Vijayapura: ವಿಚಿತ್ರವೋ, ವಿಸ್ಮಯವೋ ಪಿಯು ವಿದ್ಯಾರ್ಥಿನಿಯ ಮೂರು ಹಾಲ್ ಟಿಕೆಟ್ ತನ್ನಿಂದ ತಾನೇ ನಾಶ!

By Govindaraj S  |  First Published Mar 9, 2023, 11:12 AM IST

ಇದು ವಿಚಿತ್ರವೋ, ವಿಸ್ಮಯವೋ, ಅಥವಾ ಯಾರದ್ದೋ ಕುತಂತ್ರವೋ ಗೊತ್ತಿಲ್ಲ. ಆದ್ರೆ ವಿಜಯಪುರ ಜಿಲ್ಲೆಯ ಗೊಳಸಂಗಿ ಗ್ರಾಮದಲ್ಲಿ ಯಾರು ನಂಬಲಸಾಧ್ಯ ಘಟನೆಯೊಂದು ನಡೆದು ಹೋಗಿದೆ. 


ಷಡಕ್ಷರಿ‌ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ಮಾ.09): ಇದು ವಿಚಿತ್ರವೋ, ವಿಸ್ಮಯವೋ, ಅಥವಾ ಯಾರದ್ದೋ ಕುತಂತ್ರವೋ ಗೊತ್ತಿಲ್ಲ. ಆದ್ರೆ ವಿಜಯಪುರ ಜಿಲ್ಲೆಯ ಗೊಳಸಂಗಿ ಗ್ರಾಮದಲ್ಲಿ ಯಾರು ನಂಬಲಸಾಧ್ಯ ಘಟನೆಯೊಂದು ನಡೆದು ಹೋಗಿದೆ. ಈ ಘಟನೆಯಿಂದ ಗೊಳಸಂಗಿ ಗ್ರಾಮಸ್ಥರು ಅಚ್ಚರಿ ಹಾಗೂ ಗೊಂದಲದಲ್ಲಿದ್ರೆ, ಇತ್ತ ಪಿಯು ವಿದ್ಯಾರ್ಥಿ ಮುಂದಿನ ಭವಿಷ್ಯ ಹೇಗೆ ಎಂದು ನೆನೆದು ಕಣ್ಣೀರು ಹಾಕ್ತಿದ್ದಾರೆ. ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ವಿದ್ಯಾರ್ಥಿನಿ ಕಾಲೇಜಿನಿಂದ 3 ಹಾಲ್ ಟಿಕೆಟ್‌ಗಳು ತನ್ನಷ್ಟಕ್ಕೆ ತಾನೇ ಸುಟ್ಟು, ಹರಿದು‌ಹೋಗಿ ಹಾನಿಯಾಗಿವೆಯಂತೆ. ಇದರಿಂದ ಗೊಳಸಂಗಿ ಗ್ರಾಮದಲ್ಲಿ ಒಂದೆಡೆ ಆತಂಕ, ಮತ್ತೊಂದೆಡೆ ಅಚ್ಚರಿ ಆವರಿಸಿದೆ. ಇದು ನಿಜಕ್ಕು ನಡೆದಿರೋದು ವಿಸ್ಮಯವೋ, ಅಥವಾ ಮತ್ಯಾರದ್ದೋ ಕುತಂತ್ರವೋ ಎನ್ನುವ ಗೊಂದಲಕ್ಕೆ ಬಿದ್ದಿದ್ದಾರೆ ಇಲ್ಲಿನ ಗ್ರಾಮಸ್ಥರು.

