ವೀರಶೈವ ಲಿಂಗಾಯತರು ಹಿಂದೂ ಧರ್ಮದ ಅವಿಭಾಜ್ಯ ಅಂಗ: ಶ್ರೀಶೈಲ ಶ್ರೀಗಳು

By Kannadaprabha News  |  First Published Nov 19, 2022, 9:30 PM IST

ವೀರಶೈವರು, ಲಿಂಗಾಯತರು ಬೇರೆ ಬೇರೆ ಎನ್ನುವುದು ಸರಿಯಲ್ಲ: ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು 


ರಾಯಚೂರು(ನ.19): ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮವಲ್ಲ ಅದು ಹಿಂದೂ ಧರ್ಮದ ಅವಿಭಾಜ್ಯ ಅಂಗವಾಗಿದೆ ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಅಭಿಪ್ರಾಯ ವ್ಯಕ್ತಪಡಿಸಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ ಧರ್ಮದ ಸಾಕಷ್ಟು ಅಂಶಗಳನ್ನು ವೀರಶೈವ ಲಿಂಗಾಯತರು ಅನುಸರಿಲಾಗುತ್ತಿದೆ. ಹಿಂದಿನಿಂದಲೂ ರುದ್ರಾಕ್ಷಿ, ವಿಭೂತಿ ಧರಿಸ್ತೇವೆ. ಶಿವನ ಆರಾಧನೆ ಸೇರಿದಂತೆ ಬಹುತೇಕ ಆಚರಣೆಗಳನ್ನು ಮಾಡುತ್ತಾ ಬರಲಾಗುತ್ತಿದೆ. ವೀರಶೈವ ಲಿಂಗಾಯತರು ಒಂದು ಧರ್ಮ ಎಂದು ಕರೆಯುತ್ತಿದ್ದರು. ಅದು ಹಿಂದೂ ಧರ್ಮದಿಂದ ಪ್ರತ್ಯೇಕಗೊಳ್ಳುವುದಿಲ್ಲ. ಇದನ್ನು ನಾವೆಲ್ಲರೂ ಮನಗಾಣಬೇಕಾಗಿದೆ ಎಂದರು.

ವೀರಶೈವರು ಮತ್ತು ಲಿಂಗಾಯತರು ಬೇರೆ ಬೇರೆ ಎನ್ನುವುದು ಸರಿಯಲ್ಲ. ಆರ್ಥಿಕ ಸವಲತ್ತಿಗಾಗಿ ಆಚರಣೆಗೆ ಬಂದಿದೆ. ಕೆಲವರು ಕಂದಕ ಸೃಷ್ಠಿಸುವುದಕ್ಕಾಗಿ ಪಂಚಪೀಠ ಹಾಗೂ ಬಸವತತ್ವ ಎಂದು ಬೇರೆಯಾಗಿ ನೋಡುತ್ತಿದ್ದಾರೆ. ನಮ್ಮಲ್ಲಿ ಅಂತಹ ಭೇದ ಭಾವವಿಲ್ಲ. ಯಡಿಯೂರಿನಿಂದ ಶ್ರೀಶೈಲದವರೆಗೂ ನಾವು ಸಂಕಲ್ಪಿಸಿರುವ ಪಾದಯಾತ್ರೆಯಲ್ಲಿ ವಿರಕ್ತ ಮಠದ ಸ್ವಾಮಿಗಳು ಸಹ ಭಾಗಿಯಾಗಿದ್ದಾರೆ. ವಿರಕ್ತ ಮಠ ಹಾಗೂ ಪಂಚಪೀಠಗಳು ಸಮಾಜದ ಎರಡೂ ಕಣ್ಣುಗಳಿದ್ದಂತೆ. ನೋಡಲು ಎರಡೂ ಬೇರೆ ಬೇರೆಯಾಗಿದ್ದರು ಸಹ ಅದರ ದೃಷ್ಠಿಕೋನ ಒಂದೇ ಆಗಿದೆ ಎಂದು ಸ್ಪಷ್ಟಪಡಿಸಿದರು.

Latest Videos

undefined

ರಾಯಚೂರು ಜಿಲ್ಲೆಯ ವಿವಿಧ ದೇವಸ್ಥಾನಗಳಿಗೆ ಸುಧಾಮೂರ್ತಿ ಭೇಟಿ

ಸಮಾಜದ ಸಮಗ್ರ ಅಭಿವೃದ್ಧಿಗಾಗಿ ಕೆಲವರು ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದು, ತಮ್ಮ ಸವಲತ್ತುಗಳನ್ನು ಕೇಳುತ್ತಿದ್ದಾರೆ. ಇದು ಒಂದೇ ಸಮುದಾಯಕ್ಕೆ ಅಂತಾ ಅಲ್ಲ ಎಲ್ಲ ಸಮುದಾಯಗಳು ಸಹ ಸವಲತ್ತುಗಳನ್ನು ಪಡೆಯಬೇಕಾಗಿದ್ದು, ಕಾನೂನು ಬದ್ಧವಾಗಿ, ನ್ಯಾಯೋಚಿತವಾಗಿರುವ ಬೇಡಿಕೆಗಳನ್ನು ಈಡೇರಿಸುವ ಕೆಲಸವನ್ನು ಸರ್ಕಾರಗಳು ಮಾಡಬೇಕು ಎಂದರು.

ದೇಶದ ಎಲ್ಲ ವೀರಶೈವ-ಲಿಂಗಾಯತ ಸಮುದಾಯಗಳನ್ನು ಒಬಿಸಿಗೆ ಸೇರಿಸಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಸಮಾಜವು ಆಗ್ರಹಿಸಿದ್ದು ಆ ಕೆಲಸವನ್ನು ಸರ್ಕಾರವು ಮಾಡಿಕೊಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸದರಾದ ರಾಜಾ ಅಮರೇಶ್ವರ ನಾಯಕ, ಶಾಸಕರಾದ ಎ.ಎಸ್‌.ಪಾಟೀಲ್‌ ನಡಹಳ್ಳಿ, ಡಾ.ಶಿವರಾಜ ಪಾಟೀಲ್‌, ಬಸನಗೌಡ ದದ್ದಲ್‌, ಎನ್‌.ಎಸ್‌.ಬೋಸರಾಜು ಸೇರಿದಂತೆ ವಿವಿಧ ಮಠಗಳ ಸ್ವಾಮೀಜಿಗಳು, ಮುಖಂಡರು ಇದ್ದರು.
 

click me!