಪೀಕರ್‌ ವಾರ್ನಿಂಗ್‌

click me!