Latest Videos

undefined

ತನ್ನಷ್ಟಕ್ಕೆ ತಾನೇ ಸುಟ್ಟು ಭಸ್ಮವಾದ‌‌ ದ್ವಿತೀಯ ಪಿಯು ಹಾಲ್ ಟಿಕೆಟ್?: ಇಂದಿನಿಂದ ದ್ವಿತೀಯ ಪಿಯುಸಿ ಆರಂಭವಾಗಿದ್ದು, ಪರೀಕ್ಷೆಗೆ ಕುಳಿತ ವಿದ್ಯಾರ್ಥಿನಿಯ ಹಾಲ್ ಟಿಕೆಟ್‌ ಸುಟ್ಟು ಹೋಗಿರುವ ಪ್ರಸಂಗ ನಡೆದಿದೆ.‌ ಇದರಿಂದ ಪರೀಕ್ಷೆ ಅವಕಾಶ ದೊರೆಯುತ್ತದೆಯೋ ಎನ್ನುವ ಆತಂಕದಲ್ಲಿ ವಿದ್ಯಾರ್ಥಿನಿ ಇದ್ದಾಳೆ. ಜಿಲ್ಲೆಯ ನಿಡಗುಂದಿ ತಾಲೂಕಿನ ಗೊಳಸಂಗಿ ಗ್ರಾಮದ ಪವಾಡ ಬಸವೇಶ್ವರ ದೇವಸ್ಥಾನ ಬಳಿ ನಿವಾಸಿ ಪವಿತ್ರಾ ಪುಂಡಲಿಕ ಗುಡ್ಡದ (18) ಎಂಬ ಯುವತಿ ಈ ಬಾರಿ ಗ್ರಾಮದ ಬಿ.ಎಸ್.ಪವಾರ ಪದವಿ ಪೂರ್ವ ಕಾಲೇಜ್ ನಲ್ಲಿ ವಾಣಿಜ್ಯ ವಿಭಾಗದಲ್ಲಿ ಪಿಯುಸಿ ದ್ವೀತಿಯ ವರ್ಷದ ಪರೀಕ್ಷೆ ಕಟ್ಟಿದ್ದಳು.‌ ಕಳೆದ ಶುಕ್ರವಾರ ಕಾಲೇಜ್‌ಗೆ ಹೋಗಿ ಹಾಲ್ ಟಿಕೇಟ್ ತಂದಿದ್ದಳು. ಪರೀಕ್ಷೆಗೆ ಸಿದ್ದತೆ ಮಾಡಿಕೊಂಡಿದ್ದಳು. ಆದರೆ ಮನೆಯಲ್ಲಿಟ್ಟಿದ್ದ ಹಾಲ್ ಟಿಕೇಟ್ ಸುಟ್ಟು ಭಸ್ಮಗೊಂಡು ಅಚ್ಚರಿ ಮೂಡಿಸಿದೆ.

ಮಾಡಾಳು ಪುತ್ರನ ಅಮಾನತಿಗೆ ಸೂಚನೆ ನೀಡ್ತೇವೆ: ಸಚಿವ ಮಾಧುಸ್ವಾಮಿ

ಹಾನಿಯಾದ ಮೂರು-ಮೂರು ಹಾಲ್ ಟಿಕೆಟ್‌ಗಳು ಇದೆನು ನಿಗೂಢ ಕಾಟ?: ಪವಿತ್ರ ಅಕ್ಷರಶಃ ಗೊಂದಲ ಹಾಗೂ ಆತಂಕದಲ್ಲಿದ್ದಾಳೆ. ಯಾಕಂದ್ರೆ ಇಲ್ಲಿ ಸುಟ್ಟು ಹೋಗಿರುವುದು ಒಂದು ಹಾಲ್ ಟಿಕೆಟ್ ಅಲ್ಲ.‌ ಬದಲಿಗೆ ಆಕೆ ಕಾಲೇಜಿನಿಂದ ತಂದ ಮೂರು ಹಾಲ್ ಟಿಕೆಟ್ ಪ್ರತಿಗಳು ಹಾನಿಯಾಗಿ ಹೋಗಿವೆ. ಒಂದು ಸುಟ್ಟು ಭಸ್ಮವಾದರೆ, ಇನ್ನೇರಡು ತುಂಡು ತುಂಡಾಗಿ ಮನೆಯಲ್ಲಿ ಬಿದ್ದಿವೆ. ಇದರಿಂದ ಪವಿತ್ರ ಮನೆಯಲ್ಲಿ ಆತಂಕ, ಗೊಂದಲ ಸೃಷ್ಟಿಯಾಗಿದೆ.

