ಉಡುಪಿ (ನ.13): ವಿಡಿ ಸಾವರ್ಕರ್ (VD Savarkar) ಸ್ವಾತಂತ್ರ್ಯ ಹೋರಾಟಗಾರ (Freedom fighter) ಅಲ್ಲ ಎಂದು ನಾವು ಹೇಳಿಲ್ಲ. ಆದರೆ ಅವರು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬ್ರಿಟಿಷರಿಗೆ (British) ಕ್ಷಮಾಪಣಾ ಪತ್ರ (Apology Letter) ಬರೆದಿದ್ದರು ಎಂದು ಮಾಜಿ ಸಚಿವ ಯುಟಿ ಖಾದರ್ (UT Khader) ಹೇಳಿದರು.
ಉಡುಪಿ (Udupi) ಜಿಲ್ಲೆಯ ಕಾಪುವಿನಲ್ಲಿಂದು ನಡೆದ ಕಾಂಗ್ರೆಸ್ (Congress) ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಚಿವ ಯುಟಿ ಖಾದರ್ ಸಾವರ್ಕರ್ ರಂತೆ ಸಾವಿರ ಜನ ಅಂಡಮಾನ್ ಜೈಲಿಗೆ (Andamon jail) ಹೋಗಿದ್ದಾರೆ ಸಾವರ್ಕರ್ ಜೈಲಿನಲ್ಲಿ 10 ಕ್ಷಮಾಪಣಾ ಪತ್ರ ಬ್ರಿಟಿಷರಿಗೆ ಬರೆದಿದ್ದರು. ನನ್ನದು ತಪ್ಪಾಗಿದೆ, ನೀವು ಹೇಳಿದಂತೆ ಕೇಳ್ತೇನೆ ಎಂದು ಹೇಳಿಕೊಂಡಿದ್ದಾರೆ. ಅಂಡಮಾನ್ ಜೈಲಿನಲ್ಲಿ ಪ್ರಾಣಾರ್ಪಣೆ ಮಾಡಿದವರು ದೇಶ ಭಕ್ತರಾ ಎಂದು ಪ್ರಶ್ನೆ ಮಾಡಿದ್ದಾರೆ.
undefined
ಬ್ರಿಟಿಷರಲ್ಲಿ ಕ್ಷಮಾಪಣ ಪತ್ರ ಬರೆದು ಹೊರಗೆ ಬಂದವರು ದೇಶಭಕ್ತರಾ? ಚರ್ಚೆ ಮಾಡೋಣ. ಬ್ರಿಟಿಷರ ಜೊತೆ ಸೇರಿಕೊಂಡವರನ್ನು ವೈಭವಿಕರಿಸಬೇಕಾ? ಬ್ರಿಟಿಷರ ವಿರುದ್ಧ ಹೋರಾಡಿ ಮರಣ ಅಪ್ಪಿದವರನ್ನು ಗೌರವಿಸಬೇಕಾ? ಕಾಂಗ್ರೆಸ್ ಈ ಪ್ರಶ್ನೆಯನ್ನಿಟ್ಟುಕೊಂಡು ಚರ್ಚೆ ಮಾಡಬೇಕು ಎಂದು ಉಡುಪಿಯಲ್ಲಿ ಮಾಜಿ ಸಚಿವ, ಶಾಸಕ ಯು.ಟಿ ಖಾದರ್ ಪ್ರಶ್ನಿಸಿದರು.
