'ದೇಶದ ಅಭಿವೃದ್ಧಿ ಪ್ರಧಾನಿ ಮೋದಿಯಿಂದ ಮಾತ್ರ ಸಾಧ್ಯ'

By Kannadaprabha NewsFirst Published Nov 13, 2021, 2:12 PM IST
Highlights

*   ಮಾಜಿ ಸಚಿವರು ನಾಲಿಗೆ ಬಿಗಿಹಿಡಿದು ಮಾತನಾಡಲಿ
*   ರಾಜ್ಯದ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡುತ್ತಿರುವ ಯಡಿಯೂರಪ್ಪ- ಬೊಮ್ಮಾಯಿ
*   ಕಾಂಗ್ರೆಸ್ ನಾಯಕರು ಸುಳ್ಳು ಹೇಳುವುದರಲ್ಲಿ ನಿಸ್ಸಿಮರು
 

ಯಲಬುರ್ಗಾ(ನ.13):  ಮಾಜಿ ಸಚಿವರು ಇನ್ನೊಬ್ಬರ ಬಗ್ಗೆ ಹಗುರವಾಗಿ ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡುವುದನ್ನು ಕಲಿತುಕೊಳ್ಳಲಿ, ಎಲ್ಲರಿಗೂ ಗೌರವ ಎನ್ನುವುದು ಇರುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್(Halappa Achar)  ಹೇಳಿದ್ದಾರೆ. 

ಕುಕನೂರು ತಾಲೂಕಿನ ಮಸಬಹಂಚಿನಾಳ ಗ್ರಾಮದ ಬಿಜೆಪಿ(BJP) ಕಚೇರಿ ಆವರಣದಲ್ಲಿ ಗುರುವಾರ ನಡೆದ ಬಿಜೆಪಿ ವಿಧಾನ ಪರಿಷತ್ ಚುನಾವಣೆ(Vidhan Parishat Election) ನಿಮಿತ್ತ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿದ ಅವರು, ನನ್ನ ಬಗ್ಗೆ ಹಗುರವಾಗಿ ಮಾತನಾಡಿ, ನಂತರ ಕ್ಷೇಮಾಪಣ ಪತ್ರ ಬರೆಯುತ್ತಾರೆ. ಇತಂಹ ಕಾಂಗ್ರೆಸ್(Congress) ನಾಯಕ ಅಧಿಕಾರದ ಹತಾಸೆಯಿಂದ ಈ ರೀತಿ ಮಾತನಾಡುತ್ತಾರೆ ಎಂದರು.

ಕಾಂಗ್ರೆಸ್ ನಾಯಕರು ಸುಳ್ಳು ಹೇಳುವುದರಲ್ಲಿ ನಿಸ್ಸಿಮರು, ಯಾವುದೇ ದಾಖಲೆಗಳಿಲ್ಲದೇ ವಿನಾಕಾರಣ ಆರೋಪ ಮಾಡುವುದರಲ್ಲಿ ಮಹಾಶೂರರು. ಬುಡ ಬುಡುಕೆ ಆಡಿಸುವ ಕಾಂಗ್ರೆಸ್‌ನವರು ಉತ್ತರ ಕರ್ನಾಟಕವನ್ನು ಸತ್ಯಾನಾಶ ಮಾಡಿ ರೈತ ವಿರೋಧಿಗಳಾಗಿದ್ದಾರೆ. ಇಂತಹವರು ಪ್ರಧಾನಿ ನರೇಂದ್ರ ಮೋದಿಯವರ(Narendra Modi) ಬಗ್ಗೆ ಮಾತನಾಡುವ ಯಾವ ನೈತಿಕತೆ ಉಳಿಸಿಕೊಂಡಿಲ್ಲ. ದೇಶದ ಅಭಿವೃದ್ಧಿ ಪ್ರಧಾನಿ ನರೇಂದ್ರ ಮೋದಿಯವರಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ಜನರ ಮಧ್ಯೆ ಇರಲು ಪ್ರಾಣ ಭಯ ಏಕೆ?: ಸಚಿವ ಹಾಲಪ್ಪ ಆಚಾರ್‌

ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ(BS Yediyurappa) ಹಾಗೂ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಅವರು ರಾಜ್ಯದ ಅಭಿವೃದ್ಧಿಗೆ ಸಾಕಷ್ಟು ಕೆಲಸಗಳನ್ನು ಮಾಡುತ್ತಿದ್ದಾರೆ. ಪಕ್ಷದ ನಾಯಕರು ಗುರುತಿಸುವಂತ ಬಿಜೆಪಿ ಅಭ್ಯರ್ಥಿಗೆ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿ ಸದಸ್ಯರು ಮತ ನೀಡಿ ಬಹುಮತದಿಂದ ಗೆಲ್ಲಿಸಬೇಕು ಎಂದು ಕರೆ ನೀಡಿದರು. 

ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್, ಚಂದ್ರಶೇಖರಗೌಡ ಪಾಟೀಲ್,ಸಿ.ಎಚ್.ಪಾಟೀಲ್, ಶರಣಪ್ಪ ಬಣ್ಣದ ಬಾ ವಿ, ವೀರಣ್ಣ ಹುಬ್ಬಳ್ಳಿ, ರತನ್ ದೇಸಾಯಿ, ಕಳಕಪ್ಪ ಕಂಬಳಿ,ಯಲಬುರ್ಗಾ ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ, ಮಾರುತಿ ಗಾವರಾಳ,ಬಸವನಗೌಡ ತೊಂಡಿಹಾಳ, ಮಂಜುನಾಥ ಗಟ್ಟೆಪ್ಪನವರ್, ಅಯ್ಯ ನಗೌಡ ಕೆಂಚಮ್ಮನವರ್, ಸಂಗಪ್ಪ ಬಂ ಡಿ, ಸುಧಾಕರ ದೇಸಾಯಿ, ರಸೂಲ್‌ಸಾಬ ದಮ್ಮೂರ ಸೇರಿದಂತೆ ಬಿಜೆಪಿ ಬೆಂ ಬಲಿತ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಇದ್ದರು.

ನೀರಾವರಿ ಹೆಸರಿನಲ್ಲಿ ಹಾಲಿ, ಮಾಜಿ ಸಚಿವರ ನಡುವೆ ಹಗ್ಗ-ಜಗ್ಗಾಟ

ವಿಧಾನಸಭಾ ಚುನಾವಣೆ(Assembly Election) ಸಮೀಪಿಸುತ್ತಿದ್ದಂತೆ ಯಲಬುರ್ಗಾ(Yelburga) ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಹಾಗೂ ಮಾಜಿ ಸಚಿವರಗಳ ಬೆಂಬಲಿಗರ ಮಧ್ಯೆ ನೀರಾವರಿ ಯೋಜನೆಗಳ ಕುರಿತು ವ್ಯಾಪಕ ಚರ್ಚೆಗಳು ತಾಲೂಕಿನಾದ್ಯಂತ ಸಂಚಲನ ಮೂಡಿಸುತ್ತಿದೆ.

ಮಾಜಿ ಸಚಿವ ಬಸವರಾಜ ರಾಯರೆಡ್ಡಿ(Basavaraj Rayareddy) ಕೆರೆ ತುಂಬಿಸುವ ಯೋಜನೆ ತಂದಿದ್ದೇ ನಾನು ಎನ್ನುತ್ತಿದ್ದರೆ, ಇತ್ತ ಹಾಲಿ ಸಚಿವ ಹಾಲಪ್ಪ ಆಚಾರ್ ಕಾಮಗಾರಿಗೆ ಟೆಂಡರ್‌ ಕರೆದು ಕಾಮಗಾರಿ ಭರದಿಂದ ಸಾಗುತ್ತಿರುವುದು ತಮ್ಮ ಅವಧಿಯಲ್ಲಿ ಎಂದೇಳುತ್ತಿದ್ದು, ಒಟ್ಟಾರೆ ಮುಂಬರುವ ವಿಧಾನಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಈಗಿನಿಂದಲೇ ಹಗ್ಗಜಗ್ಗಾಟ ಆರಂಭವಾಗಿದೆ.