ಮೂರು ಬಾರಿಯು ಹಾಲ್ ಟಿಕೆಟ್ ಪ್ರತಿ ನೀಡಿದ್ದ ಆಡಳಿತ ಮಂಡಳಿ: ದ್ವೀತಿಯ ಪಿಯುಸಿ ಪರೀಕ್ಷೆ ಬರೆಯಲು ಒಂದು ಒರಿಜಿನಲ್ ಹಾಗೂ ಇನ್ನೊಂದು ಪ್ರತಿ ಹಾಲ್ ಟಿಕೆಟ್ ಬಂದಿರುತ್ವೆ. ಮೊದಲನೇಯ ಹಾಲ್ ಟಿಕೆಟ್ ತಂತಾನೇ ಭಸ್ಮವಾಗಿದೆ ಎಂದಾಗ ಪ್ರಾಂಶುಪಾಲರು ವಿದ್ಯಾರ್ಥಿನಿ ಭವಿಷ್ಯ ಹಾನಿಯಾಗದಿರಲಿ ಎಂದು ಮತ್ತೊಂದು ಪ್ರತಿ ಕೊಟ್ಟು ಕಳಿಸಿದ್ದಾರೆ. ಆದರೆ ಅದು  ಕೂಡಾ ಬುಧವಾರ ಮಧ್ಯಾಹ್ನದ ವೇಳೆ ಮನೆಯಲ್ಲಿ ಚೂರು ಚೂರು ಆಗಿ ಬಿದ್ದಿತ್ತು.‌ ಇದರಿಂದ ಆತಂಕಗೊಂಡ  ಪವಿತ್ರಾಳನ್ನ ಸಂಬಂಧಿಕರು ಸಂತೈಸಿದ್ದಾರೆ.‌ ಇಷ್ಟಾದರೂ ಛಲ ಬಿಡದ ಪವಿತ್ರಾ ಕಾಲೇಜ್ ವ್ಯವಸ್ಥಾಪಕರನ್ನು ಭೇಟಿಯಾಗಿ ನಿಜಾಂಶ ತಿಳಿದು ಹಾಲ್ ಟಿಕೆಟ್‌ನ ಮೂರನೇ ಪ್ರತಿಯನ್ನ ಪಡೆದುಕೊಂಡಿದ್ದಾಳೆ. ಆದರೆ ಅದು ಕೂಡ ಮನೆಯಲ್ಲಿ ತುಂಡು ತುಂಡಾಗಿ ಬಿದ್ದಿದೆಯಂತೆ. ಈ ವಿಷಯ ತಿಳಿದ ಮನೆಯವರು ಬೆಚ್ಚಿಬಿದ್ದಿದ್ದಾರೆ, ಗ್ರಾಮಸ್ಥರು ಗಾಬರಿಯ ಜೊತೆಗೆ ಹಲವು ಅನುಮಾನಗನ್ನ ವ್ಯಕ್ತ ಪಡೆಸಿದ್ದಾರೆ.

ಏನಿದು ವಿಚಿತ್ರ ಪ್ರಸಂಗ? ಭಯ-ಅನುಮಾನ ಸೃಷ್ಟಿಸಿದ ಘಟನೆ: ಆದರೆ ಇಂಥ ವಿಚಿತ್ರ ಅವಘಡ ಗೊಳಸಂಗಿ ಗ್ರಾಮದಲ್ಲಿ ನಡೆದಿರುವದು ಹಲವು ಅಚ್ಚರಿಗಳನ್ನ ಮೂಡಿಸಿದೆ. ಇದರ ಹಿಂದೆ ಏನಾದರೂ ನಿಗೂಢ ಶಕ್ತಿ ಅಡಗಿದಿಯಾ? ಎನ್ನುವ ಅನುಮಾನ ಗ್ರಾಮಸ್ಥರಲ್ಲಿ ಮನೆ ಮಾಡಿದೆ.‌ ಇದು ಯಾರದ್ದೂ ಕುತಂತ್ರವೋ ಇಲ್ಲ ಯುವತಿಯ ಸ್ವಂ ಕೃತ್ಯ ಎನ್ನುವ ಯಕ್ಷ ಪ್ರಶ್ನೆ ಕಾಡ ತೊಡಗಿದೆ.

