ಉಡುಪಿ: ದಟ್ಟಆಲದ ಮರದ ಕೆಳಗೆ ಗಜಗಾತ್ರದ ವೀರಗಲ್ಲು!

By Ravi JanekalFirst Published Mar 9, 2023, 11:39 AM IST
Highlights

ಪಡುಬಿದ್ರೆಯ ನಂದಿಕೂರುವಿನಿಂದ ಮುಂದೆ ಸಾಗಿ  ಕೆಲ್ಲಾರು ಪಲಿಮಾರುವಿನ ಅಸ್ತಪಡ್ವೆ ಎಂಬಲ್ಲಿ ಆಟದ ಮೈದಾನದ ಬಳಿ ಆಲದ ಮರದ ಕೆಳಗಡೆ ಎರಡು ಬೃಹತ್ ಗಾತ್ರದ ವೀರಗಲ್ಲು ಕಾಣಸಿಕ್ಕಿದೆ. 

ಉಡುಪಿ (ಮಾ.9) : ಪಡುಬಿದ್ರೆಯ ನಂದಿಕೂರುವಿನಿಂದ ಮುಂದೆ ಸಾಗಿ  ಕೆಲ್ಲಾರು ಪಲಿಮಾರು(Palimaru)ವಿನ ಅಸ್ತಪಡ್ವೆ (Ashtapadi )ಎಂಬಲ್ಲಿ ಆಟದ ಮೈದಾನದ ಬಳಿ ಆಲದ ಮರದ ಕೆಳಗಡೆ ಎರಡು ಬೃಹತ್ ಗಾತ್ರದ ವೀರಗಲ್ಲು ಕಾಣಸಿಕ್ಕಿದೆ. 

ಸುಮಾರು  ಏಳು ಅಡಿ ಎತ್ತರದ ಒಂದು ವೀರಗಲ್ಲು(Veeragallu) ಮತ್ತೊಂದು ಸುಮಾರು  ಎಂಟು ಅಡಿಯಷ್ಟು ಎತ್ತರ ಇದೆ.ಎರಡು ಫೀಟು ಆಗಲ ಒಬ್ಬ ಪುರುಷ ಹಾಗೂ ಒಬ್ಬ ಮಹಿಳೆ ಎಂಬಂತೆ. ಉಬ್ಬಿಕೊಂಡ ಚಿತ್ರ  ಕಾಣಸಿಗುತ್ತದೆ. 

Latest Videos

ತಲೆಭಾಗದಲ್ಲಿ ಸೂರ್ಯ ಚಂದ್ರ, ಕತ್ತಿ ಗುರಾಣಿ. ಸೂಡಿ ಹಾಕಿದಂತೆ ತಲೆಯ ಭಾಗವಿದೆ. ವೀರರು ಬಳಸುವಂತಹ ಮೈ ಹೊದಿಕೆಯ ಬಟ್ಟೆ ಹೊಂದಿರುತ್ತದೆ. ಬಲಕಾಲು ಮುಂದೆ ನಿಂತು. ಗುರಾಣಿ ಕತ್ತಿ ಹಿಡಿದು ‌ ಯುದ್ಧಕ್ಕೆ ಆಹ್ವಾನಿಸಿದಂತಿದೆ. 

ಮಹಿಳಾ ದಿನಾಚರಣೆ ಕಾರ್ಕಳದಲ್ಲೊಂದು ವಿಶೇಷ, ಅಮ್ಮ ಅತ್ತೆ ಹೆಂಡತಿಗೆ ಸನ್ಮಾನ!

ಪುರುಷನ ಚಿತ್ರ ಇರುವ ಶಾಸನ ದಲ್ಲಿ ಬಾಲದಂತಿದೆ. ಈ ಭಾಗದ ಜನರು ಇದನ್ನು ಕೋಟಿ ಚೆನ್ನಯ್ಯರು ಅನ್ನುತ್ತಾರೆ. ಅನತಿ ದೂರದಲ್ಲಿ 
ದೈವರಾಜ ಕೊಡ್ದಬ್ಬುವಿನ ಸನ್ನಿಧಾನವಿದೆ.  

ಪ್ರಮುಖ ರಸ್ತೆಯಲ್ಲಿ ಕೋಟಿ ಚೆನ್ನಯರ ಗರಡಿಯೂ ಇದೆ. ಈ ಶಾಸನಗಳು ಸರಕಾರಿ ಜಾಗದಲ್ಲಿ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ, ಗೋಳಿಮರದ ಕೆಳಗಡೆ ನಿರ್ಜನ ಪ್ರದೇಶವಾದ್ದರಿಂದ ಯಾರೂ ಇದರ ಕಡೆಗೆಹೋಗುವುದಿಲ್ಲ .

ಈಗಾಗಲೇ ಬೇಲಿ ಹಾಕಿದ್ದು. ಸ್ವಚ್ಛತೆ ಕಾಣುವುದಿಲ್ಲ. ಉಡುಪಿ ನಿಟ್ಟೂರಿನ ನಿವಾಸಿ ರಾಜೇಶ್ ಅವರಮಾಹಿತಿ ಮೇರೆಗೆ ಗಣೇಶ್ ರಾಜ್ ಸರಳೇಬೆಟ್ಟು ಹಾಗೂ ಜಯಶೆಟ್ಟಿ ಬನ್ನಂಜೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು, ಈ ಸಂದರ್ಭದಲ್ಲಿ ಸ್ಥಳೀಯರಾದ ಕೇಶವ ಶೆಟ್ಟಿ ಭಾಸ್ಕರ, ಪ್ರಕಾಶ, ರಮೇಶ,  ರಾಘವೇಂದ್ರ ಸತೀಶ್  ಮುಖಾರಿ ವಿಠಲ ಮೇಸ್ತ್ರಿ ಜೊತೆಗಿದ್ದು ಮಾಹಿತಿ ನೀಡಿ ಸಹಕರಿಸಿದರು.

ಕೃಷ್ಣಮಠಕ್ಕೆ ಭೂಮಿ ಕೊಟ್ಟವರು ಮುಸ್ಲಿಂ ಅರಸರು, ಮಿಥುನ್ ರೈ ಹೇಳಿಕೆಗೆ ಸಿಡಿದೆದ್ದ ಕರಾವಳಿ

click me!