ಎಸ್ ಡಿ ಪಿ ಐ (SDPI)- ಎಂಐಎಂ (MIM) ವಿರುದ್ಧವೂ ಮಾಜಿ ಸಚಿವ ಯುಟಿ ಖಾದರ್ ವಾಗ್ದಾಳಿ ನಡೆಸಿದ್ದು, ಭಾವನಾತ್ಮಕವಾಗಿ ನೀವು ಯಾರೂ ಬಲಿಯಾಗಬೇಡಿ. ಎಸ್ ಡಿ ಪಿ ಐ , ಎಂಐಎಂ ಅನ್ನು ಆರ್ ಎಸ್ ಎಸ್ (RSS)- ಬಿಜೆಪಿ (BJP) ಬಳಸಿಕೊಳ್ಳುತ್ತಿದೆ. ಭಾವನಾತ್ಮಕವಾಗಿ ಸಮುದಾಯವನ್ನು ಬಲಿಕೊಡುವವರು ಕಾಂಗ್ರೆಸಿಗೆ (Congress) ಮಾರಕ. ಕಾಂಗ್ರೆಸ್ ಪಕ್ಷ ಅಂಬೇಡ್ಕರ್ (Ambedkar) ಸಂವಿಧಾದಡಿಯಲ್ಲಿ ಕೆಲಸ ಮಾಡುತ್ತದೆ. ಅದರ ಹೊರತಾಗಿ ಬೇರೆ ಅಜೆಂಡಾಗಳಿಲ್ಲ ಎಂದು ಖಾದರ್ ಹೇಳಿದರು.
ಅಖಂಡ ಭಾರತ ಮಾಡಿ : ನಿಮಗೆ ತಾಕತ್, ಧೈರ್ಯ ಇದ್ದರೆ ಅಖಂಡ ಭಾರತ ಮಾಡಿ ತೋರಿಸಿ. ಆಗಸ್ಟ್ 14 ಬಂದರೆ ಅಖಂಡ ಭಾರತದ ಮಾತಾಡುತ್ತೀರಿ ಬಿಜೆಪಿಗರೇ ಯುವಕರ ದಿಕ್ಕು ತಪ್ಪಿಸಬೇಡಿ ಎಂದು ಅಸಮಾಧಾನ ಹೊರ ಹಾಕಿದ ಮಾಜಿ ಸಚಿವ ಖಾದರ್ ಅಧಿಕಾರ ಇದ್ದಾಗ ಒಂದು ಇಲ್ಲದಿದ್ದಾಗ ಒಂದು ಮಾತನಾಡಬೇಡಿ ಎಂದರು.
ಅಖಂಡ ಭಾರತಕ್ಕೆ ನಾವು ಕಾಂಗ್ರೆಸ್ ನವರು ಬೆಂಬಲಿಸುತ್ತೇವೆ ಎಂದು ಈ ವೇಳೆ ಖಾದರ್ ಸವಾಲ್ ಹಾಕಿದರು.
ಸಿದ್ದರಾಮಯ್ಯ ವಿರುದ್ಧ ಪ್ರತಿಭಟಿಸುವವರು ಅಂಬೇಡ್ಕರ್ ವಾದಿಗಳಲ್ಲ :
ಸಿದ್ದರಾಮಯ್ಯನವರ (Siddaramaiah) ವಿರುದ್ದ ಪ್ರತಿಭಟಿಸೋರು ಅಂಬೇಡ್ಕರ್ (Ambedkar) ವಾದಿಗಳಲ್ಲ, ಗೋಡ್ಸೆ ವಾದಿಗಳು ಎಂದು ಮಾಜಿ ಸಚಿವ ಯು.ಟಿ.ಖಾದರ್ (UT Khader) ಹೇಳಿದರು.
