ಸುರಪುರ: ನನ್ನ ಕ್ಷೇತ್ರದ ಅಭಿವೃದ್ಧಿಗೆ ಸಿಎಂ ಸಾವಿರಾರು ಕೋಟಿ ಅನುದಾನ ನೀಡಿದ್ದಾರೆ, ರಾಜೂಗೌಡ

By Kannadaprabha News  |  First Published Nov 19, 2022, 8:30 PM IST

ಬಿಜೆಪಿಯ ಸಾಧನೆಯೇ ಪಕ್ಷಕ್ಕೆ ವರದಾನವಾಗಲಿದೆ. ಸುರಪುರ ಮತಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನವನ್ನು ಕಾರ್ಯಕರ್ತರು ರಾಜ್ಯದ ಮುಖ್ಯಮಂತ್ರಿಯವರು ನೀಡಿದ್ದಾರೆ ಎಂದ ರಾಜೂಗೌಡ 


ಹುಣಸಗಿ(ನ.19): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನನ್ನ ಕ್ಷೇತ್ರದ ಬಗ್ಗೆ ಅಪಾರ ಅಭಿಮಾನ ಇಟ್ಟು ನೀರಾವರಿ, ಕುಡಿಯುವ ನೀರು ಸೇರಿ ಸಾವಿರಾರು ಕೋಟಿ ಅನುದಾನ ಕೊಟ್ಟು ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ ಎಂದು ಶಾಸಕ ರಾಜೂಗೌಡ ಹೇಳಿದರು. ತಾಲೂಕಿನ ವಜ್ಜಲ್‌ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ತೊರೆದ ಕಾರ್ಯಕರ್ತರನ್ನು ಬಿಜೆಪಿ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಅವರು, ಬಿಜೆಪಿಯ ಸಾಧನೆಯೇ ಪಕ್ಷಕ್ಕೆ ವರದಾನವಾಗಲಿದೆ. ಸುರಪುರ ಮತಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನವನ್ನು ಕಾರ್ಯಕರ್ತರು ರಾಜ್ಯದ ಮುಖ್ಯಮಂತ್ರಿಯವರು ನೀಡಿದ್ದಾರೆ ಎಂದರು.

ಮತಕ್ಷೇತ್ರದ ಪ್ರತಿಹಳ್ಳಿಯಲ್ಲಿ ಕುಡಿಯುವ ನೀರು, ವಿದ್ಯುತ್‌, ರಸ್ತೆ, ಚರಂಡಿ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಇದರಿಂದ ಬಿಜೆಪಿಯ ಸಾಧನೆಗಳನ್ನು ನೋಡಿ ಸಾಕಷ್ಟುಪ್ರಮಾಣದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಬಿಜೆಪಿ ಸೇರ್ಪಡೆ ಆಗುತ್ತಿರುವುದು ಪಕ್ಷಕ್ಕೆ ಬಲ ಬಂದಿದೆ ಎಂದರು.

Tap to resize

Latest Videos

undefined

ASSEMBLY ELECTION:'ಕೈ' ಹಿಡಿಯಲಿದ್ದಾರಾ ಮಾಜಿ ಸಚಿವ ಮಾಲಕರೆಡ್ಡಿ? ಕುತೂಹಲ ಮೂಡಿಸಿದ ಡಿ.ಕೆ.ಶಿವಕುಮಾರ್ ಭೇಟಿ

ಬೆಂಗಳೂರಿನ ಡಿಎಸ್‌ ಮ್ಯಾಕ್ಸ್‌ ನಿರ್ದೇಶಕ ಡಾ. ಎಸ್‌.ಪಿ. ದಯಾನಂದ ಮಾತನಾಡಿ, ಈ ಭಾಗದ ಅಭಿವೃದ್ಧಿಗಾಗಿ ಶಾಸಕ ರಾಜೂಗೌಡ ಅವರು ಸಾಕಷ್ಟುಅಭಿವೃದ್ಧಿ ಕೆಲಸ ಮಾಡಿದ್ದಾರೆ. ಸಕ್ಕರೆ ಕಾರ್ಖಾನೆ ಹಾಗೂ ಗಾಮೆಂರ್‍ಟ್ಸ್‌ ಆರಂಭಿಸುವ ಗುರಿ ಇಟ್ಟುಕೊಂಡು ನಿರುದ್ಯೋಗ ಹೋಗಲಾಡಿಸಲು ಶ್ರಮ ಹಾಕುತ್ತಿದ್ದಾರೆ. ಹೀಗಾಗಿ ಮತ್ತೊಮ್ಮೆ ಬಿಜೆಪಿಗೆ ಅವಕಾಶ ಕಲ್ಪಿಸಿದೆ ಎಂದರು.

ಬಸವರಾಜಸ್ವಾಮಿ ಸ್ಥಾವರಮಠ, ಸುರೇಶ ಸಜ್ಜನ್‌, ಹೆಚ್‌.ಸಿ. ಪಾಟೀಲ್‌, ಗ್ರಾಪಂ ಅಧ್ಯಕ್ಷ ಶಿವನಗೌಡ ಪಾಟೀಲ್‌, ರಾಮನಗೌಡ ಪಾಟೀಲ್‌, ಸಂಜೀವರಡ್ಡಿ ಪಾಟೀಲ್‌, ಬಸವರಾಜ ಮಲಗಲದಿನ್ನಿ, ಭೀಮರಾಯ ದೊಡ್ಮನಿ, ಸಂಗಣ್ಣ ವೈಲಿ, ಗದ್ದೆಪ್ಪ ಪೂಜಾರಿ, ಸೋಮಣ್ಣ ಮೇಟಿ, ಪರಮಾನಂದ ಚೆಟ್ಟಿ, ಮಲ್ಲು ದಂಡಿನ್‌, ರಂಗನಗೌಡ ದೇವಿಕೇರಿ, ಅಮರಣ್ಣ ದೇಸಾಯಿ, ಸಂಗಮೇಶ ದೊರೆ, ಮಲ್ಲಿಕಾರ್ಜುನ ದೊಡ್ಮನಿ, ಕರೆಪ್ಪ ಪೂಜಾರಿ ಸೇರಿದಂತೆ ಇತರರಿದ್ದರು.
 

click me!