ರಾಯರೆಡ್ಡಿ ಆಡಿದ ಮಾತು ಜನತೆ ಇಂದಿಗೂ ಮರೆತಿಲ್ಲ: ಸಚಿವ ಆಚಾರ್‌

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಚಿವ ಹಾಲಪ್ಪ ಆಚಾರ್‌  ಕೃಷ್ಣಾ ಬೀ ಸ್ಕೀಂ ಯೋಜನೆಯ ಮೂಲಕ ಕ್ಷೇತ್ರದಲ್ಲಿ ನೀರಾವರಿ ಮಾಡುತ್ತೇನೆಂದು ಪ್ರಚಾರ ಕೈಗೊಂಡಿದ್ದರು. ಆದರೆ ಇದಕ್ಕೆ ಸಂಬಂಧಿಸಿದಂತೆ ನ್ಯಾಯಾಧಿಕರಣದಲ್ಲಿ ಅಂತಾರಾಜ್ಯ ಜಲವಿವಾದವಿದ್ದು(Water Dispute) ಈ ನೀರಾವರಿ ಯೋಜನೆ ಕಷ್ಟಸಾಧ್ಯ. ಇದರ ಬದಲು ಕೆರೆಗಳಿಗೆ ನೀರು ತುಂಬಿಸಲಾಗುವುದು ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳುತ್ತಿದ್ದಾರೆ. ಜಲವಿವಾದದ ಹಿನ್ನೆಲೆಯಲ್ಲಿ ತ್ವರಿತವಾಗಿ ಕಾರ್ಯವಾಗುವುದಿಲ್ಲ. ಆಲಮಟ್ಟಿ ಅಣೆಕಟ್ಟು(Almatti Dam) ಎತ್ತರ ಹೆಚ್ಚಿಸುವುದು, ರೈತದರ ಜಮೀನು ಭೂಸ್ವಾಧೀನ, ಹಳ್ಳಿಗಳ ಸ್ಥಳಾಂತರ, ಪರಿಹಾರ ನೀಡಿಕೆ ಇವೆಲ್ಲ ಮುಗಿದ ಬಳಿಕವೇ ಯೋಜನೆ ಕೈಗೆತ್ತಿಕೊಳ್ಳಬೇಕಾಗುತ್ತದೆ. ಆದ್ದರಿಂದ ಯೋಜನೆ ವಿಳಂಬವಾಗುತ್ತದೆ ಎನ್ನುತ್ತಾರೆ ರಾಯರಡ್ಡಿ.

ಮಾಜಿ ಸಿಎಂ ಸಿದ್ದರಾಮಮಯ್ಯನವರ(Siddaramaiah) ಸರ್ಕಾರದಲ್ಲಿ ಕೆರೆ ತುಂಬಿಸುವ ಯೋಜನೆ ಮಂಜೂರಾಗಿದೆ ಎಂದು ಮಾಜಿ ಸಚಿವ ರಾಯರಡ್ಡಿ ಅವರು ದಾಖಲೆ ಸಮೇತ ಪುಸ್ತಕ ಬಿಡುಗಡೆ ಮಾಡಿ ಕ್ಷೇತ್ರದ ಜನರ ಮನೆ ಮನೆ ಬಾಗಿಲಿಗೆ ತಲುಪಿಸಲು ಸಿದ್ಧತೆ ನಡೆಸಿದ್ದಾರೆ. ನಮ್ಮ ಸರ್ಕಾರದಲ್ಲಿ ಟೆಂಡರ್(Tender) ಕರೆದು ಕಾಮಗಾರಿ ಪ್ರಗತಿಯಲ್ಲಿದ್ದು, ಬರುವ ವರ್ಷದೊಳಗಾಗಿ ತಾಲೂಕಿನ ಎಲ್ಲ ಕೆರೆಗಳಿಗೆ ಕೃಷ್ಣೆಯ(Krishna River) ನೀರು ತುಂಬಿಸುವುದಾಗಿ ಸಚಿವ ಹಾಲಪ್ಪ ಆಚಾರ್‌ ಹೇಳುತ್ತಿದ್ದಾರೆ.
 

click me!