ಹೆತ್ತವರನ್ನ ಕಳೆದುಕೊಂಡಿರುವ ಪವಿತ್ರಾ: ಕಳೆದ ವರ್ಷ ಪವಿತ್ರಾ ಹೆತ್ತವರನ್ನ ಕಳೆದುಕೊಂಡಿದ್ದಾರೆ.‌ ಅನಾಥವಾಗಿದ್ದ ಪವಿತ್ರಾ ಸಂಬಂಧಿಕರ ಮನೆಯಲ್ಲಿ ವಾಸವಿದ್ದಾಳೆ. ಅವರು ಸಹ ಪವಿತ್ರ ಓದಲಿ ಎಂದು ಕಾಲೇಜಿಗೆ ಅಡ್ಮಿಶನ್ ಮಾಡಿಸಿದ್ದಾರೆ. ಪರೀಕ್ಷೆ ಬರೆಯಲು ಅನುಕೂಲಗಳನ್ನ ಮಾಡಿಕೊಟ್ಟಿದ್ದಾರೆ. ಆದ್ರೆ ಮನೆಯಲ್ಲಿ ಈ ರೀತಿ ಹಾಲ್ ಟಿಕೆಟ್‌ಗಳೆ ಅಚಾನಕ್ಕಾಗಿ ಹಾನಿಯಾಗಿರೋದು ಸಂಬಂಧಿಕರಲ್ಲಿ ಅಚ್ಚರಿ ಮೂಡಿಸಿದೆ. 

ವಿಚಿತ್ರ ಘಟನೆ ಹಿಂದೆ ಡಿಪ್ರೆಶನ್, ಕುತಂತ್ರ ಅನುಮಾನ: ನಡೆದಿರುವ ಈ ಘಟನೆಯನ್ನ ಹತ್ತಾರು ಜನರು ಹಲವಾರು ರೀತಿಯಲ್ಲಿ ಚರ್ಚಿಸುತ್ತಿದ್ದಾರೆ. ಹಲವರು ಇದನ್ನ ವಿಚಿತ್ರ ಘಟನೆ, ಇದರ ಹಿಂದಿರೋದು ನಿಗೂಢ ಶಕ್ತಿ ಎನ್ತಿದ್ದರೆ, ಕೆಲವರು ಇದು ಹೆತ್ತವರನ್ನ ಕಳೆದುಕೊಂಡು ಡಿಪ್ರೆಶನ್‌ಗೆ ಒಳಗಾಗಿರುವ ಬಾಲಕಿ ಮಾಡಿರಬಹುದು ಎಂದು ಅನುಮಾನ ವ್ಯಕ್ತ ಪಡೆಸಿದ್ದಾರೆ‌‌. ಇಲ್ಲದೆ ಪವಿತ್ರಾ ಪರೀಕ್ಷೆ ಬರೆಯಬಾರದು, ಆಕೆ ಶಿಕ್ಷಣ ಪೂರ್ಣಗೊಳ್ಳಬಾರದು ಎಂದು ನಿರ್ಧಾರಿಸುವ ಯಾರೋ ದುಷ್ಟರು ಆಕೆಯ ಅರಿವಿಗೆ ಬಾರದಂತೆ ಹಾಲ್ ಟಿಕೆಟ್‌ ನಾಶ ಮಾಡ್ತಿರಬೇಕು ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ‌‌. ಇದರಲ್ಲಿ ಯಾವುದು ಸತ್ಯವೋ, ಯಾವುದು ಸುಳ್ಳೋ ಗೊತ್ತಿಲ್ಲ.

ಸಾರಿಗೆ ನೌಕರರ ವೇತನ ಸಭೆ ವಿಫಲ: ಶೇ.25ರಷ್ಟು ಹೆಚ್ಚಳಕ್ಕೆ ಪಟ್ಟು

ಕೊನೆಯಲ್ಲಿ ಪವಿತ್ರಾ ಹೇಳೋದಿಷ್ಟು: ಪರೀಕ್ಷೆ ಬರೆಯಲು ನನಗೆ ಯಾವುದೇ ಆತಂಕವಿಲ್ಲ, ಆದರೆ ಮನೆಯಲ್ಲಿಟ್ಟಿದ್ದ ಪರೀಕ್ಷಾ ಪ್ರವೇಶ ಪತ್ರ ಏಕಾಏಕಿ ಸುಟ್ಟಿದೆ. ಮತ್ತೊಂದು ಹಾಲ್ ಟಿಕೆಟ್ ತಂದರೆ ಅದು ಚೂರು ಚೂರು ಆಗಿದೆ. ಹೀಗಾಗಿ ಇದರಿಂದ ಮನನೊಂದಿದ್ದೇನೆ. ನನಗೆ ಹೇಗಾದರೂ ಮಾಡಿ ಪರೀಕ್ಷೆಗೆ ಕೂರಲು ಅವಕಾಶ ಮಾಡಿಕೊಡಿ ಎನ್ತಿದ್ದಾಳೆ.

click me!