ಮಂಗಳೂರಿನಲ್ಲಿಂದು (Mangaluru) ಮಾತನಾಡಿದ ಖಾದರ್ ಅಂಬೇಡ್ಕರ್ ವಾದಿಗಳಾಗಿದ್ದರೆ ಈ ಹಿಂದೆ ಸಂವಿಧಾನ ಬದಲಿಸುತ್ತೇವೆ, ಸುಡುತ್ತೇವೆ ಅಂದಾಗ ಯಾಕೆ ಪ್ರತಿಭಟಿಸಿಲ್ಲ. ಇವತ್ತು ಪ್ರತಿಭಟಿಸೋರು ಅಂಬೇಡ್ಕರ್ ವಾದಿಗಳಾಗಿದ್ದರೆ ಬಿಜೆಪಿ ಕಚೇರಿಗೆ ಹೋಗಿ ಕೇಳಲಿ. ಬಿಜೆಪಿಯವರಿಗೆ (BJP) ಬೇಕಾಗಿ ಪ್ರತಿಭಟಿಸೋ ಇವರು ಗೋಡ್ಸೆ (Goodse) ವಾದಿಗಳು ಎಂದರು.
ಇಡೀ ದೇಶದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸಮಾನ ಅನುದಾನ ಕೊಟ್ಟಿದ್ದು ಕರ್ನಾಟಕ (Karnataka). ಧರಣಿ ಕೂತವರು ನೈಜ ಕಾಳಜಿ ಇದ್ದರೆ ಬಿಜೆಪಿ ದಲಿತ ಪರ ಯೋಜನೆಗಳ ಬಗ್ಗೆ ಕೇಳಿ. ಸುಮ್ಮನೆ ರಾಜಕೀಯ (Politics) ಪ್ರೇರಿತವಾಗಿ ಗೋಡ್ಸೆ ವಾದಿಗಳ ಪ್ರತಿಭಟನೆ ನಡೆಯುತ್ತಿದೆ. ರಾಜ್ಯದಲ್ಲಿ ನಡೆದ 2 ಉಪಚುನಾವಣೆಯಲ್ಲಿ (By Election) ಬಿಜೆಪಿಗೆ ಜನರು ತಕ್ಕ ಪಾಠ ಕಲಿಸಿದ್ದಾರೆ . ಜನರು ಸರಕಾರದ ವಿರುದ್ಧ ಇದ್ದಾರೆ ಎಂಬುದನ್ನು ಹಾನಗಲ್ ಕ್ಷೇತ್ರದ ಫಲಿತಾಂಶ ಸ್ಪಷ್ಟ ಪಡಿಸಿದೆ ಎಂದರು.
ಉಪ ಚುನಾವಣೆ ಯಲ್ಲಿ (By Election) ಆಡಳಿತ ಪಕ್ಷಕ್ಕೆ ಹೆಚ್ಚಿನ ಅವಕಾಶ ಇರುತ್ತದೆ. ಆದರೆ ಉಪ ಚುನಾಣೆಯಲ್ಲಿ ಬಿಜೆಪಿಗೆ ಸೋಲಾಗಿದೆ. ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ (Price ) ಯಿಂದ ಜನರು ಬೇಸತ್ತಿದ್ದಾರೆ. ಜನ ಸಾಮಾನ್ಯರು ಬೆಲೆ ಏರಿಕೆಯಿಂದ ಬೇಸತ್ತಿದ್ದಾರೆ. ಹೋಟೆಲ್ ಗಳಲ್ಲೂ ಆಹಾರ ಮತ್ತು ತಿಂಡಿಗಳ ಬೆಲೆ ಏರಿಕೆ ಆಗುತ್ತಿದೆ. ಕೇಂದ್ರ ಸರ್ಕಾರಕ್ಕೆ ಸ್ಪಷ್ಟವಾದ ಆರ್ಥಿಕ ನೀತಿ ಇಲ್ಲದಿರುವುದೇ ಇದಕ್ಕೆ ಕಾರಣ. ಜನರು ದಂಗೆ ಏಳುವುದು ತಪ್ಪಿಸಲು ಕೇಂದ್ರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ ಮಾಡಿದೆ. ಮುಂದಿನ ಚುನಾವಣೆ ದೃಷ್ಟಿಯಲ್ಲಿಟ್ಟು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ ಮಾಡಿದೆ ಖಾದರ್ ವಾಗ್ದಾಳಿ ನಡೆಸಿದರು.