ಮುದಗಲ್‌: ಮೀನು ಹಿಡಿಯಲು ಹೋದ ತಂದೆ, ಮಗು ದಾರುಣ ಸಾವು

Published : Nov 19, 2022, 09:00 PM IST
ಮುದಗಲ್‌: ಮೀನು ಹಿಡಿಯಲು ಹೋದ ತಂದೆ, ಮಗು ದಾರುಣ ಸಾವು

ಸಾರಾಂಶ

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಲ್ಕಾವಟಗಿ ಗ್ರಾಮದ ಬಳಿಯಿರುವ ನಾರಾಯಣಪೂರ ಡ್ಯಾಂ ಹಿನ್ನೀರಿಗೆ ಪಲಗಲದಿನ್ನಿ ಗ್ರಾಮದ ಹತ್ತಿರ ನಡೆದ ಘಟನೆ 

ಮುದಗಲ್‌(ನ.19): ಲಿಂಗಸುಗೂರು ತಾಲೂಕಿನ ಹಾಗೂ ಮುದಗಲ್‌ ಕಂದಾಯ ಹೋಬಳಿಯ ಗಡಿ ಭಾಗವಾದ ಹಲ್ಕಾವಟಗಿ ಗ್ರಾಮದ ಬಳಿಯಿರುವ ನಾರಾಯಣಪೂರ ಡ್ಯಾಂ ಹಿನ್ನೀರಿಗೆ ಪಲಗಲದಿನ್ನಿ ಗ್ರಾಮದ ಹತ್ತಿರ ಮೀನುಗಾರ ಮತ್ತು ಮಗು ನೀರು ಪಾಲಾದ ಘಟನೆ ಶುಕ್ರವಾರ ಜರುಗಿದೆ.

ಸಮೀಪದ ಹಲ್ಕಾವಟಗಿ ಗ್ರಾಮದ ಬಳಿಯಿರುವ ಕೃಷ್ಣಾ ನದಿಯ ನಾರಾಯಣಪೂರ ಡ್ಯಾಂ ಹಿನ್ನೀರಿನಲ್ಲಿ ಮೀನುಗಾರ ರಮೇಶ ಮರಿಯಪ್ಪ ಎಂಬಾತ ಕುಟುಂಬ ಸಮೇತ ತನ್ನ ಉದ್ಯೋಗವಾದ ಮೀನು ಹಿಡಿಯುವ ಕಾರ‍್ಯಕ್ಕೆ ಶೆಡ್‌ನಲ್ಲಿ ವಾಸವಾಗಿದ್ದ. ಗುರುವಾರ ಸಂಜೆ 5 ವರ್ಷದ ಮಗು ಲಕ್ಕಪ್ಪ ರಮೇಶ (5) ನೀರಿನಲ್ಲಿ ಹೋಗಿರುವದನ್ನು ಕಂಡ ರಮೇಶ ಮರಿಯಪ್ಪ (35) ತಾನೂ ಕೂಡ ನೀರಿನಲ್ಲಿ ಮಗುವನ್ನು ಕರೆತರಲು ಹೋಗಿರುವ ಸಂದರ್ಭದಲ್ಲಿ ತಂದೆ, ಮಗು ಇಬ್ಬರು ನೀರು ಪಾಲಾಗಿದ್ದಾರೆ. ಮಗುವಿನ ಮೃತದೇಹ ಗುರುವಾರ ಸಂಜೆಯೇ ಪತ್ತೆಯಾಗಿದ್ದರೆ, ತಂದೆಯ ಮೃತದೇಹ ಶುಕ್ರವಾರ ಮಧ್ಯಾಹ್ನ ಪತ್ತೆಯಾಗಿದೆ. ಅಗ್ನಿ ಶಾಮಕ ಸಿಬ್ಬಂದಿ ವರ್ಗ ಬೆಳಗ್ಗೆ ತೆರಳಿ ತಂದೆಯ ಮೃತದೇಹ ಪತ್ತೆ ಹಚ್ಚಿದ್ದಾರೆ.

ಸಿಂಧನೂರು: ನೇಣು ಬಿಗಿದ ಸ್ಥಿತಿಯಲ್ಲಿ ಗೊರೇಬಾಳ ಗ್ರಾಪಂ ಮಾಜಿ ಸದಸ್ಯನ ಶವ ಪತ್ತೆ

ಘಟನಾ ಸ್ಥಳಕ್ಕೆ ಉಪ ತಹಸೀಲ್ದಾರ್‌ ತುಳಜಾ ರಾಮಸಿಂಗ್‌, ಕಂದಾಯ ನಿರೀಕ್ಷಕ ಪಟ್ಟಣ ಶೆಟ್ಟಿ, ಅಪರಾಧ ವಿಭಾಗದ ಪಿಎಸ್‌ಐ ಛತ್ರಪ್ಪ ರಾಠೋಡ, ಅಗ್ನಿ ಶಾಮಕ ಠಾಣೆ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಇದ್ದರು.
 

PREV
Read more Articles on
click me!

Recommended Stories

ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್